





ಪುತ್ತೂರು: ಕಬಕ ಗ್ರಾಮದ ಪೋಳ್ಯದಲ್ಲಿ ಸ್ಕೂಟರ್ನ ಹಿಂಬದಿಗೆ ಕಾರೊಂದು ಡಿಕ್ಕಿಯಾದ ಘಟನೆಗೆ ಸಂಬಂಧಿಸಿದಂತೆ ಆರೋಪಿ ಕಾರು ಚಾಲಕ ಪುತ್ತೂರು, ಕೊಡಿಪ್ಪಾಡಿ ನಿವಾಸಿ ಮಹಮ್ಮದ್ ತೌಫಿಕ್ (29) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.


ನ.11ರಂದು ಸಂಜೆ ಮಹಮ್ಮದ್ ತೌಫಿಕ್ (29) ಎಂಬಾತ ಕಾರನ್ನು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ, ಕಬಕ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ, ಪುತ್ತೂರು ಕಬಕ ಗ್ರಾಮದ, ಪೋಳ್ಯ ಎಂಬಲ್ಲಿ ಕಾರಿನ ಮುಂದೆ ತೆರಳುತ್ತಿದ್ದ ಶಶಿಕುಮಾರ್ ಎಂಬವರ ಸ್ಕೂಟರ್ ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದು, ಅಪಘಾತದ ಪರಿಣಾಮ ರಸ್ತೆಗೆ ಬಿದ್ದು, ಗಾಯಗೊಂಡ ಶಶಿಕುಮಾರ್ ರನ್ನು ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿರುತ್ತದೆ. ಈ ಬಗ್ಗೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 142/2025, ಕಲಂ: 281, 125 (b) ಬಿ.ಎನ್.ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.





ಸದ್ರಿ ಪ್ರಕರಣದ ಅಪಾದಿತ ಮಹಮ್ಮದ್ ತೌಪೀಕ್ ಅಪಘಾತ ನಡೆದ ವೇಳೆ, ಮದ್ಯಪಾನ ಮಾಡಿರುವುದು ವೈದ್ಯಕೀಯ ತಪಾಸಣೆಯ ವೇಳೆ ಧೃಢಪಟ್ಟಿರುತ್ತದೆ ಹಾಗೂ ಈ ವರ್ಷದಲ್ಲಿ ನಡೆದ ಇನ್ನೊಂದು ಅಪಘಾತ ಪ್ರಕರಣದಲ್ಲಿ ಸದ್ರಿ ಆರೋಪಿಯು ವಾಹನ ಚಾಲನೆ ನಡೆಸಿದ ಪರಿಣಾಮ ಅಪಘಾತ ನಡೆದು ವ್ಯಕ್ತಿಯೊಬ್ಬರು ಮೃತಪಟ್ಟಿರುತ್ತಾರೆ. ಈ ಹಿನ್ನೆಲೆಯಲ್ಲಿ ಅರೋಪಿಯ ವಿರುದ್ಧ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ದಾಖಲಾದ ಅ.ಕ್ರ: 142/2025 ಪ್ರಕರಣದಲ್ಲಿ, ಕಲಂ: 110 BNS ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಿ, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.










