





ಪುತ್ತೂರು: ಮೆಡ್ ಕೇರ್ ಡಯಗ್ನಾಸ್ಟಿಕ್ ಸೆಂಟರ್ ತಿಂಗಳಾಡಿ ಟಿ.ಎ ಕಾಂಪ್ಲೆಕ್ಸ್ನಲ್ಲಿ ನ.14ರಂದು ಬೆಳಿಗ್ಗೆ 9.30ಕ್ಕೆ ಶುಭಾರಂಭಗೊಳ್ಳಲಿದೆ.


ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ಉದ್ಘಾಟನೆ ಮತ್ತು ದುವಾಶೀರ್ವಚನ ನೀಡಲಿದ್ದು, ತಿಂಗಳಾಡಿ ದರ್ಬೆ ಬೈತುಲ್ ರಹ್ಮಾನ್ ಮಸೀದಿಯ ಮುಹಮ್ಮದ್ ಸವಾದ್ ಅಲ್ ಹಿಕಮಿ, ಕೆದಂಬಾಡಿ ಗ್ರಾ.ಪಂ ಅಧ್ಯಕ್ಷೆ ಸುಜಾತ ಎನ್, ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಭವ್ಯ ಡಿ.ಎಸ್, ತಿಂಗಳಾಡಿ ಶ್ರೀಹರಿ ಕ್ಲಿನಿಕ್ನ ಡಾ.ಭಾಗ್ಯೇಶ್ ಕೆ, ತಿಂಗಳಾಡಿ ಟ್ರಸ್ಟ್ ಕೇರ್ ಕ್ಲಿನಿಕ್ನ ಡಾ.ಮುಹಮ್ಮದ್ ಅಲಿ, ಕೂಡುರಸ್ತೆ ಧನ್ವಂತರಿ ಕ್ಲಿನಿಕ್ನ ಡಾ.ಅಕ್ಷತಾ ವಿನಯ್ ಮೊದಲಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.





ಶುಭಾರಂಭದ ಪ್ರಯುಕ್ತ ವಿವಿಧ ಬಗೆಯ ಆರೋಗ್ಯ ತಪಾಸಣೆಗೆ 50% ಡಿಸ್ಕೌಂಟ್ ನೀಡಲಾಗಿದೆ ಎಂದು ಮೆಡ್ ಕೇರ್ ಡಯಗ್ನಾಸ್ಟಿಕ್ ಸೆಂಟರ್ನ ಅಬ್ದುಲ್ ಮಜೀದ್ ಟಿ.ಎ ತಿಳಿಸಿದ್ದಾರೆ.









