





ಪುತ್ತೂರು: ಪಡ್ನೂರು ಗ್ರಾಮದ ದೇವಸ್ಥಾನ ಕುಂಜಾರು ಮದಗಶ್ರೀ ಜನಾರ್ದನ ದೇವಸ್ಥಾನದ ಜೀರ್ಣೋದ್ಧಾರದ ಬಗ್ಗೆ ಗ್ರಾಮಸ್ಥರ ಪೂರ್ವಭಾವಿ ಸಭೆಯು ನ.16ರಂದು ದೇವಸ್ಥಾನದಲ್ಲಿ ನಡೆಯಿತು.


ಸಭೆಯ ಅಧ್ಯಕ್ಷತೆ ವಹಿಸಿದ್ದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾರಕರೆ ವೆಂಕಟ್ರಮಣ ಭಟ್ ಮಾತನಾಡಿ, ಕ್ಷೇತ್ರದಲ್ಲಿ 1992ರಲ್ಲಿ ಅಷ್ಟಮಂಗಲ ನಡೆದು, ಜೀರ್ಣೋದ್ಧಾರಗಳು ನಡೆದು 1994ರಲ್ಲಿ ಬ್ರಹ್ಮಕಲಶ ನೆರವೇರಿತ್ತು. 2012ರಲ್ಲಿ ಪ್ರಶ್ನಾ ಚಿಂತನೆ ನಡೆಸಿ ದೇವಸ್ಥಾನದ ಸುತ್ತು ಪೌಳಿ ನಿರ್ಮಾಣಗೊಂಡು 2013ರಲ್ಲಿ ಬ್ರಹ್ಮಕಲಶ ನಡೆದಿತ್ತು. ಇದೀಗ 2024ರಲ್ಲಿ ಪ್ರಶ್ನಾ ಚಿಂತನೆ ನಡೆಸಲಾಗಿದ್ದು, ಅದರಲ್ಲಿ ಕಂಡು ಬಂದಂತೆ ನಿವೃತ್ತಿ ಕಾರ್ಯಗಳು ಪೂರ್ಣಗೊಂಡಿದೆ. ಇನ್ನು ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಿರುವ ಅಭಿವೃದ್ಧಿ ಕಾರ್ಯಗಳಾದ ದೇವರ ಗರ್ಭಗುಡಿಯ ಪುನರ್ ನಿರ್ಮಾಣ, ಜಲಕದ ಕೆರೆಯ ನವೀಕರಣ, ನಾಗನ ಕಟ್ಟೆ, ಹೊಸ ಧ್ವಜಸ್ಥಂಭ, ಹಾಗೂ ಪಂಜುರ್ಲಿ ದೈವಸ್ಥಾನದ ನಿರ್ಮಾಣ ಮುಂತಾದ ಜೀರ್ಣೋದ್ಧಾರ ಕಾಮಗಾರಿಗಳು ನಡೆಯಬೇಕಿದೆ ಎಂದು ತಿಳಿಸಿದರು.





