ಬೊಳುವಾರಿನಲ್ಲಿ ಟಾಟಾ ಪವರ್ ಸೋಲಾರ್‌ನ ಲಿಷಿ ಪವರ್ ಸೊಲ್ಯೂಷನ್ಸ್ ಶುಭಾರಂಭ

0

ಪುತ್ತೂರು: ದೇಶದ ನಂ.1 ಕಂಪೆನಿ ಟಾಟಾ ಪವರ್ ಸೋಲಾರ್‌ನ ಲಿಷಿ ಪವರ್ ಸೊಲ್ಯೂಷನ್ಸ್ ಸಂಸ್ಥೆ ಬೊಳುವಾರು ಶ್ರೀದುರ್ಗಾ ಕಾಂಪ್ಲೆಕ್ಸ್‌ನ ಮೊದಲ ಮಹಡಿಯಲ್ಲಿ ನ.24ರಂದು ಶುಭಾರಂಭಗೊಂಡಿತು. ಬಿಜೆಪಿ ಹಿರಿಯ ಮುಖಂಡ ಮೊಗೆರೋಡಿ ಬಾಲಕೃಷ್ಣ ರೈ ರಿಬ್ಬನ್ ಕಟ್ ಉದ್ಘಾಟಿಸಿದರು. ಮಾಲಕರ ತಂದೆ ಶಾಂತಾ ಗಣೇಶ್ ರೈ ಹಾಗೂ ಏಕ ಹೊಸಮನೆ ರಘುನಾಥ ರೈರವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಸೋಲಾರ್ ವಿದ್ಯುತ್ ಶಕ್ತಿಯ ನಿರ್ಮಾಣದೆಡೆಗೆ ಹೆಚ್ಚು ಆದ್ಯತೆ ನೀಡಬೇಕು:
ಮುಖ್ಯ ಅತಿಥಿ ದ.ಕ.ಕ್ಷೇತ್ರದ ಮಾಜಿ ಸಂಸದ ನಳಿನ್ ಕುಮಾರ್ ಮಾತನಾಡಿ ಪುತ್ತೂರು ಬೆಳೆಯುತ್ತಿರುವ ಹಾಗೂ ಅಭಿವೃದ್ಧಿಯತ್ತ ಸಾಗುತ್ತಿರುವ ನಗರವಾಗಿದೆ. ಗ್ರಾಮೀಣ ಪ್ರದೇಶದ ಹಾಗೂ ನಗರ ಪ್ರದೇಶದ ಜನರ ಅವಶ್ಯಕತೆ ಪೂರೈಸುವ ಸಲುವಾಗಿ ಸೋಲಾರ್ ವಿದ್ಯುತ್ ಶಕ್ತಿಯ ನಿರ್ಮಾಣದೆಡೆಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಪ್ರಧಾನಮಂತ್ರಿಯವರ ಪರಿಕಲ್ಪನೆಯಲ್ಲಿ ಸೂರ್ಯಘರ್ ಯೋಜನೆಯಡಿಯಲ್ಲಿ 78 ಸಾವಿರ ಸಬ್ಸಿಡಿಯ ಜತೆಗೆ ಪ್ರತಿಯೊಬ್ಬರೂ ಮನೆಗಳಿಗೆ ಸೋಲಾರ್ ಅಳವಡಿಕೆ ಮಾಡಬೇಕು, ವಿದ್ಯುತ್ ಶಕ್ತಿಯ ಬಳಕೆಗೆ ಪೂರಕವಾಗಿ ಪೂರೈಕೆ ಕಷ್ಟವಾಗುತ್ತಿರುವ ಸಂದರ್ಭದಲ್ಲಿ ಸೋಲಾರ್ ವಿದ್ಯುತ್ ಬಳಕೆ ಮಾಡಬೇಕು ಎಂಬುದು ಪ್ರಧಾನಮಂತ್ರಿಯವರ ಆಶಯವಾಗಿದೆ. ಇದಕ್ಕೆ ಪೂರಕವಾಗಿ ಪುತ್ತೂರಿನಲ್ಲಿ ಈ ಸಂಸ್ಥೆ ಆರಂಭವಾಗಿದೆ. ಜನರ ಉಪಯೋಗಕ್ಕೆ ಕಾರ್ಯ ನಿರ್ವಹಣೆಗೆ ಬದ್ಧತೆ ಪಡೆದುಕೊಂಡಿದೆ ಎಂದು ಹೇಳಿ ಸಂಸ್ಥೆ ಉತ್ತರೋತ್ತರ ಬೆಳಗಲಿ ಎಂದು ಶುಭಹಾರೈಸಿದರು.

