





ಆಲಂಕಾರು: ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ರವರು ಕೊಯಿಲ ಪಶು ವೈದ್ಯಕೀಯ ಕಾಲೇಜು, ಪಶುಸಂವರ್ಧನಾ ಕೇಂದ್ರ ಮತ್ತು 33 ಕೆ.ವಿ.ಎ ಕಾಮಗಾರಿ ವೀಕ್ಷಣೆ ನಡೆಸಿ ಅಧಿಕಾರಿ ವರ್ಗದವರ ಸಭೆ ನಡೆಸಿದರು.



ನಂತರ ಮಾತನಾಡಿದ ಶಾಸಕರು ಕಾಲೇಜು ಪ್ರಾರಂಭಕ್ಕೆ ಮೂಲಭೂತ ಸೌಕರ್ಯಕ್ಕೆ 23 ಕೋಟಿಯ ಅಗತ್ಯವಿದ್ದು ಈಗಾಗಲೇ ಸಚಿವರಿಗೆ ಎರಡು ಬಾರಿ ಬೇಡಿಕೆ ಸಲ್ಲಿಸಲಾಗಿದೆ. ಸಚಿವರಿಂದ ಭರವಸೆ ಸಿಕ್ಕಿದ್ದು, ಅನುದಾನ ಕೇವಲ 5 ಕೋಟಿ ರೂಪಾಯಿ ಬಿಡುಗಡೆಗೊಳಿಸಿದೆ. ಇನ್ನೂ ಉಳಿದ 18ಕೋಟಿ ರೂಪಾಯಿಗಳಿಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಇಲಾಖೆಯ ಜಾನುವಾರು ಸಂವರ್ಧನಾ ಕೇಂದ್ರದ ಭಾರತೀಯ ಪಶುವೈದ್ಯಕೀಯ ಪರಿಷತ್ತು ನಿಗದಿ ಪಡಿಸಿರುವಷ್ಟು ಜಾನುವಾರುಗಳ ಫಾರಂಗಳನ್ನು ಕಾಲೇಜಿಗೆ ಹಸ್ತಾಂತರಿಸಲು ಮನವಿ ಸಲ್ಲಿಸಲಾಗಿ ಎಂದು ತಿಳಿಸಿದರು.





ಪಶು ವೈದ್ಯಕೀಯ ಕಾಲೇಜಿನಲ್ಲಿ 25 ಬೋಧಕರ ನೇಮಕಾತಿಗೆ ಸಮಾಜಕಲ್ಯಾಣ ಇಲಾಖೆಯ ಆಯ್ತುಕರ ಕಛೇರಿಯು ಅನುಮತಿ ನೀಡಿ ಪ್ರಕ್ರಿಯೆ ಮುಗಿಸಲು ಸೂಚಿಸಿದ್ದು, ಅದಷ್ಟು ಬೇಗ ನೇಮಕಾತಿ ಮಾಡುವಂತೆ ಸಂಬಂಧಿಸಿದ ಇಲಾಖೆಯನ್ನು ಮನವಿ ಮಾಡುವುದಾಗಿ ತಿಳಿಸಿದರು. ಸಭೆಯಲ್ಲಿ ಪಶುವೈದ್ಯಕೀಯ ಕಾಲೇಜ್ ನಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಸ್ಥಳಿಯರು ಮನವಿ ಮಾಡಿದ್ದು, ಮನವಿಗೆ ಸ್ಪಂದಿಸಿದ ಶಾಸಕರು ಹೊರ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡುವ ಸಂಧರ್ಭದಲ್ಲಿ ಸ್ಥಳಿಯರನ್ನು ನೇಮಕಾತಿ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಇಲಾಖೆಯವರಿಗೆ ತಿಳಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪಶುವೈದ್ಯಕೀಯ ಮಹಾ ವಿದ್ಯಾಲಯ ಕೊಯಿಲ ಇದರ ಡಾ. ಶಿವಕುಮಾರ್, ಜಾನುವಾರು ಸಂವರ್ಧನ ಕೇಂದ್ರ ಕೊಯಿಲ ಇದರ ಉಪನಿರ್ದೆಶಕರಾದ ಡಾ.ಚಿದಾನಂದ, ಕೆ.ಬಿ ಡಾ.ಪುನೀತ್, ಡಾ. ಅಜಿತ್, ಎ.ಇ.ಇ ಸಹನಾ, ಎ.ಇ ಪ್ರಮೋದ್, ಎ.ಇ.ಇ ರಾಹುಲ್, ಕೊಯಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಸುಭಾಷ್ ಶೆಟ್ಟಿ, ಪಕ್ಷದ ಪ್ರಮುಖರಾದ ರವಿಪ್ರಸಾದ್ ಶೆಟ್ಟಿ, ಹೇಮ ಮೋಹನ್ದಾಸ್ ಶೆಟ್ಟಿ ,ಆಶೊಕ್ ಕೊಯಿಲ, ಪ್ರಕಾಶ್ ಕೆ.ರ್, ಲಕ್ಷೀನಾರಾಯಣ ರಾವ್ ಅತೂರು, ಯಧುಶ್ರೀ ಅನೆಗುಂಡಿ, ಬಾಲಕೃಷ್ಣ ಗೌಡ ಬೆಂಗದಪಡ್ಪು, ಪ್ರವೀಣ್ ರಾಮಕುಂಜ, ಜೀವನ್ ಶೆಟ್ಟಿ ಪಡ್ಪಿಪಿರೆ, ಪ್ರಸಾದ ಕಾಟೂರು ಸೇರಿದಂತೆ ಗ್ರಾ.ಪಂ ಸದಸ್ಯರಾದ ಚಂದ್ರಶೇಖರ, ಸೀತಾರಾಮ, ಕಮಲಾಕ್ಷಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.










