





ಸುಳ್ಯಪದವು ಶಾಖೆಯಲ್ಲಿ ಭಾವಚಿತ್ರ ಅನಾವರಣ ಮತ್ತು ಅಭಿನಂದನಾ ಕಾರ್ಯಕ್ರಮ


ಬಡಗನ್ನೂರು: ಕುಂಬ್ರ ಪ್ರಾಥಮಿಕ ಕೃಷಿ ಸಹಕಾರಿ ಸಂಘ ನಿಯಮಿತ ಇದರ ಸುವರ್ಣ ಮಹೋತ್ಸವ ಕಾರ್ಯಕ್ರಮ ಪ್ರಯುಕ್ತ ಸುಳ್ಯಪದವು ಶಾಖೆಯ ನೂತನ ಕಟ್ಟಡಕ್ಕೆ ಸ್ಥಳ ದಾನ ನೀಡಿದ ದಿ.ಅಚ್ಚು ತ ಭಟ್ ಇವರ ಭಾವಚಿತ್ರ ಅನಾವರಣ ಕಾರ್ಯಕ್ರಮ ಮತ್ತು ನೂತನ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ಸಹಕರಿಸಿದ ಸಂಘ ಸಂಸ್ಥೆಗಳಿಗೆ ಅಭಿನಂದನಾ ಕಾರ್ಯಕ್ರಮ ನ.8ರಂದು ಸುಳ್ಯಪದವು ಶಾಖೆಯಲ್ಲಿ ನಡೆಯಿತು.






ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಪ್ರಾಸ್ತಾವಿಕ ಮಾತನಾಡಿ, ಸುವರ್ಣ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಸಂಘ ವ್ಯಾಪ್ತಿಯ ಪ್ರತಿ ಗ್ರಾಮದಲ್ಲಿ ಸಮಿತಿಗಳನ್ನು ರಚನೆ ಮಾಡಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೈತ ಸಮಸ್ಯೆಗಳ ಪರಿಹಾರ ನೀಡುವ ಕ್ರಮಕೈಗೊಳ್ಳಲಾಗುವುದು. ಮುಂದಿನ ದಿನ ಸಂಘ ಬೆಳೆಯುತ್ತಾ ಅಭಿವೃದ್ಧಿಗೊಂಡು ಹೋಗಬೇಕು. ಸ್ಥಳ ದಾನವಾಗಿ ನೀಡಿದ ಕುಟುಂಬದ ಸದಸ್ಯರಿಗೆ ಅಭಿನಂದನೆಗಳು. ಅವರು ಉದಾರತೆಯಿಂದ ಸಂಘ ಸ್ಥಾಪನೆಗೊಳ್ಳಲು ಸಾಧ್ಯವಾಯಿತು. ಸುಳ್ಯ ಪದವು ಶಾಖೆಯ ಉದ್ಘಾಟನಾ ಸಂದರ್ಭದಲ್ಲಿ ಸಹಕರಿಸಿದ ಸಂಘ, ಸಂಸ್ಥೆಗಳ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಸ್ಥಳದಾನಿ ವಿಶಾಲಾಕ್ಷಿ ರವರನ್ನು ಸಂಘದ ವತಿಯಿಂದ ಶಾಲು ಹೊದಿಸಿ ಪೇಟ, ಧರಿಸಿ ಫಲಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿ, ನೂತನ ಕಟ್ಟಡದಲ್ಲಿ ಸದಸ್ಯರ ಸಹಕಾರದಿಂದ ವ್ಯವಹಾರಗಳು ರಜೆ ದಿನ ಹೊರತು ಪಡಿಸಿ ಉಳಿದ ದಿನಗಳಲ್ಲಿ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ರೈತರಿಗೆ ಬೇಕಾಗುವ ಗೊಬ್ಬರಗಳು ಬೇಡಿಕೆಯಂತೆ ರಿಯಾಯಿತಿ ದರದಲ್ಲಿ ಸರಬರಾಜುಗೊಳಿಸಲಾಗುವುದು. ಗ್ರಾಮದ ಪ್ರತಿ ಮನೆಗೆ ಸದಸ್ಯರನ್ನು ಭೇಟಿ ನೀಡಿ ಉಳಿತಾಯ ಖಾತೆ ತೆರೆಯುವಂತೆ ಅಥವಾ ಠೇವಣಿ ನೀಡುವಂತೆ ವಿನಂತಿಸಿಕೊಳ್ಳಲಾಗುವುದು. ಇದರಿಂದ ಬ್ಯಾಂಕಿಂಗ ವ್ಯವಸ್ಥೆಯನ್ನು ಉತ್ತಮಗೊಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಬೀರಮೂಲೆ ಸೂರ್ಯನಾರಾಯಣ ಭಟ್ ಮಾತನಾಡಿ, ಊರಿನವರ ಉತ್ತಮ ರೀತಿಯ ಸಹಕಾರದಿಂದ ಸಂಘ ಬೆಳೆದು ನಿಂತಿದೆ ಎಂದು ಹೇಳಿದರು. ಗ್ರಾಮ ಪಂಚಾಯತ್ ಸದಸ್ಯ ವೆಂಕಟೇಶ್ ಕೆ, ಕೆ. ನಿರ್ದೇಶಕರಾದ ಶಿವರಾಮ್ ಬೊಳ್ಳಾಡಿ, ಶ್ರೀನಿವಾಸ್ ಪ್ರಸಾದ್ ಮುಡಾಲ ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿ ಉದಯ ಕುಮಾರ್ ಪ್ರಾರ್ಥಿಸಿದರು. ಸಂಘದ ಕಾರ್ಯನಿರ್ವಹಣಾಧಿಕಾರಿ ಭವಾನಿ ಸ್ವಾಗತಿಸಿದರು. ನಿರ್ದೇಶಕ ಅಮರನಾಥ ರೈ ವಂದಿಸಿದರು. ಶಿಕ್ಷಕ ರಾಜೇಶ್ ಎಂ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಸಿಬ್ಬಂದಿಗಳಾದ ವೀಣಾ, ಭರತ್, ರಾಜ್ ಕಿರಣ್, ಶಾಂತ ಕುಮಾರ್, ವೆಂಕಪ್ಪ, ಡಿ ಹರೀಶ್, ಪ್ರೀತಿ ಸಹಕರಿಸಿದರು.









