





ಪುತ್ತೂರು: ಪಾಣಾಜೆಯ ಕೋಟೆ ಬಾರಿಕೆ ಮೂಲ ತರವಾಡು ಮನೆಯಲ್ಲಿ ಡಿ.27ರಿಂದ ಡಿ.29ರವರೆಗೆ ನಡೆಯಲಿರುವ ಧರ್ಮದೈವ ಧೂಮಾವತಿ ಮತ್ತು ಬಂಟ ಹಾಗೂ ಪರಿವಾರ ದೈವಗಳ ಧರ್ಮ ನೇಮದ ಆಮಂತ್ರಣ ಪತ್ರಿಕೆಯನ್ನು ನ.16ರಂದು ಬಿಡುಗಡೆ ಮಾಡಲಾಯಿತು.


ಕೋಟೆ ಬಾರಿಕೆ ಮೂಲ ತರವಾಡಿನ ಹಿರಿಯರೂ, ಅಧ್ಯಕ್ಷರೂ ಆಗಿರುವ ಕೋಟೆ ಗಣೇಶ್ ರೈ ನಾಡಾಜೆಯವರು ಕುಟುಂಬಸ್ಥರ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಜಯರಾಮ ರೈ ಮೂಡಂಬೈಲು, ಬಾಲಕೃಷ್ಣ ರೈ ಸುಬ್ರಹ್ಮಣ್ಯ, ಕೋಟೆ ಪುಷ್ಪರಾಜ ಶೆಟ್ಟಿ, ಪ್ರಮುಖರಾದ ಲಕ್ಷ್ಮೀ ನಾರಾಯಣ ರೈ ಕೆದಂಬಾಡಿ, ರಕ್ತೇಶ್ವರಿ ದೈವದ ಪಾತ್ರಿ ಚಂದ್ರ ಮಣಿಯಾಣಿ ಆರ್ಲಪದವು, ಕುಟುಂಬಸ್ಥರಾದ ಶೀನಪ್ಪ ರೈ ಸುಬ್ರಹ್ಮಣ್ಯ, ಸುಬ್ಬಯ್ಯ ರೈ ಕಡಾರು, ಲೀಲಾವತಿ ಕೆ ಶೆಟ್ಟಿ ಕೋಟೆ, ಸರಸ್ವತಿ ರೈ ಮೊಡಪ್ಪಡಿ, ಲಕ್ಷ್ಮೀಶ ರೈ ಮೂಡಂಬೈಲು, ಶಾಂತಾರಾಮ ರೈ ಸುಬ್ರಹ್ಮಣ್ಯ, ಲೋಕೇಶ್ ರೈ ಬಡ್ಡಡ್ಕ, ಲೋಹಿತ್ ರೈ ಡೆಪ್ಪಾಜೆ , ಪ್ರದೀಪ್ ರೈ ನಂದುಗುರಿ ಕಡಬ, ಮಂಜುನಾಥ ಶೆಟ್ಟಿ ಉಜಿರೆ, ಸುಕೇಶ್ ರೈ ಮೊಡಪ್ಪಾಡಿ, ಯತೀಶ್ ರೈ ಮೊಡಪ್ಪಾಡಿ, ಜಯಕರ ರೈ ಬಡೆಕ್ಕಾಯೂರು ಪಡುಮಲೆ, ಚಿತ್ರಾವತಿ ರೈ ಸುಳ್ಯ, ಭಾಗೀರಥಿ ಜಿ ರೈ ಮುಂಡೂರು, ಸುಮಿತ ರೈ ದಂಬೆಕಾನ, ಪದ್ಮಾವತಿ ರೈ ಉಜಿರೆ, ತಾರಾ ರೈ ಪಡ್ರೆ, ಶಶಿಕಲಾ ರೈ ಪಡ್ರೆ, ರಮೇಶ್ ರೈ ದೆವರಗುತ್ತು ನೆಟ್ಟಣಿಗೆ, ಸುಧಾಕರ ಪಜಿಮಣ್ಣು ಮುಂಡೂರು, ಕೌಶಿಕ್ ರೈ ದಂಪತಿಗಳು ಸುಳ್ಯ ಉಪಸ್ಥಿತರಿದ್ದರು.