ಟಾಟಾ ಕಂಪೆನಿ ಹಾಗೂ ಈ ಸಂಸ್ಥೆಯ ಮಾಲಕರೇ ನಮಗೆ ವಿಶ್ವಾಸ:
ಕಾಂಗ್ರೆಸ್ ಮುಖಂಡ ಕಾವು ಹೇಮನಾಥ ಶೆಟ್ಟಿ ಮಾತನಾಡಿ ವಿದ್ಯುತ್‌ಗೆ ಪರ್ಯಾಯವಾದ ಸೋಲಾರ್ ಶಕ್ತಿ ಇಂದು ಎಲ್ಲರಿಗೂ ಅಗತ್ಯದ ವಿಚಾರವಾಗಿದೆ. ಹಲವು ವರ್ಷದ ಇತಿಹಾಸ ಹೊಂದಿರುವ ಟಾಟಾ ಕಂಪೆನಿಯ ಸೋಲಾರ್ ಸಂಸ್ಥೆಯ ಮೂಲಕ ಪುತ್ತೂರಿನಲ್ಲಿ ಜನರಿಗೆ ಸೋಲಾರ್ ವಿದ್ಯುತ್ ನೀಡಲು ಮುಂದಾಗಿದ್ದಾರೆ. ಪ್ರೀತಿ, ಅನ್ಯೋನ್ಯ, ಸ್ನೇಹಪರತೆ ಹೊಂದಿರುವ ಈ ಸಂಸ್ಥೆಯ ಮಾಲಕರಾದ ಕಾರ್ತಿಕ್‌ರವರು ವಿಶ್ವಾಸದ ವ್ಯಕ್ತಿಯಾಗಿದ್ದಾರೆ. ಅಲ್ಲದೆ ಟಾಟಾ ಕಂಪೆನಿಯೂ ನಮಗೆ ವಿಶ್ವಾಸಾರ್ಹ ಸಂಸ್ಥೆಯಾಗಿದೆ ಎಂದು ಹೇಳಿದ ಅವರು ಈ ಸಂಸ್ಥೆ ಉನ್ನತ ಮಟ್ಟವಾಗಿ ಬೆಳೆಯಲಿ. ನಮ್ಮ ಸಹಕಾರ ಯಾವಾಗಲೂ ಇದೆ ಎಂದು ಹೇಳಿ ಶುಭಹಾರೈಸಿದರು.

ಉದ್ಯಮದಲ್ಲಿ ಸೇವೆ ನೀಡಿದರೆ ಯಶಸ್ಸು ಸಿಗುತ್ತದೆ:
ಬೊಳುವಾರು ಪ್ರಗತಿ ಆಸ್ಪತ್ರೆಯ ವೈದ್ಯ ಡಾ.ಶ್ರೀಪತಿ ರಾವ್ ಮಾತನಾಡಿ ಸೂರ್ಯನನ್ನು ದೇವರೆಂದು ನಂಬಿದವರು. ಸೂರ್ಯನಿಂದ ವಿದ್ಯುತ್ ಉತ್ಪಾದನೆಗೆ ಹೆಚ್ಚು ಪ್ರೋತ್ಸಾಹ ಸಿಕ್ಕಿದ್ದು ನರೇಂದ್ರ ಮೋದಿ ಪ್ರಧಾನಮಂತ್ರಿಯಾದ ಮೇಲೆ. ಈ ವಿದ್ಯುತ್ ಶಕ್ತಿ ಸಾಕಷ್ಟು ಕಾರ್ಯಸಾಧನೆ ಮಾಡಿದೆ. ಇದರಲ್ಲಿ ಸಬ್ಸಿಡಿ ಯೋಜನೆಯೂ ಸೇರಿದೆ. ಕಾರ್ತಿಕ್‌ರವರು ಈ ಯೋಜನೆಗೆ ಕೈಹಾಕಿದ್ದು ಸಂತೋಷದ ವಿಷಯ. ಉದ್ಯಮದಲ್ಲಿ ನಿರ್ವಹಣೆ, ಸೇವೆ ಮುಖ್ಯ ಇದನ್ನು ಗ್ರಾಹಕರಿಗೆ ಸರಿಯಾಗಿ ನೀಡಿದರೆ ಯಶಸ್ಸು ಸಿಗುತ್ತದೆ ಎಂದು ಹೇಳಿ ಶುಭಹಾರೈಸಿದರು.

