ಒಡಿಯೂರಿನಲ್ಲಿ ದತ್ತ ಜಯಂತಿ ಮಹೋತ್ಸವ,ಶ್ರೀ ದತ್ತಕೋಟಿ ನಾಮಜಪಯಜ್ಞ, ಶ್ರೀ ಗುರುದೇವದತ್ತ ಲಕ್ಷ ದೀಪಾವಳಿ ಕಾರ್ಯಕ್ರಮ – ಪೂರ್ವಭಾವಿ ಸಭೆ

0

ಪುತ್ತೂರು: ಶ್ರೀ ಕ್ಷೇತ್ರ ಒಡಿಯೂರಿನಲ್ಲಿ ಪೂಜ್ಯ ಗುರುದೇವಾನಂದ ಸ್ವಾಮೀಜಿಯವರ ಆಶಿರ್ವಾದದೊಂದಿಗೆ 2025 ನವೆಂಬರ್‌ 28ರಿಂದ ಡಿ.4ರವರೆಗೆ ಶ್ರೀ ದತ್ತ ಜಯಂತಿ ಮಹೋತ್ಸವ,ಶ್ರೀ ದತ್ತಕೋಟಿ ನಾಮಜಪಯಜ್ಞ, ಶ್ರೀ ಗುರುದೇವದತ್ತ ಲಕ್ಷ ದೀಪಾವಳಿ ಕಾರ್ಯಕ್ರಮ ಸುಧೀರ್‌ ಗೋಂಡರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಇದರ ಪೂರಕವಾಗಿ ಪುತ್ತೂರು ಗುರುದೇವಾಸೇವಾ ಬಳಗದ ವತಿಯಿಂದ ಪೂರ್ವಭಾವಿ ಸಭೆ ನವೆಂಬರ್‌ 11ರಂದು ಶ್ರೀ ಲಕ್ಷ್ಮೀ ಹೋಟೇಲ್‌ ನಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ಅಮ್ಮಣ್ಣ ರೈ ದೀಪ ಬೆಳಗಿಸಿದರು, ಸುದೀರ್‌ ನೋಂಡ ಸ್ವಾಗತಿಸಿದರು. ಯಶವಂತ ವಿಟ್ಲ ಪ್ರಾಸ್ತಾವಿಕ ಮಾತನ್ನಾಡಿದರು.ಮಾತೆಂಶ ಭಂಡಾರಿ ಮಾಹಿತಿ ನೀಡಿದರು. ದೇವಿಪ್ರಸಾದ್‌ ಶೆಟ್ಟಿ ಶುಭಹಾರೈಸಿದರು. ತುಳುನಾಡ ರಥೋತ್ಸವ ಕಾರ್ಯಾಧ್ಯಕ್ಷ ಜಗದೀಶ್‌ ಶೆಟ್ಟಿ ಸಲಹೆ ಸೂಚನೆ ನೀಡಿದರು.ಸಭೆಯಲ್ಲಿ ಶ್ರೀ ಕ್ಷೇತ್ರ ಒಡಿಯೂರಿಗೆ ಪುತ್ತೂರು ತಾಲೂಕಿನಿಂದ ಸೇವಾ ಬಳಗದ ವತಿಯಿಂದ 100 ಲೀಟರ್‌ ನಂದಾದೀಪ ಸಮರ್ಪಿಸುವುದೆಂದು ನಿರ್ಣಯಿಸಲಾಯಿತು. ನಯನಾ ರೈ ವಂದಿಸಿ ಹರಿಣಾಕ್ಷಿ ಜೆ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಜಯಪ್ರಕಾಶ ರೈ, ವಿಶ್ವನಾಥ ಶೆಟ್ಟಿ ಸಾಗು, ಸಂತೋಷ ಕುಮಾರ್ ,ಮೋನಪ್ಪ ಪೂಜಾರಿ, ಅಂಬಿಕಾ, ರಮೇಶ್, ಸುಧಾ ಶೆಟ್ಟಿ, ದಿನಕರ ರೈ, ಭವಾನಿ, ಶಂಕರ್ ಶೆಟ್ಟಿ, ಕರುಣಾಕರ ರೈ, ಸವಿತಾ ರೈ, ದೇವರಾಣಿ, ಗೀತಾ, ಸುಬ್ರಮಣ್ಯ, ಶಶಿ, ಯಮುನ, ಪುಷ್ಪ, ಸುಜಾತ, ಸುನಂದ ರೈ, ಕುಶಲಪ್ಪ, ಪ್ರಜ್ವಲ್ ರೈ, ಸತೀಶ್ ಕಜೆ, ವತ್ಸಲಾ ಶೆಟ್ಟಿ, ಭಾರತೀ ರೈ, ಹರ್ಷಕುಮಾರ್ ,ವಿಠಲ ಪೂಜಾರಿ, ಜಗನ್ನಾಥ ಶೆಟ್ಟಿ, ಸುರೇಶ್ ಡಿ, ಹರೀಶ್, ತಾರಾನಾಥ,ನಾಗವೇಣಿ ನೋಂಡ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here