





ಪುತ್ತೂರು: ಮೆಡ್‌ಕೇರ್ ಡಯಗ್ನಾಸ್ಟಿಕ್ ಸೆಂಟರ್ ತಿಂಗಳಾಡಿ ಟಿ.ಎ ಕಾಂಪ್ಲೆಕ್ಸ್‌ನಲ್ಲಿ ನ.14ರಂದು ಶುಭಾರಂಭಗೊಂಡಿತು. ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ದುವಾಶೀರ್ವಚನ ನೀಡಿ ಶುಭ ಹಾರೈಸಿದರು. ಬಳಿಕ ತಂಙಳ್ ಅವರು ಪ್ರಥಮ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಸಂಸ್ಥೆಯ ಕಾರ್ಯವ್ಯವಹಾರಗಳಿಗೆ ಚಾಲನೆ ನೀಡಿದರು. ಕೆದಂಬಾಡಿ ಗ್ರಾ.ಪಂ ಅಧ್ಯಕ್ಷೆ ಸುಜಾತ ಎನ್ ಅವರು ಡಯಗ್ನಾಸ್ಟಿಕ್ ಸೆಂಟರ್‌ನ್ನು ಉದ್ಘಾಟಿಸಿದರು.



ತಿಂಗಳಾಡಿ ದರ್ಬೆ ಬೈತುಲ್ ರಹ್ಮಾನ್ ಮಸೀದಿಯ ಖತೀಬ್ ಮುಹಮ್ಮದ್ ಸವಾದ್ ಅಲ್ ಹಿಕಮಿ, ತಿಂಗಳಾಡಿ ಟ್ರಸ್ಟ್ ಕೇರ್ ಕ್ಲಿನಿಕ್‌ನ ಡಾ.ಮುಹಮ್ಮದ್ ಅಲಿ, ತಿಂಗಳಾಡಿ ಪದ್ಮಶ್ರೀ ಗ್ರೂಪ್ಸ್‌ನ ಮಾಲಕ ರತ್ನಾಕರ ರೈ ಕೆದಂಬಾಡಿಗುತ್ತು, ಕೆದಂಬಾಡಿ ಗ್ರಾ.ಪಂ ಸದಸ್ಯ ಮೆಲ್ವಿನ್ ಮೊಂತೆರೋ, ಪ್ರಮುಖರಾದ ವಸಂತ ರೈ ಕೆದಂಬಾಡಿಗುತ್ತು, ಇಬ್ರಾಹಿಂ ಹಾಜಿ ದರ್ಬೆ, ನೌಶಾದ್ ತಿಂಗಳಾಡಿ, ಇಸ್ಮಾಯಿಲ್ ಯಮಾನಿ, ಸಿದ್ದೀಕ್ ಸುಲ್ತಾನ್, ಕೆ.ಎಂ ಶರೀಫ್ ಕಟ್ಟತ್ತಾರು, ಶಿಹಾಬುದ್ದೀನ್ ಕಣ್ಣೂರು, ಅಶ್ರಫ್ ದರ್ಬೆ, ಹಮೀದ್ ಟಿ.ಎಂ, ಅಯ್ಯೂಬ್ ತಿಂಗಳಾಡಿ, ಹಾರಿಸ್ ಬೋಳೋಡಿ, ರಫೀಕ್ ಟಿ.ಎಂ, ಸಯ್ಯದ್ ತ್ಯಾಗರಾಜೆ, ಸತ್ತಾರ್ ಮತ್ತಿತರರು ಉಪಸ್ಥಿತರಿದ್ದರು.






ಅನಿವಾಸಿ ಉದ್ಯಮಿ ಲತೀಫ್ ಟಿ.ಎ ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು. ಮೆಡ್‌ಕೇರ್ ಸೆಂಟರ್‌ನ ಮಾಲಕ ಮಜೀದ್ ಟಿ.ಎ ಕೃತಜ್ಞತೆ ಸಲ್ಲಿಸಿದರು. ಇಮ್ರಾನ್ ಟಿ.ಎ, ಶರೀಫ್ ಟಿ.ಎ ಸಹಕರಿಸಿದರು. ಶುಭಾರಂಭದ ಪ್ರಯುಕ್ತ ವಿವಿಧ ಬಗೆಯ ಆರೋಗ್ಯ ತಪಾಸಣೆಗೆ 50% ಡಿಸ್ಕೌಂಟ್ ನೀಡಲಾಗಿದ್ದು ಬ್ಲಡ್ ಶುಗರ್ ಟೆಸ್ಟ್, ಬ್ಲಡ್ ಕೌಂಟ್, ಲಿವರ್ ಫಂಕ್ಷನ್ ಟೆಸ್ಟ್, ಕಿಡ್ನಿ ಫಂಕ್ಷನ್ ಟೆಸ್ಟ್, ಲಿಪಿಡ್ ಪ್ರೊಫೈಲ್ ಟೆಸ್ಟ್, ಅಬ್ಸೊಲ್ಯೂಟ್ ಇಯೋಸಿನೋಫಿಲ್ ಕೌಂಟ್, ಎರಿತ್ರೋಸೈಟ್ ಸೆಡಿಮೆಂಟೇಷನ್ ರೇಟ್ ಹಾಗೂ ಯುರೈನ್ ರೊಟೀನ್ ಪರೀಕ್ಷೆಯನ್ನು ರೂ.999ಕ್ಕೆ ಹಾಗೂ ಡಯಾಬಿಟೀಸ್ ಹೆಲ್ತ್ ಚೆಕಪ್ ಪ್ಯಾಕೇಜ್‌ನಲ್ಲಿ ಫಾಸ್ಟಿಂಗ್ ಬ್ಲಡ್ ಶುಗರ್, ಪೋಸ್ಟ್ ಪ್ರಾಂಡಿಯಲ್ ಬ್ಲಡ್ ಶುಗರ್, ಕಿಡ್ನಿ ಫಂಕ್ಷನ್, ಲಿಪಿಡ್ ಪ್ರೊಫೈಲ್ ಹಾಗೂ ಎಚ್‌ಬಿಎಎಲ್‌ಸಿ ಪರೀಕ್ಷೆನಯನ್ನು ರೂ.599ಕ್ಕೆ ಮಾಡಲಾಗುವುದು. ಎಂದು ಮೆಡ್‌ಕೇರ್ ಡಯಗ್ನಾಸ್ಟಿಕ್ ಸೆಂಟರ್‌ನ ಅಬ್ದುಲ್ ಮಜೀದ್ ಟಿ.ಎ ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ 7619672247 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.










