





ಕಡಬ: ಬಿಳಿನೆಲೆ ಗ್ರಾಮದ ನೆಟ್ಟಣ ರೈಲ್ವೇ ಓವರ್ ಬ್ರಿಡ್ಜ್ ಬಳಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮೃತಪಟ್ಟ ವ್ಯಕ್ತಿಯನ್ನು ತಮಿಳುನಾಡು ಮೂಲದ ನೀಲಗಿರೀಸ್ ಇಂದ್ರಾ ನಗರ ನಿವಾಸಿ ಷಣ್ಮುಗನಾಥನ್ (65ವ.) ಎಂದು ಗುರುತಿಸಲಾಗಿದೆ.





ತಮಿಳುನಾಡಿನಿಂದ ಬಿಳಿನೆಲೆ ಗ್ರಾಮದ ವಾಲ್ತಾಜೆಯಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದ ಇವರು ಊರಿಗೆ ವಾಪಸ್ ಹೋಗದೆ ನೆಟ್ಟಣ ಪರಿಸರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ರಾತ್ರಿ ಮದ್ಯ ಸೇವಿಸಿ ಅಲ್ಲೇ ಅಂಗಡಿಯ ಬದಿಯಲ್ಲಿ ಮಲಗುತ್ತಿದ್ದರು ಎನ್ನಲಾಗಿದೆ.









