





ಐಸ್ ಕ್ರೀಂ, ಇನ್ನಿತರ ರುಚಿ-ಸುಚಿ ಆಹಾರ ಉಣಬಡಿಸಲಿರುವ ಐಸ್ ಕ್ರೀಂ ಪಾರ್ಲರ್


ಪುತ್ತೂರು: ಒಂದೆಡೆ ಬೇಸಿಗೆಯ ಬೇಗೆ, ದೇಹ ತಣ್ಣಗಾಗಿಸುತ್ತಾ ಏನಾದರೂ ರುಚಿಕರವಾದದ್ದನ್ನು ಸವಿಯಬೇಕು ಎಂದು ಯೋಚಿಸುವವರಿಗೆ ಪುತ್ತೂರಿನ ನಗರದಲ್ಲಿರುವ ಕೃಷ್ಣ ಕಮಲ ಸಂಕೀರ್ಣದಲ್ಲಿ ಡ್ರೀಮ್ ಕ್ರೀಂ ಬಾಗಿಲು ತೆರೆದಿದೆ. ಹೌದು, ಐಸ್ ಕ್ರೀಂ, ಇನ್ನಿತರ ರುಚಿ-ಸುಚಿ ಆಹಾರ ಉಣಬಡಿಸುವ ಈ ಐಸ್ ಕ್ರೀಂ ಪಾರ್ಲರ್ ನ.14 ರಂದು ಶುಭಾರಂಭಗೊಂಡಿದೆ.





ರಿಬ್ಬನ್ ಕಟ್ ಮಾಡುವ ಮೂಲಕ ಪಾರ್ಲರ್ ಉದ್ಘಾಟಿಸಿ ಮಾತನಾಡಿದ ಕಲ್ಲೇಗ ಕಲ್ಕುಡ ದೈವಸ್ಥಾನದ ಮುಕ್ತೇಸರ ಅಜಿತ್ ಕುಮಾರ್ ಜೈನ್, ಉದ್ಯಮದ ಯಶಸ್ಸಿಗೆ ಶುಭಕೋರಿದರು.
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಯುವ ಜನತೆ ಭಿನ್ನವಾದ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಇಂತಹವರಿಗೆ ಈ ಡ್ರೀಮ್ ಕ್ರೀಂ ಶಾಪ್ ಮತ್ತು ಫ್ಯಾಮಿಲಿ ಕಾರ್ನರ್ ಉತ್ತಮ ಆಯ್ಕೆಯಾಗಿದೆ. ಈ ಭಾಗದ ಜನರು ಇಲ್ಲಿಗೆ ಭೇಟಿ ನೀಡಿ ಸುಚಿ ರುಚಿಯಾದ ಆಹಾರವನ್ನು ಸವಿಯಬೇಕು ಎಂದು ಹೇಳಿ ಉದ್ಯಮದ ಯಶಸ್ವಿಗೆ ಶುಭಕೋರಿದರು.

ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಪುತ್ತೂರಿನಲ್ಲಿ ನಗರವು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಶಾಲಾ ಕಾಲೇಜುಗಳಿದ್ದು, ಹೆಚ್ಚು ಜನ ಸಂದಣಿ ಹೊಂದಿರುವ ಪ್ರದೇಶವಾಗಿದೆ. ಇಂತಹ ಸ್ಥಳದಲ್ಲಿ ಡ್ರೀಮ್ ಕ್ರೀಂ ಪಾರ್ಲರ್ ಉದ್ಯಮ ಪ್ರಾರಂಭಿಸಲಾಗಿದ್ದು, ಉತ್ತರೋತ್ತರ ಅಭಿವೃದ್ಧಿಯಾಗಲಿ ಎಂದು ಶುಭಹಾರೈಸಿದರು.
ಎಸ್ ಎಲ್ ವಿ ಬುಕ್ ಹೌಸ್ ಮಾಲಕ ದಿವಕರ್ ದಾಸ್ ಮಾತನಾಡಿ, ಇನ್ನಷ್ಟು ಹೆಚ್ಚಿನ ಶಾಖೆಗಳನ್ನು ತೆರೆಯುವಂತಾಗಲಿ ಎಂದು ಶುಭಹಾರೈಸಿದರು.
ಪುತ್ತೂರು ಗ್ರಾಮಾಂತರ ಬಿಜೆಪಿ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಮಾತನಾಡಿ, ಜನರಿಗೆ ಉಪಯುಕ್ತವಾಗಿರುವ ಉತ್ತಮಗುಣ ಮಟ್ಟದ ಐಸ್ ಕ್ರೀಂ ಒದಗಿಸಲು ಡ್ರೀಮ್ ಕ್ರೀಂ ಪ್ರಾರಂಭಿಸಿದ್ದಾರೆ ಎಂದು ಹೇಳಿ ಶುಭಕೋರಿದರು.
ಪುತ್ತೂರು ಮಹಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯ ರಾಜರಾಮ್ ಶೆಟ್ಟಿ ಕೋಲ್ಪೆಗುತ್ತು ಮಾತನಾಡಿ, ಈ ಪಾರ್ಲರ್ ನ ಬಗ್ಗೆ ಎಲ್ಲರಿಗೂ ತಿಳಿಸಿ ಪ್ರಚಾರ ಮಾಡಬೇಕು. ಆ ಮೂಲಕ ಉದ್ಯಮಿಗಳನ್ನು ಬೆಂಬಲಿಸಬೇಕು ಎಂದರು.

ಮಾಲಕ ಗಣೇಶ್ ಅವರ ತಂದೆ ಜತ್ತಪ್ಪ ಗೌಡ ಕೈಂತಿಲ, ಮತ್ತೋರ್ವ ಮಾಲಕ ಲೋಹಿತಾಶ್ವತ್ ಕೈಂತಿಲ ಅವರ ತಾಯಿ ಮಾನಕ್ಕೆ ಅವರು ದೀಪ ಪ್ರಜ್ವಲಿಸಿದರು.
ಸಂಜೀವಿನಿ ಕ್ಲಿನಿಕ್ ನ ವೈದ್ಯ ಡಾ.ರವಿನಾರಾಯಣ, ಸಂಜೀವ ನಾಯಕ್ ಕಲ್ಲೇಗ, ಅನಿಲ್ ತೆಂಕಿಲ, ವಿ ಟಿವಿ ಮಾಲಕ ರಾಮ್ ದಾಸ್ ಶೆಟ್ಟಿ, ಪ್ರಿಂಟ್ ಪ್ಯಾಲೇಸ್ ಮಾಲಕ ಶ್ಯಾಮ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು. ರಕ್ಷಿತ್ ಸಹಕರಿಸಿದರು. ಸಂದ್ಯಾ ಗಣೇಶ್ ನಿರೂಪಿಸಿ ಸ್ವಾಗತಿಸಿ ವಂದಿಸಿದರು. ಸಂದ್ಯಾ ಲೋಹಿತಾಶ್ವತ್ ಅತಿಥಿಗಳನ್ನು ಸತ್ಕರಿಸಿದರು.