ಜೀರ್ಣೋದ್ಧಾರ ಸಮಿತಿ ರಚನೆ
ಸಭೆಯಲ್ಲಿ ಗ್ರಾಮಸ್ಥರ ಅಭಿಪ್ರಾಯದಂತೆ ನೂತನ ಜೀರ್ಣೋದ್ಧಾರ ಸಮಿತಿಯನ್ನು ರಚಿಸಲಾಯಿತು. ಸಮಿತಿ ಅಧ್ಯಕ್ಷರಾಗಿ ಕುಂಜಾರು ನಿವಾಸಿ, ಮುಂಬಯಿ ಉದ್ಯಮಿಯಾಗಿರುವ ವಸಂತ ಸಪಲ್ಯ, ಗೌರವ ಅಧ್ಯಕ್ಷರಾಗಿ ಶಾಸಕ ಅಶೋಕ್ ಕುಮಾರ್ ರೈ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಇವರುಗಳನ್ನು ಆಯ್ಕೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿಗಳಾಗಿ ಪೂವಪ್ಪ ದೇಂತಡ್ಕ, ಮಧುಸೂದನ ಪಡ್ಡಾಯೂರು, ರೋಹನ್ ಪೂಜಾರಿ ಮಾವಿನಕಟ್ಟೆ, ಶ್ರೀಧರ ಕುಂಜಾರು, ಜೊತೆ ಕಾರ್ಯದರ್ಶಿಗಳಾಗಿ ಉಮೇಶ್ ಬಂಗೇರ ಕುಂಜಾರು, ಯಶವಂತ ಗೌಡ ಮತಾವು, ಯಶೋಧರ ಕುಂಜಾರು, ಗಿರಿಧರ ಪಂಜಿಗುಡ್ಡೆ, ಹರೀಶ್ ನಾಯ್ಕ್ ಅಜೇಯನಗರ, ಕೋಶಾಧಿಕಾರಿಗಳಾಗಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹಾರಕರೆ ವೆಂಕಟ್ರಮಣ ಭಟ್, ಸದಸ್ಯ ಮನೋಹರ ಆರ್ವಾರ, ಉಪಾಧ್ಯಕ್ಷರುಗಳಾಗಿ ಈಶ್ವರ ಪ್ರಸಾದ್ ಬನಾರಿ, ಬಾಲಕೃಷ್ಣ ಜೋಯಿಸ ಯರ್ಮುಂಜ, ಬಾಲಕೃಷ್ಣ ನಾಕ್ ಮಾಲ್ತೊಟ್ಟು, ಮಹೇಶ್ ಮುಂಡಾಜೆ, ತಿಮ್ಮಪ್ಪ ಪಡ್ನೂರು, ಸಂಕಪ್ಪ ಗೌಡ ಕುಂಬಾಡಿ, ಶ್ರೀನಿವಾಸ ಪೆರ್ವೊಡಿ, ಮಂಜುನಾಥ ರೈ ವಕೀಲರು, ಬಾಬು ಮುಗೇರ ಕೊಡಂಗೆ, ಶೀನಪ್ಪ ಪೂಜಾರಿ ಮಾವಿನಕಟ್ಟೆ, ಹರಿಶ್ಚಂದ್ರ ಗೌಡ ಮೂವಪ್ಪು, ರಮೇಶ್ಚಂದ್ರ ನಾಯ್ಕ್ ಜಮಾದಿಪಲ್ಕೆ, ಪುಷ್ಪ ದೇಂತಡ್ಕ, ರಮಣಿ ಡಿ ಗಾಣಿಗ, ಕುಸುಮ ಯರ್ಮುಂಜ, ಗೌರವ ಸಲಹೆಗಾರರಾಗಿ ಭರತ್ ಕುಮಾರ್ ಆರಿಗ ಪಟ್ಟೆಗುತ್ತು, ಜನಾರ್ದನ ಭಟ್ ಸೇಡಿಯಾಪು, ಕೆ. ಕೃಷ್ಣರಾವ್ ಕುಂಜಾರು, ಸೀತಾರಾಮ್ ಭಟ್ ಪಂಜಿಗುಡ್ಡೆ, ನಾರಾಯಣ ಭಟ್ ಹಾರಕರೆ, ಜೀವಂಧರ್ ಜೈನ್ ನೆಲಪ್ಪಾಲು, ವಾಸು ಪೂಜಾರಿ ಕೊಡಂಗೆ ಗುತ್ತು, ಮಹೇಶ್ ಪುಂಜತ್ತೋಡಿ, ಕೆ. ಟಿ ಮುರಳಿ ರೆಂಜಾಳ, ವಿಜಯಕುಮಾರ್ ಪುಷ್ಪಗಿರಿ, ವಿಜಯನಾರಾಯಣ ಕುಂಬಾಡಿ, ಲೋಕೋಪಯೋಗಿ ಇಲಖೆ ಸಹಾಯಕ ಇಂಜಿನಿಯರ್ ಪ್ರಮೋದ್ ಕುಮಾರ್, ವಿಶ್ವನಾಥ ಗೌಡ ಪಟ್ಟೆ, ಗುರುರಾಜ್ ಪಡೀಲು, ವಿಜಯ ಕುಮಾರಿ ಶೆಣೈ ರಾಮನಗರ, ರಾಧಾ ಸಿ.