ರಾಜ್ಯಮಟ್ಟದ ಕಬಡ್ಡಿ : ಕೊಣಾಲು ಪ್ರೌಢಶಾಲಾ ವಿದ್ಯಾರ್ಥಿ ಶುಭಕರ ದ್ವಿತೀಯ

0

ನೆಲ್ಯಾಡಿ: ಮಂಡ್ಯದಲ್ಲಿ ನಡೆದ ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ರಾಜ್ಯಮಟ್ಟದ 14ರ ವಯೋಮಾನದ ಬಾಲಕರ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ದ.ಕ.ಜಿಲ್ಲಾ ತಂಡ ದ್ವಿತೀಯ ಸ್ಥಾನಗಳಿಸಿದೆ.

ಈ ತಂಡವನ್ನು ಪ್ರತಿನಿಧಿಸಿದ್ದ ಕೊಣಾಲು ಸರಕಾರಿ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿ ಶುಭಕರ ಉತ್ತಮ ಪ್ರದರ್ಶನ ನೀಡಿದ್ದಾರೆ. ಈತನಿಗೆ ಶಾಲಾ ಮುಖ್ಯಗುರು ಶಶಿಧರ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ತರಬೇತಿ ನೀಡಿದ್ದಾರೆ. ಈತ ಕೊಪ್ಪ-ಮಾದೇರಿ ಶಂಕರ ಮತ್ತು ಚಂದ್ರಾವತಿ ದಂಪತಿಯ ಪುತ್ರ.

LEAVE A REPLY

Please enter your comment!
Please enter your name here