ಉದ್ಯಮದಲ್ಲಿ ಪ್ರಾಮಾಣಿಕತೆ, ಸೇವೆ ನೀಡಿದರೆ ಉಜ್ವಲ ಭವಿಷ್ಯ:
ಬಿಜೆಪಿ ಮುಖಂಡ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ ಇಂದು ಉದ್ಯಮದಲ್ಲಿ ಪೈಪೋಟಿ ಜಾಸ್ತಿ. ಆದರೆ ಯಾರು ಉದ್ಯಮದಲ್ಲಿ ಪ್ರಾಮಾಣಿಕವಾಗಿ ಕೆಲಸ, ಸೇವೆ ನೀಡಿದರೆ ಉಜ್ವಲ ಭವಿಷ್ಯ ಸಿಗುತ್ತದೆ. ನಾನೂ ಕೂಡ ಸೋಲಾರ್ ಅಳವಡಿಸಿದ್ದೇನೆ. ಇಂದು ಕೃಷಿಯಲ್ಲಿಯೂ ಸೋಲಾರ್ ವಿದ್ಯುತ್ ಬಳಕೆಯಾಗುತ್ತಿದೆ. ಸೂರ್ಯನಿಂದ ಉಚಿತ ವಿದ್ಯುತ್ ಸಿಗುವ ಸೌಲಭ್ಯವಾಗಿದೆ. ಎಲ್ಲಾ ಗ್ರಾಹಕರಿಗೂ ಒಂದೇ ದರವನ್ನು ನಿಗದಿಪಡಿಸಬೇಕು. ಇದರಲ್ಲಿರುವ ಸಬ್ಸಿಡಿ ಯೋಜನೆಯನ್ನು ಬಳಸಿಕೊಳ್ಳಿ ಎಂದು ಹೇಳಿ ಶುಭಹಾರೈಸಿದರು.

ನೈಸರ್ಗಿಕ ಶಕ್ತಿಯ ಅರಿವು ನಮ್ಮಲ್ಲಿ ಮೂಡಬೇಕು:
ಸುದಾನ ವಸತಿಯುತ ಶಾಲೆಯ ಸಂಚಾಲಕ ಡಾ|ವಿಜಯ ಹಾರ್ವಿನ್ ಮಾತನಾಡಿ ಸೋಲಾರ್ ವಿದ್ಯುತ್ ನೈಸರ್ಗಿಕ ಶಕ್ತಿಯಾಗಿದೆ. ನಮಗೆ ನೈಸರ್ಗಿಕ ಶಕ್ತಿಯ ಅರಿವು ಮೂಡಬೇಕು. ಉದ್ಯಮದಲ್ಲಿ ಉತ್ಪಾದನೆ, ಸೇವಾಮನೋಭಾವ, ಪ್ರಾಮಾಣಿಕತೆ, ಶ್ರಮ ಹಾಗೂ ಅರ್ಪಣಾ ಮನೋಭಾವ ಮುಖ್ಯ. ಅಲ್ಲದೆ ಗ್ರಾಹಕ ಸ್ನೇಹಿಯಾಗಿದ್ದರೆ ಯಶಸ್ಸು ಸಿಗುತ್ತದೆ. ಎಂದು ಹೇಳಿ ಶುಭಹಾರೈಸಿದರು.

