





ನೆಲ್ಯಾಡಿ: ತುಳುನಾಡ ತುಡರ್ ವಾಟ್ಸಪ್ ಗ್ರೂಪ್‌ನ ಧನಸಹಾಯದ 4ನೇ ವರ್ಷದ ಕೂಪನ ಡ್ರಾ ಹಾಗೂ ಅಶಕ್ತರಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಕಾರ್ಯಕ್ರಮ ಮುದ್ಯ ಪಾರ್ವತಿ ಶ್ರೀ ಪಂಚಲಿಂಗೇಶ್ವರ ಸಭಾಂಗಣದಲ್ಲಿ ನಡೆಯಿತು.



ಆರಂಭದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಮನೋರಂಜನಾ ಆಟೋಟ ಸ್ಪರ್ಧೆ ನಡೆಯಿತು. ಅಶಕ್ತ 11 ಮನೆಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಮಾಡಲಾಯಿತು. ನಂತರ ಪುತ್ತೂರು ಪ್ರಜ್ಞ ವಿಕಲಚೇತನ ಆಶ್ರಮ, ಸವಣೂರು ಪ್ರೇರಣ ವಿಕಲಚೇತನ ಆಶ್ರಮಕ್ಕೆ ತಂಡದ ಪದಾಧಿಕಾರಿಗಳು ಭೇಟಿ ನೀಡಿ ಕಿಟ್ ಹಸ್ತಾಂತರಿಸಿದರು. ವಿವಿಧ ಸಂಘಟನೆಯ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.















