





ಪುತ್ತೂರು: ನಗರಸಭೆ ಆಡಳಿತ ಅವಧಿ ಮುಗಿದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್ ವಿ ನ.14 ರಂದು ಅಧಿಕಾರ ಸ್ವೀಕಾರ ಮಾಡಿದ್ದಾರೆ.


ನ.2 ರಂದು ನಗರಸಭೆ ಸದಸ್ಯರ ಆಡಳಿತ ಅವಧಿ ಮುಕ್ತಾಯಯಾಗೊಂಡಿತ್ತು. ನ.14 ರಂದು ಅವರು ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿ ನಗರಸಭೆ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ನಗರಸಭೆ ಪೌರಾಯುಕ್ತೆ ವಿದ್ಯಾ ಎಂ ಕಾಳೆ ಅವರು ತಾಲೂಕು ಆಡಳಿತ ಸೌಧಕ್ಕೆ ತೆರಳಿ ಜಿಲ್ಲಾಧಿಕಾರಿಯವರಿಗೆ ಕಡತ ನೀಡಿದರು. ಜಿಲ್ಲಾಧಿಕಾರಿಯವರು ಆಡಳಿತಾಧಿಕಾರಿಯಾಗಿ ಸಹಿ ಹಾಕಿದ್ದಾರೆ. ಜಿಲ್ಲಾಧಿಕಾರಿಯವರು ಸಂಜೆ ನಗರಸಭೆ ಕಚೇರಿಗೆ ಬರುವುದಾಗಿ ಮಾಹಿತಿ ಲಭ್ಯವಾಗಿತ್ತು. ಆದರೆ ಅವರು ನಗರಸಭೆ ಕಚೇರಿಗೆ ಬಾರದೆ ತಾಲೂಕು ಆಡಳಿತ ಸೌಧದಿಂದಲೇ ಮಂಗಳೂರಿಗೆ ತೆರಳಿದರು. ನ.3 ರಂದು ಅವರು ಅಧಿಕಾರ ಪಡೆಯಬೇಕಾಗಿತ್ತು.















