





ಪುತ್ತೂರು: ಮಳೆ ದೂರಾಯ್ತು, ಬೆಳಗ್ಗಾದರೆ ಧರೆಗಿಳಿಯುವ ಮಂಜಿನ ನಡುವೆ ಚುಮು ಚುಮು ಚಳಿ. ಸೂರ್ಯ ಪ್ರತ್ಯಕ್ಷನಾದ ನಂತರ ಆನೆಯ ಬೆನ್ನು ಒಡೆಯುವಷ್ಟು ಬಿಸಿಲಿನ ತಾಪ ಮನುಷ್ಯರನ್ನು ಬೆವರಿನಲ್ಲಿಯೇ ಸ್ನಾನ ಮಾಡಿಸುತ್ತಿದೆ. ಒಂದಷ್ಟು ದೂರ ನಡೆಯಲೂ ನೆರಳನ್ನು ಹುಡುಕಾಡುವ ಪರಿಸ್ಥಿತಿ. ತಂಪು ಏನಾದರೂ ಕುಡಿಯಲೇ ಬೇಕೆನಿಸುವ ಈ ಬಿಸಿ ಹವಾಮಾನದ ನಡುವೆ ಪುತ್ತೂರಿನ ನೆಹರುನಗರದ ಕೃಷ್ಣ ಕಮಲ ಸಂಕೀರ್ಣದಲ್ಲಿ ಮನುಷ್ಯನ ದೇಹ ತಂಪಗಾಗಿಸುವ ’ಡ್ರೀಮ್ ಕ್ರೀಂ’ ನ.14 ರಂದು ಶುಭಾರಂಭಗೊಳ್ಳುತ್ತಿದೆ.


ಉದ್ಘಾಟನಾ ಕಾರ್ಯಕ್ರಮಕ್ಕೆ ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಎಸ್ ಜಿ ಗ್ರೂಪ್ ಆಫ್ ಕಂಪೆನಿಯ (ಬಿಂದು) ಸತ್ಯಶಂಕರ್, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ನಗರಸಭಾ ಸದಸ್ಯ ಜೀವಂಧರ್ ಜೈನ್, ಕಲ್ಲೇಗ ಕಲ್ಕುಡ ದೈವಸ್ಥಾನದ ಮುಕ್ತೇಸರ ಅಜಿತ್ ಕುಮಾರ್ ಜೈನ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಡ್ರೀಮ್ ಕ್ರೀಂಗೆ ಪ್ರವೇಶಿಸಿದರೆ ಮೊದಲು ಕಣ್ಣಿಗೆ ಬಣ್ಣಬಣ್ಣದ ಲೈಟುಗಳು ಕಾಣಸಿಗುತ್ತವೆ. ಅಲ್ಲದೆ ಮನಸ್ಸಿಗೆ ಮುದ ನೀಡುವ ಮೃದುವಾದ ಸಂಗೀತ ಕೇಳಿಸಬಹುದಾಗಿದೆ. ಇಂತಹ ವಾತಾವರಣದಲ್ಲಿ ಕುಟುಂಬಸ್ಥರು, ಸ್ನೇಹಿತರೊಂದಿಗೆ ಕುಳಿತುಕೊಂಡು ಐಸ್ ಕ್ರೀಂ, ಫ್ರೆಶ್ ಜ್ಯೂಸ್, ಪಿಜ್ಜಾ, ಸ್ಯಾಂಡ್ವಿಚ್, ಚಾಟ್ಸ್ ಮತ್ತು ವಿವಿಧ ಕೇಕ್ ಗಳನ್ನು ಸವಿಯಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.





ಸ್ನೇಹ ಬಳಗ, ಸಂಬಂಧಿಕರ ಜನ್ಮದಿನ ಅಥವಾ ಇನ್ನಿತರ ಖುಷಿಯ ಸಂದರ್ಭವನ್ನು ಕಳೆಯಲು ಅಥವಾ ಪಾರ್ಟಿ ಮಾಡಲು ಸ್ಥಳಾವಕಾಶವೂ ಇದೆ. ಕಾಲೇಜು ವಿದ್ಯಾರ್ಥಿಗಳ ಫೆರ್ವೆಲ್ ಪಾರ್ಟಿಗೂ ಬೆಸ್ಟ್ ತಾಣ ಇದಾಗಿದೆ.









