





ವರದಿ : ಉಮಾಪ್ರಸಾದ್ ರೈ ನಡುಬೈಲು


ಪುತ್ತೂರು: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪುತ್ತೂರು ಮೂಲದ ಸುಜಿ ಕುರ್ಯ ಆಯ್ಕೆಯಾಗಿದ್ದಾರೆ.





ಇವರ ಪರಿಚಯ- ಎಸ್.ಜಿ. ಕುರ್ಯ (ಸುಬ್ರಹ್ಮಣ್ಯ ಗಣಪತಿ ಭಟ್, ಕುರ್ಯ) ಪುತ್ತೂರು ತಾಲೂಕಿನ ಕುರ್ಯ ಗ್ರಾಮದವರು.
ವಿದ್ಯಾಭ್ಯಾಸ
ಬಿ. ಕಾಂ. ಮತ್ತು ಕಂಪ್ಯೂಟರ್ ಪಿಜಿಡಿಸಿಎ, ಪತ್ರಿಕೋದ್ಯಮ ಡಿಪ್ಲೊಮಾ. ಕನ್ನಡ ಟೈಪ್ರೈಟಿಂಗ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಐದನೇ ರ್ಯಾಂಕ್ ಸಹಿತ ಇಂಗ್ಲೀಷ್ ಮತ್ತು ಹಿಂದಿ ಟೈಪ್ರೈಟಿಂಗ್ ಸೀನಿಯರ್ ಪರೀಕ್ಷೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣ
ಹವ್ಯಾಸ
ಕ್ರಿಕೆಟ್, ಶಟಲ್ ಬ್ಯಾಡ್ಮಿಂಟನ್, ಚದುರಂಗ ಹಾಗೂ ಸಾಹಿತ್ಯ ರಚನೆ, ಓದು
ಕುರಿಯ ಮಾವಿನ ಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7, ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ 8 ರಿಂದ 10, ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಪಿಯುಸಿ, ಪದವಿ.
ಪಿಯುಸಿಯಲ್ಲಿದ್ದಾಗ ಊರ ರಸ್ತೆಯ ದುರವಸ್ಥೆ, ಜನರ ಅಸಹಾಯಕತೆಯಿಂದ ಬೇಸತ್ತು ಉದಯವಾಣಿಯ ಜನತಾ ವಾಣಿಗೆ ಬರೆದ ಹಾಸ್ಯಮಯ ಪತ್ರಕ್ಕೆ ಊರವರಿಂದ ಮೆಚ್ಚುಗೆ ಜತೆಗೆ ಅಭಿವೃದ್ಧಿ ಕಂಡಿತು.
ಡುಂಡಿರಾಜರ ಹನಿಗವನಗಳಿಂದ ಪ್ರೇರಣೆ ಪಡೆದು ರಚಿಸಿದ ಹನಿಗವನ/ಚುಟುಕು ಪುತ್ತೂರಿನ ಸುದ್ದಿ ಬಿಡುಗಡೆ ದಿನಪತ್ರಿಕೆಯಲ್ಲಿ ಪ್ರಕಟ.
ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಕನ್ನಡವಿಭಾಗದ ಪ್ರೊ. ವಿ.ಬಿ. ಮೊಳೆಯಾರರ ಮಾರ್ಗದರ್ಶನವು ಚುಟುಕು, ಹಾಸ್ಯ ಲೇಖನ, ಲಲಿತ ಪ್ರಬಂಧ, ಕ್ರೀಡೆ ಹಾಗೂ ರಾಜಕೀಯ ಲೇಖನಕ್ಕೆ ಪ್ರೇರಣೆ. ಮುಂಗಾರು, ಹೊಸದಿಗಂತ, ಕನ್ನಡ ಜನಾಂತರಂಗ, ಜನವಾಹಿನಿ, ಉದಯವಾಣಿ, ತರಂಗ, ತುಷಾರ, ಮಂಗಳ, ಕರ್ಮವೀರದಲ್ಲಿ ಹನಿಗವನ, ಲೇಖನ, ಲಲಿತ ಪ್ರಬಂಧ, ಹಾಸ್ಯ ಬರಹಗಳು ಪ್ರಕಟ.
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಆರು ತಿಂಗಳ ಕಾರ್ಯನಿರ್ವಹಣೆ ಬಳಿಕ ಹೊಸದಿಗಂತ ಬೆಂಗಳೂರು, ಮಂಗಳೂರಲ್ಲಿ ಒಟ್ಟಾರೆ ಐದು ವರ್ಷಗಳ ಕಾಲ ಡಾಕ್ ಎಡಿಷನ್, ಮುಖ್ಯ ಪುಟ, ಸಾಪ್ತಾಹಿಕ ಪುಟ, ವಿಶೇಷಾಂಕ, ಪುರವಣಿ ಪುಟ ಕಟ್ಟಿ ನಿರ್ವಹಿಸಿದ್ದು, ಕಳೆದ 26 ವರ್ಷಗಳಿಂದ ವಿಜಯ ಕರ್ನಾಟಕ ಉಡುಪಿ ಪ್ರಧಾನ ವರದಿಗಾರನಾಗಿ ಕಾರ್ಯನಿರ್ವಹಣೆ.
ಪತ್ರಿಕಾರಂಗದಲ್ಲಿ ಸಲ್ಲಿಸಿದ ಸೇವೆಗಾಗಿ ಜಯಂಟ್ಸ್ ಇಂಟರ್ನ್ಯಾಷನಲ್ ಪ್ರಶಸ್ತಿ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಉಡುಪಿ ಇನ್ನರ್ ವೀಲ್ ಕ್ಲಬ್, ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ವತಿಯಿಂದ ಪತ್ರಿಕಾ ದಿನಾಚರಣೆ ಸಂದರ್ಭ ಸನ್ಮಾನ.
ಪತ್ನಿ ಗೀತಾ ಕುಮಾರಿ ಮಹೇಶ್ ಪ.ಪೂ. ಕಾಲೇಜಿನಲ್ಲಿ ಗಣಿತ ಉಪನ್ಯಾಸಕಿ, ಅವಳಿ ಪುತ್ರರಾದ ಚಿನ್ಮಯ್, ತನ್ಮಯ್ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ತೃತೀಯ ವರ್ಷದ ಕಂಪ್ಯೂಟರ್ ಸೈನ್ಸ್ ಹಾಗೂ ಇನ್ಫಾರ್ಮೇಶನ್ ಟೆಕ್ನಾಲಜಿ ವಿಷಯದಲ್ಲಿ ಎಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿದ್ದಾರೆ. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ 2007ರಿಂದ 2009ರ ತನಕ ಕಾರ್ಯನಿರ್ವಹಣೆ, 2025ರಿಂದ 2028ನೇ ಸಾಲಿಗೆ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ.








