





ನೆಲ್ಯಾಡಿ: ಇಲ್ಲಿನ ಸಂತೆಕಟ್ಟೆ ಬಳಿ ಇರುವ ನೆಲ್ಯಾಡಿ ಗ್ರಾ.ಪಂ.ನ ಹಸಿಮೀನು ಮಾರಾಟದ 3 ಸ್ಟಾಲ್‌ಗಳು ಒಟ್ಟು ರೂ.5.64 ಲಕ್ಷಕ್ಕೆ ಹಾಗೂ ವಾರದ ಸಂತೆಯಲ್ಲಿ ಶುಲ್ಕ ವಸೂಲಿ ಹಕ್ಕು ರೂ.1.65 ಲಕ್ಷಕ್ಕೆ ಖಾಯಂ ಆಗಿದೆ. ಏಲಂ ಪ್ರಕ್ರಿಯೆ ನ.18ರಂದು ಗ್ರಾ.ಪಂ.ಅಧ್ಯಕ್ಷ ಯಾಕುಬ್ ಯಾನೆ ಸಲಾಂ ಬಿಲಾಲ್ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಭವನದಲ್ಲಿ ನಡೆಯಿತು.


ಹಸಿಮೀನು ಮಾರಾಟ
ನ.19,2025ರಿಂದ ನ.17,2026ರ ತನಕದ 1 ವರ್ಷದ ಅವಧಿಗೆ ಹಸಿಮೀನು ಮಾರಾಟದ ನೆಲ್ಯಾಡಿ ಸಂತೆಕಟ್ಟೆ ಬಳಿಯ ಸ್ಟಾಲ್-1 ರೂ.1.27 ಲಕ್ಷಕ್ಕೆ ಬಿನುಚಾಕೋ ಎಂಬವರಿಗೆ, ಸ್ಟಾಲ್-2 ರೂ.2.36 ಲಕ್ಷಕ್ಕೆ ಇಲ್ಯಾಸ್ ಎನ್. ಎಂಬವರಿಗೆ ಹಾಗೂ ಸ್ಟಾಲ್ ನಂ-3 ರೂ.2.01 ಲಕ್ಷಕ್ಕೆ ಬಿನುಚಾಕೋ ಎಂಬವರಿಗೆ ಖಾಯಂ ಆಗಿದೆ. ಮೂರು ಸ್ಟಾಲ್‌ಗಳು ಒಟ್ಟು 5.64 ಲಕ್ಷ ರೂ.ಗೆ ಖಾಯಂ ಆಗಿದೆ. ಮಹಮ್ಮದ್ ಹನೀಫ್, ಜಗದೀಶ್ ಮಾರ್ಲ, ಇಲ್ಯಾಸ್ ಯು., ವಿ.ಜೆ.ಮ್ಯಾಥ್ಯು, ರೈಫ್ ಕರಾವಳಿ, ಮಹಮ್ಮದ್ ಶಾಕೀರ್, ಉಸ್ಮಾನ್ ಬಿನ್ ಯೂಸುಫ್, ಅಬ್ರಹಾಂ ಕೆ.ಪಿ., ಗಣೇಶ ಪೂಜಾರಿ, ಇಸ್ಮಾಯಿಲ್ ಬಿನ್ ಮಹಮ್ಮದ್, ಶುಕೂರು, ದಿನಕರ, ಶಾಜಿ, ನಾಸಿರ್ ಬಿನ್ ಹಮೀದ್ ಅವರು ಹಸಿಮೀನು ಮಾರುಕಟ್ಟೆ ಏಲಂ ಪ್ರಕ್ರಿಯೆಯಲ್ಲಿ ಬಿಡ್ಡುದಾರರಾಗಿ ಭಾಗವಹಿಸಿದ್ದರು.





