ಈಶ್ವರಮಂಗಲ ಸಹಕಾರಿ ಬ್ಯಾಂಕಿನ ವತಿಯಿಂದ ವಿಮಾ ಸೌಲಭ್ಯ ಮೊತ್ತ ವಿತರಣೆ

0

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಈಶ್ವರಮಂಗಲ ಶಾಖೆ ಗ್ರಾಹಕರಾದ ರಾಮಚಂದ್ರ ಅವರಿಗೆ ಉಳಿತಾಯ ಖಾತೆ ಆದರಿತ ವಿಮಾ ಸೌಲಭ್ಯದ ಮೊತ್ತವನ್ನು ಶಾಖಾ ವ್ಯವಸ್ಥಾಪಕರಾದ ದಾಮೋದರ ಕೇನಾಜೆ ಇವರು ಶಾಖೆಯಲ್ಲಿ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಶಾಖಾ ಸಿಬ್ಬಂದಿ ಪ್ರಸನ್ನ ಎ.ಎಮ್ , ಮನೋಜ್‌ ಕುಮಾರ್‌ ಕೆ, ಉಮಾ ಸಿ ಚ್ ಉಪಸ್ಥಿತರಿದ್ದರು.

ಬ್ಯಾಂಕಿನಲ್ಲಿ ಉಳಿತಾಯ ಖಾತೆಯಲ್ಲಿ ನಿರಂತರವಾಗಿ Rs. 20000/-ಮೊತ್ತ ಅಂತಿಮ ಶಿಲ್ಕು ಇರುವ ಗ್ರಾಹಕರಿಗೆ ಅಪಘಾತ ಸಂಭವಿಸಿದಲ್ಲಿ ನೀಡುವ ವಿಮಾ ಯೋಜನೆ ಇದಾಗಿದ್ದು, ಗ್ರಾಹಕರಾದ ರಾಮಚಂದ್ರ ಇವರ ಮೇಲೆ ಮನೆಯ ಫ್ಯಾನ್‌ ಕಳಚಿ ಬಿದ್ದು ಗಾಯವಾಗಿದ್ದು, ಇದಕ್ಕೆ ಪುತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಮರಳಿದ್ದು ಅವರಿಗೆ ಮೊತ್ತವನ್ನು ಹಸ್ತಾಂತರ ಮಾಡಿದರು.

LEAVE A REPLY

Please enter your comment!
Please enter your name here