





ಪುತ್ತೂರು: ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ-ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನ.26ರಂದು ಷಷ್ಠಿ ಮಹೋತ್ಸವ ಕಾರ್ಯಕ್ರಮವು ಬ್ರಹ್ಮಶ್ರೀ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ವಿಜ್ರಂಭಣೆಯಿಂದ ಶ್ರದ್ಧಾಭಕ್ತಿಯೊಂದಿಗೆ ಜರಗಿತು.



ಬೆಳಿಗ್ಗೆ ಶ್ರೀ ದೇವರ ಬಲಿ ಹೊರಟು ಷಷ್ಠಿ ಮಹೋತ್ಸವ, ಪಲ್ಲಕ್ಕಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ದೈವಗಳ ಭಂಡಾರ ತೆಗೆಯುವುದು, ರಂಗಪೂಜೆ, ವೈದಿಕ ಮಂತ್ರಾಕ್ಷತೆ, ಶ್ರೀ ಕ್ಷೇತ್ರದ ದೈವಗಳಿಗೆ ನೇಮೋತ್ಸವ, ಸಂಜೆ ಡಾ.ಶಿವರಾಮ ಕಾರಂತ ಬಾಲವನ ಪುತ್ತೂರು ಸಾಯಿಕಲಾ ಯಕ್ಷ ಬಳಗದಿಂದ ಯಕ್ಷಗಾನ ಶಶಿಪ್ರಭಾ ಪರಿಣಯ ನಡೆಯಿತು. ನ.27ರಂದು ಬೆಳಿಗ್ಗೆ ಪಂಚವಿಂಶತಿ ಕಲಶಪೂಜೆ, ಶ್ರೀ ದೇವರಿಗೆ ಸೀಯಾಳಾಭಿಷೇಕ, ಸಂಪ್ರೋಕ್ಷಣಾ ಕಲಶಾಭಿಷೇಕ, ದೈವಗಳಿಗೆ ತಂಬಿಲ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.





ಸಹಕರಿಸಿದ ಸಂಘ-ಸಂಸ್ಥೆಗಳು:
ಷಷ್ಠಿ ಮಹೋತ್ಸವಕ್ಕೆ ಬೆದ್ರಾಳ ಶ್ರೀ ನಂದಿಕೇಶ್ವರ ಭಜನಾ ಮಂದಿರ, ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ ನೌಕರ ವೃಂದ, ಸಂಜಯನಗರ ಸುರಕ್ಷಾ ಸ್ತ್ರೀಶಕ್ತಿ ಸಂಘ, ಪಂಜಳ ಷಣ್ಮುಖ ಗೆಳೆಯರ ಬಳಗ, ಕೆಮ್ಮಿಂಜೆ ಶ್ರೀ ರಾಮ ಭಜನಾ ಮಂಡಳಿ, ಕೆಮ್ಮಿಂಜೆ ಫ್ರೆಂಡ್ಸ್ ಮರೀಲು, ಪುತ್ತೂರು ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ, ಮರೀಲು ಸ್ನೇಹನಗರ ಸಾರ್ವಜನಿಕ ಶ್ರೀ ಮಹಾಲಿಂಗೇಶ್ವರ ಕಟ್ಟೆ, ಸಂಜಯನಗರ ಧರ್ಮಸ್ಥಳ ಸ್ವ-ಸಹಾಯ ಸಂಘ, ದರ್ಬೆ ಪಿ.ಸಿ ಪೈ & ಕೋ., ಮೊಟ್ಟೆತ್ತಡ್ಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಭೂಮಿಕಾ ಒಕ್ಕೂಟ, ಸಂಜಯನಗರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ಫೂರ್ತಿ ಸ್ವ-ಸಹಾಯ ಸಂಘ, ಸಂಜಯನಗರ ವೈಶಾಖ ಬ್ರದರ್ಸ್ ಕರಸೇವಾ ಸಮಿತಿ, ಭಾರತ್ ಕಟ್ಟಡ ಕಾರ್ಮಿಕರ ಸಂಘ ಪುತ್ತೂರು, ಜಿಡೆಕಲ್ಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ,ಯೋಜನೆ, ರಾಗಿದಕುಮೇರು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ ಸಹಕರಿಸಿದರು.

