





ಪುತ್ತೂರು: ಲಯನ್ಸ್ ಕ್ಲಬ್ ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ಪುತ್ತೂರು, ಜನಾರ್ಧನ ಯುವಕ ಮಂಡಲ ರಿಜಿಸ್ಟರ್ ಪಡ್ನೂರು, ಸರಸ್ವತಿ ಯುವತಿ ಮಂಡಲ ಪಡ್ನೂರು ಇವರ ಸಹಯೋಗದೊಂದಿಗೆ ಎ ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮಂಗಳೂರು ಇಲ್ಲಿಯ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಜನಾರ್ಧನ ಯುವಕ ಮಂಡಲ ಸಭಾಭವನ ಪಡ್ನೂರು ಇಲ್ಲಿ ನ.23ರಂದು ನಡೆಯಿತು.



ಕಾರ್ಯಕ್ರಮವನ್ನು ಲಯನ್ ಅಧ್ಯಕ್ಷ ಲಯನ್ ಪ್ರೇಮಲತರಾವ್ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಬನ್ನೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಗೌರಿ ವಹಿಸಿ ಸಂದರ್ಭೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ E N T ಸ್ಪೆಷಲಿಸ್ಟ್ ಡಾಕ್ಟರ್ ಸ್ನೇಹ, ಪಡ್ನೂರು ಜನಾರ್ಧನ ಯುವಕ ಮಂಡಲ ಅಧ್ಯಕ್ಷ ಸುಧಾಕರ್, ಸರಸ್ವತಿ ಯುವತಿ ಮಂಡಲ ಅಧ್ಯಕ್ಷೆ ಸುಮಿತ್ರ ಮುಂಡಾಜೆ ಉಪಸ್ಥಿತರಿದ್ದರು.





ಕಾರ್ಯಕ್ರಮದಲ್ಲಿ ಲಯನ್ ಕಾರ್ಯದರ್ಶಿ ಲಯನ್ ಅರವಿಂದ ಭಗವಾನ್, ಲಯನ್ ಸುಧಾಕರ್, ಲಯನ್ ಜಯಶ್ರೀ ಶೆಟ್ಟಿ, ಲಯನ್ ನಯನ ರೈ, ಲಯನ್ ಶಾರದಾ ಕೇಶವ, ಲಯನ್ ತ್ರಿವೇಣಿ ಪೇರೋಡಿ, ಲಯನ್ ವಿದ್ಯಾ, ಯುವಕ ಯುವತಿ ಮಂಡಲದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.ಹೃದ್ರೋಗ ಬಿಪಿ, ಶುಗರ್, ENT ಕಣ್ಣಿನ ಪರೀಕ್ಷೆ, ಇಸಿಜಿ, ಸ್ತ್ರೀರೋಗ, ಗರ್ಭಕಂಠದ ಕ್ಯಾನ್ಸರ್ ತಪಾಸಣೆ ಇತ್ಯಾದಿ ನಡೆಯಿತು. ಸುಮಾರು ನೂರು ಜನರು ಆರೋಗ್ ತಪಾಸನೆಯ ಪ್ರಯೋಜನ ಪಡೆದುಕೊಂಡರು.
ಸ್ನೇಹ ಪ್ರಾರ್ಥಿಸಿದರು. ಪೂವಪ್ಪ ದೆಂತಡ್ಕ ಸ್ವಾಗತಿಸಿದರು. ರೇವತಿ ವಂದಿಸಿ,ಪೂವಪ್ಪ ದೆಂತಡ್ಕ ಕಾರ್ಯಕ್ರಮ ನಿರ್ವಹಿಸಿದರು.