ಅವರ ಉದ್ಯಮ ಉತ್ತಮ ರೀತಿಯಲ್ಲಿ ಬೆಳೆಯಲಿ:
ಬಿಜೆಪಿ ಮುಖಂಡ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ ಕಾರ್ತಿಕ್ ರೈರವರು ಸ್ನೇಹಮಯಿಯಾಗಿ ಎಲ್ಲರೊಂದಿಗೆ ಬೆರೆಯುವ ವ್ಯಕ್ತಿಯಾಗಿದ್ದಾರೆ. ಪುತ್ತೂರಿನಲ್ಲಿ ಅವರ ಈ ಉದ್ಯಮ ಉತ್ತಮ ರೀತಿಯಲ್ಲಿ ಬೆಳೆಯಲಿ. ಗ್ರಾಹಕರಿಗೆ ಒಳ್ಳೆಯ ಸೇವೆ ನೀಡಿ ಯಶಸ್ವಿಯಾಗಿ ಎಂದು ಹೇಳಿ ಶುಭಹಾರೈಸಿದರು.
ಯು.ಆರ್. ಪ್ರಾಪರ್ಟೀಸ್ ಮಾಲಕ ಉಜ್ವಲ್ ಪ್ರಭು ಮಾತನಾಡಿ ಪುತ್ತೂರಿನಲ್ಲಿ ಈ ಉದ್ಯಮ ಅಗತ್ಯವಾಗಿದೆ. ನನ್ನ ಬಾಲ್ಯ ಸ್ನೇಹಿತರಾದ ಇವರು ಉದ್ಯಮ ಆರಂಭಿಸಿದ್ದಾರೆ. ಈ ಸಂಸ್ಥೆ ಹತ್ತು ಸಂಸ್ಥೆಯಾಗಿ ಬೆಳೆಯಲಿ. ಉಲ್ಲಾಸ್ ಪೈ ಮಾತನಾಡಿ ಇವರ ಸಂಸ್ಥೆ ಬೆಳೆಯಲಿ. ವರ್ತಕ ಸಂಘದಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ಇವರ ಸೇವೆ ಗ್ರಾಹಕರಿಗೆ ತಲುಪುವಂತಾಗಲಿ ಎಂದು ಹೇಳಿ ಶುಭಹಾರೈಸಿದರು. ವರದರಾಜ್ ಟ್ರೇಡರ‍್ಸ್ ಮಾಲಕ ವೆಂಕಟರಮಣ ನಾಯಕ್ ಇಂದಾಜೆ ಮಾತನಾಡಿ ಸಂಸ್ಥೆಯ ಮಾಲಕರಾದ ಕಾರ್ತಿಕ್ ರೈರವರು ನನ್ನ ಸ್ನೇಹಿತರಾಗಿದ್ದಾರೆ. ಅವರ ಉದ್ಯಮ ಯಶಸ್ವಿಯಾಗಿ ಬೆಳೆಯಲಿ ಎಂದು ಶುಭಹಾರೈಸಿದರು.

