





ಪುತ್ತೂರು: ಗ್ರಾಮೀಣ ಪ್ರದೇಶದ ಆನಡ್ಕಕ್ಕೆ ಪ್ರತಿನಿತ್ಯ ಬೆಳಿಗ್ಗೆ 8 ಗಂಟೆಗೆ ಮತ್ತು ಸಂಜೆ 5.30ಕ್ಕೆ ತಲುಪುವ ಕೆ.ಎಸ್.ಆರ್.ಟಿಸಿ ಬಸ್ಸು ಕಳೆದ ಒಂದು ತಿಂಗಳಿಂದ ಪ್ರತಿ ಸೋಮವಾರದಂದು ಸಮಯಕ್ಕೆ ಬಾರದೆ ವಿದ್ಯಾರ್ಥಿಗಳಿಗೆ ಹಾಗೂ ಪೇಟೆಗೆ ಉದ್ಯೋಗಕ್ಕೆ ತೆರಳುವವರಿಗೆ ಕಷ್ಟವಾಗುತ್ತಿದೆ.


ಬೆಳಿಗ್ಗೆ 8 ಗಂಟೆಗೆ ಆಗಮಿಸುವ ಬಸ್ಗೆ ಕಾದು ಸುಸ್ತಾಗಿ ವಿದ್ಯಾರ್ಥಿಗಳು ಹಾಗೂ ದಿನ ನಿತ್ಯ ಪೇಟೆಗೆ ಕೆಲಸಕ್ಕೆ ಹೋಗುವವರು 3 ಕೀ. ಮೀ ಪುರುಷರಕಟ್ಟೆಯವರೆಗೆ ನಡೆದುಕೊಂಡು ಹೋಗಿ ಅಲ್ಲಿಂದ ರಿಕ್ಷಾದಲ್ಲಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಜೆ 5 ಗಂಟೆಗೆ ಹೊರಡುವ ಬಸ್ಸು ಇತ್ತೀಚಿನ ದಿನಗಳಲ್ಲಿ 5.30ರ ತನಕವಾದರೂ ಬಸ್ಸು ಬಾರದೆ ವಿದ್ಯಾರ್ಥಿಗಳಿಗೆ ಗೊಂದಲ ಸ್ಥಿತಿಯಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಮನೆ ತಲುಪುವುದು ರಾತ್ರಿಯಾಗುತ್ತದೆ. ಪ್ರತಿನಿತ್ಯ ಬಸ್ಸು ಬಾರದೆ ದಿನಕ್ಕೆ 80 ರೂ. ರಿಕ್ಷಾಕ್ಕೆ ಖರ್ಚು ಮಾಡಿ ವಿದ್ಯಾರ್ಥಿಗಳು ಶಾಲೆಯನ್ನು ತಲುಪುವ ಪರಿಸ್ಥಿತಿ ಉಂಟಾಗಿದೆ. ಆದುದರಿಂದ ಪುತ್ತೂರು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಗಮನಹರಿಸಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.














