





ಕಾಣಿಯೂರು: ಕಾೖಮಣ ಗ್ರಾಮದ ಅಂಕಜಾಲು ವಿಕಲಚೇತನರಾದ ಶರವಣ ಇವರಿಗೆ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮಹಿಳಾ ಮಂಡಲದ ವತಿಯಿಂದ ದಿನಸಿ ಆಹಾರ ಸಾಮಾಗ್ರಿ ನೀಡಲಾಯಿತು. ಈ ಸಂದರ್ಭದಲ್ಲಿ ಮಹಿಳಾ ಮಂಡಲದ ಅಧ್ಯಕ್ಷೆ ಭವಾನಿ ಉಳವ, ಕಾರ್ಯದರ್ಶಿ ಲಲಿತಾ ಈಶ್ವರ, ಸದಸ್ಯರಾದ ಉಮೇಶ್ವರಿ ಅಗಳಿ, ಪ್ರಶಾಂತಿ, ಯಶೋಧ, ನಯನಾ, ತಾರಾ, ಗೌರಿ, ಜ್ಞಾನೇಶ್ವರಿ, ಶರವಣರವರ ಪತ್ನಿ ಪುಷ್ಪ ಅವರು ಉಪಸ್ಥಿತರಿದ್ದರು.












