ಸಹ್ಯಾದ್ರಿ ಕಾಲೇಜಿನ ಸಿನೆರ್ಜಿ – 2025 ವಿಜ್ಞಾನ ಮೇಳದಲ್ಲಿ ಮೆಚ್ಚುಗೆ ಪಡೆದ ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳ ಯೋಜನೆ

0

ನಿಡ್ಪಳ್ಳಿ: ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನ.6 ರಿಂದ 8 ರವರೆಗೆ ನಡೆದ ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್-2025 ರಾಜ್ಯಮಟ್ಟದ ವಿಜ್ಞಾನ ಮೇಳದಲ್ಲಿ  ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲೆಯ 15 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿದ್ಯಾರ್ಥಿಗಳಾದ ಗಗನ್, ಲೋಹಿತ, ಸುಶಾಂತ್, ಅಕ್ಷಯ್ ಇವರು SPARSH ( Smart glove for Paralysed persons) ಯೋಜನೆ ಮತ್ತು ಮರಿಯಮ್ಮ ಆಫ್ನ, ಜಸ್ಮಿತ, ಮೋಕ್ಷಿತ , ಸಹನ ಇವರು Medivators(Novabed lift) ಹಾಗೂ ತೇಜಸ್, ಅನ್ವಿತ್  ತ್ರಿಶಾಲ್, ತ್ರಿಶಾಂತ್ ಇವರು HARVEST(fruit plucker)ಮತ್ತು ಶ್ರೇಯ, ಹಿತಶ್ರೀ ಪವಿತ್ರ,-  VEERANGNA (Women safety watch) ಎಂಬ ಯೋಜನೆಗಳನ್ನು ತಯಾರಿಸಿ ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ.

ವಿದ್ಯಾರ್ಥಿಗಳನ್ನು ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಮಾಧವ ಪೂಜಾರಿ ಮತ್ತು ಎಲ್ಲಾ ಸದಸ್ಯರು, ಶಾಲಾ ಮುಖ್ಯ ಗುರು ವಿಜಯಕುಮಾರ್. ಎಂ ಹಾಗೂ ಎಲ್ಲಾ ಶಿಕ್ಷಕ ವರ್ಗದವರು ಅಭಿನಂದಿಸಿದ್ದಾರೆ. ಈ ಯೋಜನೆಯನ್ನು ತಯಾರಿಸಲು ವಿದ್ಯಾರ್ಥಿಗಳಿಗೆ ವಿಜ್ಞಾನ ಶಿಕ್ಷಕಿ ಸಿಂಧು .ವಿ. ಕೆ .ಇವರು ಮಾರ್ಗದರ್ಶನ ನೀಡಿರುತ್ತಾರೆ.

LEAVE A REPLY

Please enter your comment!
Please enter your name here