ಸಂತೆ ವಸೂಲಿ
ನ.19, 2025ರಿಂದ ನ.17,2026ರ ತನಕದ ಒಂದು ವರ್ಷದ ಅವಧಿಗೆ ವಾರದ ಸಂತೆಯಲ್ಲಿ ಶುಲ್ಕ ವಸೂಲಿ ಹಕ್ಕು ಮಹಮ್ಮದ್ ಹನೀಫ್ ಎಂಬವರಿಗೆ ರೂ. 1.65 ಲಕ್ಷಕ್ಕೆ ಖಾಯಂ ಆಗಿದೆ. ಇಲ್ಯಾಸ್ ಎನ್., ಅಬ್ಬಾಸ್ ಬಿನ್ ಇಬ್ರಾಹಿಂ, ಮಹಮ್ಮದ್ ಶಾಕೀರ್, ಬಿನು ಚಾಕೋ, ಅಬ್ರಹಾಂ ಕೆ.ಪಿ., ಗಣೇಶ ಪೂಜಾರಿ, ಶುಕೂರು, ದಿನಕರ ಬಿಡ್ಡುದಾರರಾಗಿ ಭಾಗವಹಿಸಿದ್ದರು.
ಗ್ರಾ.ಪಂ.ಉಪಾಧ್ಯಕ್ಷೆ ರೇಷ್ಮಾಶಶಿ, ಸದಸ್ಯರಾದ ಅಬ್ದುಲ್ ಜಬ್ಬಾರ್, ಪ್ರಕಾಶ್ ಕೆ. ಉಪಸ್ಥಿತರಿದ್ದರು. ಪಿಡಿಒ ಜಯರಾಜ್ ಕೆ. ಏಲಂ ಪ್ರಕ್ರಿಯೆ ನಡೆಸಿದರು. ಕಾರ್ಯದರ್ಶಿ ಭಾರತಿ ಸ್ವಾಗತಿಸಿದರು. ಹಿರಿಯ ಸಿಬ್ಬಂದಿ ಶಿವಪ್ರಸಾದ್ ವಂದಿಸಿದರು. ಇತರೇ ಸಿಬ್ಬಂದಿಗಳು ಸಹಕರಿಸಿದರು.
ಅತೀ ಹೆಚ್ಚಿನ ಮೊತ್ತಕ್ಕೆ ಏಲಂ
ಹಸಿಮೀನು ಮಾರಾಟದ ಹಕ್ಕು ಈ ಭಾರಿ ಅತೀ ಹೆಚ್ಚಿನ ಮೊತ್ತಕ್ಕೆ ಏಲಂ ಆಗಿದೆ. ಕಳೆದ ವರ್ಷ ಸ್ಟಾಲ್ 1-ರೂ.89 ಸಾವಿರಕ್ಕೆ, ಸ್ಟಾಲ್ 2- ರೂ.85 ಸಾವಿರಕ್ಕೆ ಹಾಗೂ ಸ್ಟಾಲ್ 3- ರೂ. 85 ಸಾವಿರಕ್ಕೆ ಹೀಗೆ ಒಟ್ಟು 2.59 ಲಕ್ಷಕ್ಕೆ ಏಲಂ ಆಗಿತ್ತು. ಈ ಭಾರಿ ಸ್ಟಾಲ್ 1-ರೂ.1.27 ಲಕ್ಷಕ್ಕೆ, ಸ್ಟಾಲ್ 2- ರೂ.2.36ಲಕ್ಷಕ್ಕೆ ಹಾಗೂ ಸ್ಟಾಲ್ 3-ರೂ.2.01 ಲಕ್ಷ ಹೀಗೆ ಒಟ್ಟು 5.64 ಲಕ್ಷಕ್ಕೆ ಖಾಯಂ ಆಗಿದೆ. ವಾರದ ಸಂತೆ ವಸೂಲಿ ಹಕ್ಕು ಕಳೆದ ವರ್ಷ 1.30 ಲಕ್ಷಕ್ಕೆ ಖಾಯಂ ಆಗಿತ್ತು. ಈ ಭಾರಿ 1.65 ಲಕ್ಷಕ್ಕೆ ಖಾಯಂ ಆಗಿದೆ ಎಂದು ಅಧ್ಯಕ್ಷ ಸಲಾಂ ಬಿಲಾಲ್ ಅವರು ಮಾಹಿತಿ ನೀಡಿದ್ದಾರೆ.










