ವಸಂತ ಗೌಡ ಆನ ನಿಧನ

0

ರಾಮಕುಂಜ: ಗ್ರಾಮದ ಆನ ನಿವಾಸಿ, ದೈವದ ಪರಿಚಾರಕ ವಸಂತ ಗೌಡ (38ವ.)ರವರು ಅಲ್ಪಕಾಲದ ಅನಾರೋಗ್ಯದಿಂದ ನ.17ರಂದು ಬೆಳಿಗ್ಗೆ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು.


ಗಾರೆ ಕಾರ್ಮಿಕರಾಗಿದ್ದ ವಸಂತ ಗೌಡರವರು ಕೆಲ ದಿನಗಳಿಂದ ಅನಾರೋಗ್ಯಪೀಡಿತರಾಗಿದ್ದು ಕಳೆದ 10 ದಿನಗಳಿಂದ ಮಂಗಳೂರು ವೆನ್‌ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದವರು ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ.

ಇವರು ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಸಂದರ್ಭದಲ್ಲಿ ನಡೆಯುವ ದೈವದ ನೇಮೋತ್ಸವ, ಬದೆಂಜ ಮಾಡ ಶ್ರೀ ಮಹಾಕಾಳಿ ದೈವಸ್ಥಾನದಲ್ಲಿ ನಡೆಯುವ ವಾರ್ಷಿಕ ನೇಮೋತ್ಸವ ಸಹಿತ ವಿವಿಧ ಕಡೆಗಳಲ್ಲಿ ದೈವದ ಪರಿಚಾರಕರಾಗಿ ಸೇವೆ ಮಾಡುತ್ತಿದ್ದರು. ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಇವರು ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಮೃತರು ತಾಯಿ ಪರಮೇಶ್ವರಿ, ಪತ್ನಿ ಮೋಹಿನಿ, ಪುತ್ರರಾದ ಆಯುಷ್, ಆರಾಧ್ಯ ಅವರನ್ನು ಅಗಲಿದ್ದಾರೆ.


ಮೃತರ ಮನೆಗೆ ಪುತ್ತೂರು ಎವಿಜಿ ಆಂಗ್ಲಮಾಧ್ಯಮ ಶಾಲೆಯ ಸಂಚಾಲಕ ಎ.ವಿ.ನಾರಾಯಣ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಪ್ಪ ಗೌಡ ಕೆ., ರಾಮಕುಂಜ ಗ್ರಾ.ಪಂ.ಸದಸ್ಯರಾದ ಪ್ರಶಾಂತ ಆರ್.ಕೆ., ರೋಹಿಣಿ ಆನ ಮತ್ತಿತರರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here