





ಪುತ್ತೂರು: ಸಾಲ್ಮರ ದಾರುಲ್ ಹಸನಿಯಾ ಅಕಾಡೆಮಿ ವತಿಯಿಂದ ಅಭಿನಂದನಾ ಸಮಾರಂಭ ಸಂಪ್ಯ ದಾರುಲ್ ಫಲಾಹ್ನಲ್ಲಿ ನಡೆಯಿತು. ಸಂಸ್ಥೆಯ ಉಪಾಧ್ಯಕ್ಷ ರಫೀಕ್ ಹಾಜಿ ಸುಲ್ತಾನ್ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟಿ ಸಿರಾಜುದ್ದೀನ್ ಫೈಝಿ ಬಪ್ಪಳಿಗೆ ಪ್ರಾರ್ಥಿಸಿದರು.


ಬಡಕ್ಕೋಡಿ ಜುಮಾ ಮಸೀದಿಯ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ದಾರುಲ್ ಹಸನಿಯಾ ಟ್ರಸ್ಟ್ ಸದಸ್ಯ ಉಮರ್ ಸಂಪ್ಯ ಮತ್ತು ಪರ್ಲಡ್ಕ ಜುಮಾ ಮಸೀದಿ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಟ್ರಸ್ಟ್ ಸದಸ್ಯ ಅಶ್ರಫ್ ಹಾಜಿ ಗೋಳಿಕಟ್ಟೆ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು.





ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಸನ್ ಹಾಜಿ ಸಿಟಿ ಬಝಾರ್, ಟ್ರಸ್ಟಿಗಳಾದ ಅಬ್ದುಲ್ ರಹಿಮಾನ್ ಹಾಜಿ ಬಾಳಾಯ, ಅಬ್ದುಲ್ ರಹಿಮಾನ್ ಹಾಜಿ ಆರ್.ಟಿ.ಒ, ರಿಯಾಝ್ ಇಂಜಿನಿಯರ್, ಡಾ. ಶರ್ಫರಾಝ್, ಡಿ.ಕೆ ಅಬ್ದುಲ್ ಹಮೀದ್, ಅಬ್ದುಲ್ ರಶೀದ್ ಹಾಜಿ ನೈತಾಡಿ, ಅನ್ವರ್ ಸ್ವಾದಿಕ್ ಮುಸ್ಲಿಯಾರ್ ಮೊಟ್ಟೆತ್ತಡ್ಕ, ಕೆ.ಎಂ.ಎ ಕೊಡುಂಗಾಯಿ ಫಾಝಿಲ್ ಹನೀಫಿ ಮೊದಲಾದವರು ಉಪಸ್ಥಿತರಿದ್ದರು.










