





ಕಡಬ: ಮೇ.1ರಂದು ಮಂಗಳೂರಿನಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಖಂಡಿಸಿ ಮೇ.2ರಂದು ಕಡಬದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಕಡಬ ಪೇಟೆಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರು, ಈ ಸಂದರ್ಭದಲ್ಲಿ 19 ಮಂದಿಯ ವಿರುದ್ದ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ 19 ಆರೋಪಿಗಳಿಗೆ ನ.22ರಂದು ನ್ಯಾಯಾಲಯವು ಜಾಮೀನು ಮಂಜೂರುಗೊಳಿಸಿದೆ.


ಈ ಪ್ರಕರಣದಲ್ಲಿ ಹಿಂದೂ ಮುಖಂಡರಾದ ಪ್ರಮೋದ್ ರೈ, ತಿಲಕ್ ರೈ, ದಯಾನಂದ ಉಂಡಿಲ, ಅಶೋಕ್ ಕುಮಾರ್ ಪಿ. ರವಿರಾಜ್ ಶೆಟ್ಟಿ, ದೇವಿಪ್ರಸಾದ್ ರೈ, ಉಮೇಶ್ ಬಂಗೇರ, ಶ್ರೀಕೃಷ್ಣ ಎಂ.ಆರ್. ಅಜಿತ್ ರೈ ಆರ್ತಿಲ, ಸತೀಶ್ ಎರ್ಕ, ಮೋನಪ್ಪ ಕೆರೆಕೋಡಿ, ರಾಜ್ ಕುಮಾರ್ ಶೆಟ್ಟಿ, ತೀರ್ಥೇಶ್, ತುಳಸಿಧರ, ವಿಜೇಶ್ ರೈ, ಪ್ರಮೀಳಾ ಲೋಕೇಶ್, ನಿತೇಶ್ ಏನಜೆ, ಪ್ರೇಮಚಂದ್ರ ಅಜ್ಜರಮೂಲೆ, ರಾಧಾಕೃಷ್ಣ ಕೋಲ್ಪೆ ಇವರುಗಳ ವಿರುದ್ದ ಪ್ರಕರಣ ದಾಖಲಾಗಿತ್ತು, ಈ ಹಿನ್ನಲೆಯಲ್ಲಿ ಎಲ್ಲಾ 19 ಮಂದಿ ಆರೋಪಿತರು ಇಂದು ಪುತ್ತೂರು ನ್ಯಾಯಾಲಯಕ್ಕೆ ಹಾಜರಾಗಿದ್ದು, ನ್ಯಾಯಾಲಯವು ಜಾಮೀನು ಮಂಜೂರುಗೊಳಿಸಿದೆ, ನ್ಯಾಯವಾದಿ ಅಶ್ವಿತ್ ಖಂಡಿಗ ಆರೋಪಿಗಳ ಪರವಾಗಿ ವಾದಿಸಿದ್ದರು.















