





ಪುತ್ತೂರು: ಪ್ರತಿಷ್ಠಿತ ಅಂತರ್ರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋಗೆ ಮುಂದಿನ ಐದು ವರ್ಷಗಳ ಅವಧಿಯ ಆಡಳಿತ ಮಂಡಳಿಯ ಒಟ್ಟು 19 ನಿರ್ದೇಶಕ ಸ್ಥಾನಗಳ ಪೈಕಿ 13 ಸ್ಥಾನಗಳಿಗೆ ಸಹಕಾರ ಭಾರತಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 6 ಸ್ಥಾನಗಳಿಗೆ ನ.23ರಂದು ಚುನಾವಣೆ ನಡೆಯಲಿದ್ದು ಸಹಕಾರ ಭಾರತಿಯ 6 ಮತ್ತು ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.


‘ಕ್ಯಾಂಪ್ಕೋ ಉಳಿಯಬೇಕು ಮತ್ತು ಆರೋಗ್ಯ ಪೂರ್ಣವಾಗಿ ಬೆಳೆಯಬೇಕೆಂಬ ನಿಟ್ಟಿನಲ್ಲಿ ಉಳಿದ ಆರು ಸ್ಥಾನಗಳಲ್ಲಿ 8 ಅಭ್ಯರ್ಥಿಗಳ ಪೈಕಿ ನಮ್ಮ ಇಬ್ಬರು ಸ್ವತಂತ್ರ ಅಭ್ಯರ್ಥಿಗಳಾದ ಎಂ.ಜಿ ಸತ್ಯನಾರಾಯಣ ಮತ್ತು ರಾಮಪ್ರತೀಕ್ ಕೆ ಅವರನ್ನು ಗೆಲ್ಲಿಸುವಂತೆ ಜನಸಂಘದ ಕಾಲದಿಂದಲೂ ಸಕ್ರೀಯರಾಗಿದ್ದ ವಿಧಾನಪರಿಷತ್ ಮಾಜಿ ಸದಸ್ಯ ಅಣ್ಣ ವಿನಯಚಂದ್ರ ಅವರು ಪತ್ರಿಕಾಗೋಷ್ಟಿಯಲ್ಲಿ ಮನವಿ ಮಾಡಿದ್ದಾರೆ.





ಕ್ಯಾಂಪ್ಕೋ ಸ್ಥಾಪಕ ವಾರಣಾಸಿ ಸುಬ್ರಾಯ ಭಟ್ ಅವರೊಂದಿಗೆ ಆರಂಭದಲ್ಲಿ ಒಡನಾಡಿನಾಗಿದ್ದ ಅಭ್ಯರ್ಥಿ ಎಂ.ಜಿ ಸತ್ಯನಾರಾಯಣ ಅವರು ಕ್ಯಾಂಪ್ಕೋ ಮಹಾಸಭೆಯಲ್ಲಿ ಬರವಣಿಗೆಯ ಮೂಲಕ ಪ್ರಶ್ನೆ ಹಾಕುತ್ತಿದ್ದರು. ಕುಮ್ಕಿ ಹೋರಾಟಗಾರರಾಗಿದ್ದಾರೆ. ಅದೇ ರೀತಿ ಇನ್ನೋರ್ವ ಅಭ್ಯರ್ಥಿ ವೃತ್ತಿಪರ ಯೋಚನೆ ಮಾಡುವವರು ಇವರಿಬ್ಬರನ್ನು ಚುನಾವಣೆಯಲ್ಲಿ ಗೆಲ್ಲಿಸಬೇಕೆಂದ ಅವರು ಇವರಿಬ್ಬರು ಸುಬ್ರಾಯ ಭಟ್ ಅವರ ಕನಸು ಏನಿತ್ತೋ ಅದಕ್ಕೆ ಪೂರಕ ವಾತಾವರಣ ನಿರ್ಮಾಣ ಮಾಡಲಿದ್ದಾರೆ. ಇವರು ಪರಿವಾರದ ಹೊರಗೆ ಇಲ್ಲ. ಪರಿವಾರದ ಒಳಗೆ ಇರುವವರು. ಒಟ್ಟಿನಲ್ಲಿ ನಮಗೆ ಕ್ಯಾಂಪ್ಕೋ ಉಳಿಯಬೇಕು ಮಾತ್ರವಲ್ಲ ಆರೋಗ್ಯ ಪೂರ್ವವಾಗಿ ಬೆಳೆಯಬೇಕೆಂದು ಅವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾಕರಾಗಿದ್ದ ಅಡಿಕೆ ಬೆಳೆಗಾರ ಮೂಲಚಂದ್ರ, ಅಡಿಕೆ ಕೃಷಿಕ ಸುಬ್ರಾಯ, ರೈತ ಸಂಘದ ಮುಖಂಡ ಶ್ರೀಧರ್ ಶೆಟ್ಟಿ ಬೈಲುಗುತ್ತು ಉಪಸ್ಥಿತರಿದ್ದರು.







