





ಆಲಂಕಾರು: ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದಿನೇಶ ಅಮ್ಮಣ್ಣಾಯ ರವರಿಗೆ ಗಾನ ನಮನ ಮತ್ತು ನುಡಿನಮನ ಕಾರ್ಯಕ್ರಮ ನಡೆಯಿತು.


ಕರ್ನಾಟಕ ಯಕ್ಷಗಾನ ನಾಟಕ ಸಭಾ ಮಂಗಳೂರಿನ ಯಕ್ಷಗಾನ ಕಲಾವಿದರಾಗಿ ಸೇವೆ ಸಲ್ಲಿಸಿದ್ದ ಶಿವಪ್ಪ ಜೋಗಿ ಬಾಯರು ರವರು ದಿನೇಶ ಅಮ್ಮಣ್ಣಾಯರ ಬಗ್ಗೆ ನುಡಿನಮನ ಸಲ್ಲಿಸಿ ದಿನೇಶ ಅಮ್ಮಣ್ಣಾಯರವರು ಭಾವನಾತ್ಮಕವಾಗಿ ಯಕ್ಷಗಾನದ ಹಾಡನ್ನು ಹಾಡಿ ಜನಮಾನಸದಲ್ಲಿ ಪ್ರಸಿದ್ದಿ ಪಡೆದವರು ಎಂದರು.






ಭಾಗವತರಾದ ಡಿ.ಕೆ ಆಚಾರ್ಯ ರವರು ನುಡಿನಮನ ಸಲ್ಲಿಸಿ, ದಿನೇಶ ಅಮ್ಮಣ್ಣಾಯ ರವರು ನನಗೆ ಗುರುಗಳಾಗಿ ಯಕ್ಷಗಾನದ ಭಾಗವತಿಕೆಯನ್ನು ಕಲಿಸಿದವರು.ಅವರು ಮಾಡಿದ ಮಾರ್ಗದರ್ಶನದಲ್ಲೆ ಮುಂದಕ್ಕೆ ಯಕ್ಷಗಾನ ಭಾಗವತಿಕೆಯನ್ನು ಮಾಡುವುದಾಗಿ ಹೇಳಿದರು.
ಸಭಾಧ್ಯಕ್ಷತೆಯನ್ನು ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ರಾವ್ .ಕೆ ನಗ್ರಿಯವರು ವಹಿಸಿ ಮಾತನಾಡಿ, ದಿನೇಶ ಅಮ್ಮಣ್ಣಾಯ ನವರು ಶ್ರೀ ದುರ್ಗಾಂಬಾ ಕಲಾ ಸಂಗಮದಲ್ಲಿ ಬಹಳ ಯಶಸ್ವಿಯಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟವರು ಎಂದು ತಿಳಿಸಿ ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲೆಂದು ಪ್ರಾರ್ಥಿಸಿದರು.
ವೇದಿಕೆಯಲ್ಲಿ ದಿನೇಶ ಅಮ್ಮಣ್ಣಾಯ ರವರ ಪತ್ನಿ ಶ್ರೀಮತಿ ಸುಧಾ ಅಮ್ಮಣ್ಣಾಯ, ಶ್ರೀ ದುರ್ಗಾಂಬಾ ಕಲಾ ಸಂಗಮದ ಅಧ್ಯಕ್ಷರಾದ ಚಂದ್ರದೇವಾಡಿಗ ಉಪಸ್ಥಿತರಿದ್ದರು.ನಂತರ ಗಾನ ನಮನ ಕಾರ್ಯಕ್ರಮ ನಡೆಯಿತು ಭಾಗವತರಾಗಿ ಗಿರೀಶ್ ರೈ ಕಕ್ಕೆಪದವು,ಶಿವಪ್ರಸಾದ್ ಎಡಪದವು,ಡಿ.ಕೆ ಆಚಾರ್ಯ ಭಾಗವಹಿಸಿದರು. ಹಿಮ್ಮೇಳದಲ್ಲಿ ಲವಕುಮಾರ್ ಐಲ,ಚಂದ್ರಶೇಖರ ಆಚಾರ್ಯ ಗುರುವಾಯಿನಕೆರೆ,ಮೋಹನ ಕುಮಾರ್ ಶರವೂರು,ದಿವಾಕರ ಆಚಾರ್ಯ ಹಳೆನೇರೆಂಕಿ ಭಾಗವಹಿಸಿದ್ದರು,ಗಣರಾಜ್ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ದುರ್ಗಾಂಬಾ ಕಲಾ ಸಂಗಮದ ಪದಾಧಿಕಾರಿಗಳು, ಸದಸ್ಯರು ಹಾಗು ಇನ್ನೀತರರು ಸಹಕರಿಸಿದರು.ಕಾರ್ಯಕ್ರಮದಲ್ಲಿ ಭಾಗವತರಾದ ದಿ.ದಿನೇಶ ಅಮ್ಮಣ್ಣಾಯ ರವರ ಅತ್ಮಕ್ಕೆ ಸದ್ಗತಿ ದೊರೆಯಲೆಂದು ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.










