





ಪುತ್ತೂರು: ಪುತ್ತೂರು ಅಬಕಾರಿ ಉಪವಿಭಾಗದಲ್ಲಿ ಎ.ಎಸ್.ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರೇಮಾನಂದ ಅವರು ಎಸ್.ಐ ಆಗಿ ಪದೋನ್ನತಿ ಹೊಂದಿದ್ದಾರೆ. ಇದೀಗ ಅವರು ಹಾಸನದ ಚೆನ್ನರಾಯಪಟ್ಟಣದ ಅಬಕಾರಿ ವಲಯಕ್ಕೆ ವರ್ಗಾವಣೆಗೊಂಡಿದ್ದಾರೆ.


ಮೂಲತಃ ಬನ್ನೂರು ನಿವಾಸಿಯಾಗಿದ್ದು, ಸಾಮೆತ್ತಡ್ಕದಲ್ಲಿ ವಾಸ್ತವ್ಯ ಇರುವ ಪ್ರೇಮಾನಂದ ಅವರು ಪುತ್ತೂರು, ಉಡುಪಿ, ಕುಂದಾಪುರ, ಮಂಗಳೂರು, ಉಳ್ಳಾಲದಲ್ಲಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಎಸ್.ಐ ಆಗಿ ಪದೋನ್ನತಿ ಹೊಂದಿ ಹಾಸನದ ಚೆನ್ನರಾಯಪಟ್ಟಣಕ್ಕೆ ವರ್ಗಾವಣೆಗೊಂಡಿದ್ದಾರೆ.











