





ಪುತ್ತೂರು: ಅಕ್ಷಯ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ.) ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ “ಎಲೈಟ್” ಆಂತರಿಕ ವಿನ್ಯಾಸ ಸಂಘ ಹಾಗೂ ಐಕ್ಯೂಎಸಿ ಸಹಭಾಗಿತ್ವದಲ್ಲಿ ಆಂತರಿಕ ವಿನ್ಯಾಸ ವಿಭಾಗದ ವಿದ್ಯಾರ್ಥಿಗಳಿಗೆ “ಆಧುನಿಕ ಉಪಕರಣಗಳು” ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಗಾರ ನಡೆಸಲಾಯಿತು.



ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ, ಯು-ಮನೆ ಸಂಘದ ಮಾಲಿಕರಾದ,ವಾಸ್ತುಶಿಲ್ಪಿ ಅಜೇಯಕೃಷ್ಣ ಉಪಾಂಗಲ ಅವರು ದೀಪಪ್ರಜ್ವಲನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ,ಆಧುನಿಕ ಉಪಕರಣಗಳ ಬಗೆಗೆ ಮಾಹಿತಿ, ಪ್ರಾಚೀನ ಮತ್ತು ಈಗಿನ ಆಂತರಿಕ ವಿನ್ಯಾಸ ಶೈಲಿ ,ಹೊಸ ಪ್ರವೃತಿಯ ಉಪಕರಣಗಳು ಹೇಗೆ ಬಳಕೆಯಾಗುತ್ತದೆ ಎಂಬುದರ ಬಗ್ಗೆ ವಿವರಿಸಿ ವಿದ್ಯಾರ್ಥಿಗಳಿಗೆ ಚಟುವಟಿಕೆಯ ಮೂಲಕ ಉತ್ತಮ ಕಾರ್ಯಗಾರವನ್ನು ನಡೆಸಿಕೊಟ್ಟರು.





ಈ ಕಾರ್ಯಾಗಾರದಲ್ಲಿ ಕಾಲೇಜಿನ ಆಂತರಿಕ ವಿನ್ಯಾಸ ವಿಭಾಗದ ಉಪನ್ಯಾಸಕಿ, ಎಲೈಟ್ ಸಂಘದ ಸಂಚಾಲಕರಾದ ಶ್ರದ್ಧಾ ಪ್ರಾಸ್ತಾವಿಕ ಭಾಷಣ ಮಾಡಿದರು.
ಆಂತರಿಕ ವಿನ್ಯಾಸವಿಭಾಗದ ಮುಖ್ಯಸ್ಥ ರಕ್ಷಣ ಟಿ. ಆರ್ ಕಾರ್ಯಕ್ರಮದ ವಿಚಾರವಾಗಿ ಮಾತಾಡಿದರು.
ಆಂತರಿಕ ವಿನ್ಯಾಸ ವಿಭಾಗದ ಉಪನ್ಯಾಸಕಿ ಶ್ರೀಮತಿ ಕಾವ್ಯಭಟ್ ಇವರು ಮುಖ್ಯ ಅತಿಥಿಯ ಪರಿಚಯ ಮಾಡಿದರು.ಐಕ್ಯೂಎಸಿಯ ಸಂಯೋಜಕರಾದ ಶ್ರೀಮತಿ ರಶ್ಮಿ ಉಪಸ್ಥಿತರಿದ್ದರು.
ಆಂತರಿಕ ವಿನ್ಯಾಸ ವಿಭಾಗದ ವಿದ್ಯಾರ್ಥಿಗಳಾದ ದುರ್ಗಾ ಲಕ್ಷ್ಮೀ, ನಿಶಿತ, ನಿಖಿತ ಪ್ರಾರ್ಥನೆ ಮಾಡಿದರು, ಎಲೈಟ್ ಸಂಘದ ಅಧ್ಯಕ್ಷ ಸೃಜನ್ ಅಥಿತಿಗಳನ್ನು ಸ್ವಾಗತಿಸಿದರು, ಎಲೈಟ್ ಸಂಘದ ಉಪಾಧ್ಯಕ್ಷೆಯಾದ ನಿಹಾ ವಂದಿಸಿದರು.ಸ್ಫೂರ್ತಿ ಕಾರ್ಯಕ್ರಮ ನಿರೂಪಿಸಿದಳು.










