





ಪುತ್ತೂರು: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸರಣಿ ಕಾರ್ಯಕ್ರಮ ನೃತ್ಯಾಂತರಂಗದ 136ನೇ ಸರಣಿಯಲ್ಲಿ ಅಮೇರಿಕಾದ ನಿವಾಸಿ ಕು.ವೇದ್ಯ ಸ್ಫೂರ್ತಿ ಕೊಂಡ ಅವರಿಂದ ಶುದ್ಧ ಸಾಂಪ್ರದಾಯಿಕ ಶೈಲಿಯ ಕೂಚಿಪುಡಿ ಕಾರ್ಯಕ್ರಮ ನ.15ರಂದು ದರ್ಬೆಯ ಶಶಿಶಂಕರ ಸಭಾಂಗಣದಲ್ಲಿ ನಡೆಯಿತು.


ಮಂಗಳೂರಿನ ಕಲಾ ಸೂರ್ಯ ನೃತ್ಯಾಲಯದ ನೃತ್ಯ ಶಿಕ್ಷಕಿ ವಿದುಷಿ ಸೌಜನ್ಯ ಪಡುವೆಟ್ನಾಯರವರು ಅಭ್ಯಾಗತರಾಗಿ ಭಾಗವಹಿಸಿ ತಮ್ಮ ಮಾತೃ ಸಂಸ್ಥೆಯಲ್ಲಿ ನಡೆಯುವ ಕಲಾ ಕೈಂಕರ್ಯ, ಸಮಾಜಕ್ಕೆ ಇದರಿಂದ ಆಗುವ ಸತ್ಪರಿಣಾಮಗಳ ಬಗ್ಗೆ ಹಾಗೂ ವೇದ್ಯ ಸ್ಫೂರ್ತಿಯವರ ಅದ್ಭುತ ಕಲಾಸಾಧನೆಯ ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯ ನಿರ್ದೇಶಕ ವಿದ್ವಾನ್ ದೀಪಕ್ ಕುಮಾರ್ ಕಾರ್ಯಕ್ರಮವನ್ನು ಆಯೋಜಿಸಿದ್ದರು.













