





ಅಧ್ಯಕ್ಷರಾಗಿ ರಹೀಂ ಅರ್ಕುಳ, ಪ್ರ.ಕಾರ್ಯದರ್ಶಿಯಾಗಿ ಹಮೀದ್ ಕಬಕ, ಕೋಶಾಧಿಕಾರಿ ಝಾಕಿರ್ ರೋಯಲ್


ಪುತ್ತೂರು: ಮರ್ಕಝುಲ್ ಹುದಾ ಕುಂಬ್ರ ಇದರ ದಮ್ಮಾಮ್ ಘಟಕದ ವಾರ್ಷಿಕ ಮಹಾಸಭೆ ಶಂಸುದ್ದೀನ್ ಬೈರಿಕಟ್ಟೆ ಅವರ ದಮ್ಮಾಮ್ ನಿವಾಸದಲ್ಲಿ ನಡೆಯಿತು. ಸಮಿತಿಯ ಅಧ್ಯಕ್ಷ ಶಂಸುದ್ದೀನ್ ಕಡಬ ಅಧ್ಯಕ್ಷತೆ ವಹಿಸಿದ್ದರು. ರಶೀದ್ ಸಖಾಫಿ ದುವಾ ಮಾಡಿದರು. ಅಬ್ದುಲ್ ಹಮೀದ್ ಕಬಕ ಕಿರಾಅತ್ ಪಠಿಸಿದರು.





ರಾಷ್ಟ್ರೀಯ ಸಮಿತಿಯ ಕೋಶಾಧಿಕಾರಿ ಶಾಹುಲ್ ಹಮೀದ್ ಉಜಿರೆ ಸಭೆ ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಕಾರ್ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ನಾಸಿರ್ ಇಂದ್ರಾಜೆ ಲೆಕ್ಕಪತ್ರ ಮಂಡಿಸಿದರು. ಅತಿಥಿಗಳಾಗಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಫಾರೂಕ್ ಹಾಜಿ ಕನ್ಯಾನ, ಪ್ರಧಾನ ಕಾರ್ಯದರ್ಶಿ ನೌಶಾದ್ ಪೊಳ್ಯ, ಓವರ್ಸೀಸ್ ಸೆಕ್ರೇಟರಿ ಶಂಸುದ್ದೀನ್ ಬೈರಿಕಟ್ಟೆ, ರಹೀಮ್ ಅರ್ಕುಳ ಮತ್ತು ಎಂಬಿಎಂ ಮದನಿ ಮೊದಲಾದವರು ಭಾಗವಹಿಸಿದ್ದರು. ಫಾರೂಕ್ ಕನ್ಯಾನರವರು ಹಳೆ ಸಮಿತಿಯನ್ನು ವಿಸರ್ಜಿಸಿ ನೂತನ ಸಮಿತಿಯನ್ನು ರಚಿಸಿದರು. ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಉಮ್ಮರ್ ಅಳಕೆಮಜಲ್, ಅಧ್ಯಕ್ಷರಾಗಿ ರಹೀಮ್ ಅರ್ಕುಳ, ಉಪಾಧ್ಯಕ್ಷರಾಗಿ ಅಶ್ರಫ್ ಅಡ್ಕಾರ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್ ಕಬಕ, ಕೋಶಾಧಿಕಾರಿಯಾಗಿ ಝಾಕಿರ್ ರೋಯಲ್, ಜೊತೆ ಕಾರ್ಯದರ್ಶಿಯಾಗಿ ಜಾಬಿರ್ ಅಳಕೆಮಜಲ್ ಆಯ್ಕೆಯಾದರು. ಸಲಹೆಗಾರರಾಗಿ ಶಾಹುಲ್ ಹಮೀದ್ ಉಜಿರೆ, ಎಂಬಿಎಂ ಮದನಿ, ನೌಶಾದ್ ಪೋಳ್ಯ ಆಯ್ಕೆಯಾದರು. ಸದಸ್ಯರಾಗಿ ಅಥಾವುಲ್ಲ ಕಡಬ, ಸಂಶುದ್ದೀನ್ ಕಡಬ, ಸಂಶುದ್ದೀನ್ ಅರ್ಕುಳ, ನಾಸಿರ್ ಇಂದ್ರಾಜೆ, ಅವರನ್ನು ಆಯ್ಕೆ ಮಾಡಲಾಯಿತು. ಹಳೆ ಸಮಿತಿಯಿಂದ ನೂತನ ಸಮಿತಿಗೆ ದಾಖಲೆಯೊಂದಿಗೆ ಅಧಿಕಾರ ಹಸ್ತಾಂತರ ನಡೆಯಿತು. ಸಂಚಾಲಕ ರಶೀದ್ ಸಖಾಫಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಕ್ಷ ಸಂಶುದ್ದೀನ್ ಕಡಬ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ಅಬ್ದುಲ್ ಹಮೀದ್ ಕಬಕ ವಂದಿಸಿದರು. ಸಂಶುದ್ದೀನ್ ಕಡಬ ಕಾರ್ಯಕ್ರಮ ನಿರೂಪಿಸಿದರು.