ಅಶ್ವಿನಿ ಹೋಟೇಲ್ ಮಾಲಕ ಕರುಣಾಕರ ರೈ ದೇರ್ಲ, ಶಿವರಾಮ ಆಳ್ವ ಬಳ್ಳಮಜಲು, ಮಹಾಲಬಲ ರೈ ವಳತ್ತಡ್ಕ, ಜಯಂತ ನಡುಬೈಲು, ಚಂದ್ರಹಾಸ ಶೆಟ್ಟಿ ಕಡಬ, ಹರ್ಷಕುಮಾರ್ ರೈ ಮಾಡಾವು, ರತ್ನಾಕರ ರೈ ತಿಂಗಳಾಡಿ, ಬಾಲಕೃಷ್ಣ ಗೌಡ ಬಾಕ್ತಿಕುಮೇರು, ನಿತಿನ್ ಪಕ್ಕಳ, ಸುದ್ದಿ ಸಮೂಹ ಸಂಸ್ಥೆಗಳ ಸಿಇಒ ಸೃಜನ್ ಉರುಬೈಲು, ರವಿಪ್ರಸಾದ್ ಶೆಟ್ಟಿ, ಜಯಕುಮಾರ್ ರೈ ಮಿತ್ರಂಪಾಡಿ, ಬಿಂದು ಕಂಪೆನಿಯ ಸತ್ಯಶಂಕರ ಭಟ್, ಸಂದೀಪ್ ನೆಲ್ಲಿಕಟ್ಟೆ, ಕೃಷ್ಣಪ್ರಸಾದ್ ಭಮಡಾರಿ ಸಾಜ, ಅಶ್ವಿನಿ ರೈ ದೇರ್ಲ, ಸುರೇಂದ್ರ ರೈ ಬಳ್ಳಮಜಲು, ಸಿಝ್ಲರ್ ಪ್ರಸನ್ನ ಕುಮಾರ್ ಶೆಟ್ಟಿ, ಎಸಿಎಫ್ ಪ್ರವೀಣ್ ಶೆಟ್ಟಿ ಸುಳ್ಯ, ನಿತ್ಯಾನಂದ ಶೆಟ್ಟಿ ಬಪ್ಪಳಿಗೆ, ಡಾ.ಶಶಿಧರ ಕಜೆ, ವಸಂತ್ ಶಂಕರ್, ಸಪ್ತಮ್‌ನ ಸುಕುಮಾರ್, ಶಿವಶಂಕರ್ ಶೆಟ್ಟಿ, ಸುರೇಂದ್ರ ಕಿಣಿ, ಜಾನ್ ಕುಟಿನ್ಹಾ, ರಾಜಾರಾಮ್ ಪ್ರಭು ಕಲ್ಲೇಗ, ಮನ್ಸೂರು, ಭರತ್ ಪೈ, ಡಾ.ಅನುಪಮಾ ರೋಹಿತ್, ಅಜಿತ್ ಹೊಸಮನೆ, ದಿವ್ಯಕೃಷ್ಣ ಶೆಟ್ಟಿ, ರಾಘವೇಂದ್ರ ಭಟ್, ರೋಷನ್ ರೈ ಬನ್ನೂರು, ರವೀಂದ್ರ ಶೆಟ್ಟಿ ನುಳಿಯಾಲು, ಹರಿಪ್ರಸಾದ್ ರೈ ತಿಂಗಳಾಡಿ, ಪ್ರಶಾಂತ್ ಶೆಣೈ, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಸಂತೋಷ್ ಶೆಟ್ಟಿ ಸಾಜ, ಸಂತೋಷ್ ಕುಮಾರ್ ಶಿವಾನಿ, ಗನೇಶ್ ಶೆಟ್ಟಿ ನೆಲ್ಲಿಕಟ್ಟೆ, ಟಾಟಾ ಕಂಪೆನಿಯ ಉತ್ಕರ್ಷ್ ಯಾದವ್, ಸೇಲ್ಸ್ ಮೆನೇಜರ್ ಸುರಕ್ಷಿತ್ ರೈ, ಚಾನಲ್ ಪಾರ್ಟ್ನರ್ ಶರತ್ ಆಚಾರ್ಯ ಸೇರಿದಂತೆ ಹಲವಾರು ಗಣ್ಯರು ಆಗಮಿಸಿ ಶುಭಹಾರೈಸಿದರು. ಸಂಸ್ಥೆಯ ಮಾಲಕ ಕಾರ್ತಿಕ್ ರೈ ಸ್ವಾಗತಿಸಿ ಮಾತನಾಡಿ ನಮ್ಮಲ್ಲಿ ತಡೆರಹಿತ ಚಾಲನೆ ಟಾಟಾ ಈವಿ ಚಾರ್ಜರ್, ಗೃಹ, ಕಛೇರಿ, ಕೈಗಾರಿಕಾ ಕ್ಷೇತ್ರಗಳಿಗೆ ಸೋಲಾರ್ ವಿದ್ಯುತ್, ವಿದ್ಯುತ್ ಉತ್ಪಾದನೆ ಮತ್ತು ಮಾರಾಟ, ಟಾಟಾ ಪವರ್ ಸೋಲಾರ್ ರೂಫ್, ಹಾಗೂ ೭೮ ಸಾವಿರ ರೂ. ಸಬ್ಸಿಡಿಯೊಂದಿಗೆ ಪ್ರಧಾನಿ ಸೂರ್ಯಘರ್ ಯೋಜನೆ ಮಾಡಿಕೊಡಲಾಗುವುದು ಎಂದು ಹೇಳಿ ವಂದಿಸಿದರು.

ಶುಭಾರಂಭದಂದೇ ಸೋಲಾರ್ ಗ್ರಿಡ್ ಅಳವಡಿಕೆಗೆ ಬುಕಿಂಗ್
ಶುಭಾರಂಭಗೊಂಡ ದಿನದಂದೇ ಸೋಲಾರ್ ಗ್ರಿಡ್ ಉತ್ಪಾದನೆಗೆ ಬುಕಿಂಗ್ ನಡೆಯಿತು. ವರದರಾಜ್ ಟ್ರೇಡರ‍್ಸ್ ಮಾಲಕ ವೆಂಕಟರಮಣ ನಾಯಕ್ ಇಂದಾಜೆ ಹಾಗೂ ನೆಲ್ಲಿಕಟ್ಟೆ ವಿಘ್ನೇಶ್ವರ ಕನ್‌ಸ್ಟ್ರಕ್ಷನ್ ಮಾಲಕ ಸಂದೀಪ್ ಶೆಟ್ಟಿ ನೆಲ್ಲಿಕಟ್ಟೆಯವರು ಸೋಲಾರ್ ಗ್ರಿಡ್ ಅಳವಡಿಕೆಗೆ ಬುಕಿಂಗ್ ನಡೆಸಿದರು.

LEAVE A REPLY

Please enter your comment!
Please enter your name here