ಮಯ್ಯ ಬಾಲಕೃಷ್ಣ ಗೌಡ ಮೂವಪ್ಪು, ಪರಮೇಶ್ವರ ಶರ್ಮ, ಶಿವರಾಮ ನಾಕ್ ದೇಂತಡ್ಕ, ನೀತೇಶ್ ನೆಲಪ್ಪಾಲು, ಜ್ಯೋತಿ ದೇಮೇರು, ರವೀಂದ್ರ ರೈ ದಕ್ಷ ಕನ್ಸ್ಟ್ರಕ್ಷನ್ ವಿದ್ಯಾನಗರ, ಶ್ರೀಕಾಂತ್ ಪಂಜಿಗುಡ್ಡೆ, ಪದ್ಮನಾಭ ಭಟ್ ಎಡಕ್ಕಾನ, ಪರಮೇಶ್ವರ್ ನಾಯ್ಕ್, ಆಯ್ಕೆ ಮಾಡಲಾಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಧಾಕೃಷ್ಣ ಕುಂಜಾರು, ರೋಹಣ್ ಪೂಜಾರಿ, ಸತ್ಯನಾರಾಯಣ ಕುಂಜಾರು, ಶೋಭಾ ಪೊಯ್ಯೆ, ಬಾಳಪ್ಪ ನಾಯ್ಕ ದೇಮೆರು ಹಾಗೂ ಅರ್ಚಕ ಶ್ರೀಕಾಂತ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವ್ಯವಸ್ಥಾಪನಾ ಸಮಿತಿ ಸದಸ್ಯ ಮನೋಹರ್ ಸ್ವಾಗತಿಸಿದರು. ಮಾಜಿ ಸದಸ್ಯ ಮಧುಸೂದನ್ ಪಡ್ಡಾಯೂರು ವಂದಿಸಿದರು. ನೂರಾರು ಮಂದಿ ಭಕ್ತಾದಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ರೂ.2.50ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ
ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ದೇವಸ್ಥಾನದಲ್ಲಿ ದೇವರ ಗರ್ಭ ಗುಡಿ, ನಮಸ್ಕಾರ ಮಂಟಪ, ನಾಗನ ಸಾನಿಧ್ಯಗಳ ಪುನರ್ ನಿರ್ಮಾಣವಾಗಬೇಕಿದೆ. ಜೊತೆಗೆ ದೇವರಿಗೆ ಜಲಕದ ಕೆರೆ, ಧ್ವಜಸ್ಥಂಭ(ಕೊಡಿಮರ), ಪಂಜುರ್ಲಿ ದೈವಸ್ಥಾನ, ಅರ್ಚಕರ ಮನೆ ನಿರ್ಮಾಣ ಸೇರಿದಂತೆ ಅಂದಾಜು ಸುಮಾರು ರೂ.2.50ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯಗಳು ನಡೆಯಲಿದೆ. ವಾಸ್ತು ಶಿಲ್ಪಿ ಪ್ರಸಾದ್ ಮುನಿಯಂಗಲ ಅವರ ವಾಸ್ತು ಶಿಲ್ಪದಂತೆ ಜೀರ್ಣೋದ್ಧಾರ ಕಾಮಗಾರಿಗಳು ನಡೆಯಲಿದೆ.
ಹಾರಕರೆ ವೆಂಕಟ್ರಮಣ ಭಟ್, ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ










