





ಆಲಂಕಾರು: ದುರ್ಗಾಂಬಾ ಕಲಾ ಸಂಗಮ ಆಲಂಕಾರು ಇದರ ವತಿಯಿಂದ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ನಡೆಯುತ್ತಿರುವ ಯಕ್ಷಗಾನ ತಾಳಮದ್ದಳೆಯ 19ನೇ ಸೇವೆ ’ಸುದರ್ಶನ ಗರ್ವಭಂಗ’ ನ.22ರಂದು ಆಲಂಕಾರು ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.



ಹಿಮ್ಮೇಳದಲ್ಲಿ ಭಾಗವತರಾಗಿ ಪದ್ಮನಾಭ ಪಳ್ಳಿಗದ್ದೆ ಕೈಕಂಬ, ಡಿ.ಕೆ.ಆಚಾರ್ಯ ಹಳೆನೇರೆಂಕಿ, ಚೆಂಡೆ ಮದ್ದಳೆಯಲ್ಲಿ ಚಂದ್ರ ದೇವಾಡಿಗ ನಗ್ರಿ, ಮೋಹನ ಶರವೂರು, ಶಿವಜಿತ್ ವೈ.ಜೆ. ಸಹಕರಿಸಿದರು. ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ರಾಮ್ಪ್ರಕಾಶ್ ಕೊಡಂಗೆ, ಗೋಪಾಲ ಭಟ್ ನೈಮಿಷ (ವಿಷ್ಣು), ನಾರಾಯಣ ಭಟ್ ಆಲಂಕಾರು (ಲಕ್ಷ್ಮೀ), ರಾಮ್ಪ್ರಸಾದ್ ಆಲಂಕಾರು, ರಾಘವೇಂದ್ರ ಭಟ್ ತೋಟಂತಿಲ (ಸುದರ್ಶನ), ಗುರು ಪ್ರಸಾದ್ ಆಲಂಕಾರು (ಶತ್ರುಪ್ರಸೂದನ), ಜನಾರ್ದನ ಸುರ್ಯ (ದೆವೇಂದ್ರ) ಸಹಕರಿಸಿದರು. ಶ್ರೀನಿವಾಸ ರಾವ್ ಶರವೂರು ಬೆಂಗಳೂರು ಸೇವಾರ್ಥಿಯಾಗಿ ಸಹಕರಿಸಿದರು. ದುರ್ಗಾಂಬಾ ಕಲಾ ಸಂಗಮದ ಕೋಶಾಧಿಕಾರಿ ರಾಮ್ ಪ್ರಸಾದ್ ಆಲಂಕಾರು ಸ್ವಾಗತಿಸಿ, ವಂದಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ರಾವ್ ನಗ್ರಿ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಸದಸ್ಯರು, ದೇವಸ್ಥಾನದ ಸಿಬ್ಬಂದಿ ವರ್ಗದವರು, ಕಲಾಭಿಮಾನಿಗಳು, ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.