ಬೆಳ್ಳಿ ಆಭರಣ, ಹಣ್ಣುಕಾಯಿ ಅಂಗಡಿ:
ಕ್ಷೇತ್ರಕ್ಕೆ ಆಗಮಿಸುವ ಭಕ್ತಾಧಿಗಳಿಗೆ ದೇವರ ಸೇವೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ದೇವಸ್ಥಾನದ ಬಳಿಯಲ್ಲಿಯೇ ಹಣ್ಣುಕಾಯಿ ಅಂಗಡಿ ಹಾಗೂ ಹರಕೆಯ ಬೆಳ್ಳಿ ಆಭರಣಗಳ ಅಂಗಡಿಯು ತೆರೆದು ಭಕ್ತಾಧಿಗಳಿಗೆ ಅನುಕೂಲ ಕಲ್ಪಿಸಲಾಗಿತ್ತು.
ಮಜ್ಜಿಗೆ ಕೌಂಟರ್ ಉದ್ಘಾಟನೆ:
ಷಷ್ಠಿ ಮಹೋತ್ಸವದ ಪ್ರಯುಕ್ತ ನೈತ್ತಾಡಿ ತಂಡದವರಿಂದ ದೇವಸ್ಥಾನಕ್ಕೆ ಆಗಮಿಸುವ ಭಕ್ತಾಧಿಗಳ ಬಾಯಾರಿಕೆಯನ್ನು ತಣಿಸಲು ಮಜ್ಜಿಗೆ ಕೌಂಟರ್ ಅನ್ನು ತೆರೆಯಲಾಗಿದ್ದು, ಈ ಕೌಂಟರ್ನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ವೇದಮೂರ್ತಿ ಸುಬ್ರಹ್ಮಣ್ಯ ಬಳ್ಳುಕುರಾಯ ಹಾಗೂ ಹಾಲಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಬಾಲಕೃಷ್ಣ ಪೂಜಾರಿ ಕೋಲಾಡಿ, ನೈತ್ತಾಡಿ ತಂಡದವರಾದ ಗಣೇಶ್ ಗೌಡ, ಯಮುನಾ, ಉಷಾ, ಚೈತ್ರಾ, ಸುಜಾತಾ, ಸತೀಶ್, ದೇವಪ್ಪ, ಮೋಹನ, ಬೇಬಿ ರೇಖಾ, ವೀಣಾ ಸಹಿತ ಇತರರು ಉಪಸ್ಥಿತರಿದ್ದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ, ಸದಸ್ಯರಾದ ಪ್ರಧಾನ ಅರ್ಚಕ ಕೆ.ವೆಂಕಟೇಶ್ ಭಟ್, ಸೂರಪ್ಪ ಗೌಡ ಸಂಜಯನಗರ, ಮಹೇಶ್ ಬಿ.ಕಾವೇರಿಕಟ್ಟೆ, ರಕ್ಷಿತ್ ನಾಕ್ ದರ್ಬೆ, ಲಲಿತಾ ಕೆ.ಕೆಮ್ಮಿಂಜೆ, ರೇಖಾ ಯಶೋಧರ ಮರೀಲು, ಚಂದ್ರಶೇಖರ ಕೆ.ಕಲ್ಲಗುಡ್ಡೆ, ವಸಂತ ನಾಯ್ಕ ಬೆದ್ರಾಳ, ಗುಮಾಸ್ತ ಭರತ್, ಸಿಬ್ಬಂದಿ ರಘುನಾಥ್ ಪೂಜಾರಿ ಸೇರಿದಂತೆ ಭಕ್ತಾಧಿಗಳು ಸಹಕರಿಸಿದರು.
ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವಿಕೆ..
ವರ್ಷಂಪ್ರತಿ ಶ್ರೀ ಕ್ಷೇತ್ರದಲ್ಲಿ ಗೊನೆ ಮುಹೂರ್ತದಿಂದ ಹಿಡಿದು ಷಷ್ಠಿ ಮಹೋತ್ಸವದ ತನಕ ಶ್ರೀ ದೇವರ ಸನ್ನಿಧಿಯಲ್ಲಿ ಶ್ರದ್ಧಾಭಕ್ತಿಯ ಧಾರ್ಮಿಕ ಕಾರ್ಯಕ್ರಮಗಳು ವಿಜ್ರಂಭಣೆಯಲ್ಲಿ ಜರಗಿತು. ಪ್ರತೀ ವರ್ಷದಂತೆ ಷಷ್ಠಿ ಮಹೋತ್ಸವ ಕಾರ್ಯಕ್ರಮಗಳಲ್ಲಿ ಸಹಸ್ರಾರು ಭಕ್ತಾಭಿಮಾನಿಗಳ ಒಗ್ಗೂಡುವಿಕೆಯಿಂದ ಯಶಸ್ವಿಯಾಗಿ ನಡೆದು ಬಂದಿದೆ. ಶ್ರೀ ಕ್ಷೇತ್ರದಲ್ಲಿ ಅನ್ನಪ್ರಸಾದವು ಅಕ್ಷಯ ಪ್ರಸಾದದಂತೆ ಮೂಡಿ ಬಂದಿದೆ. ಶ್ರೀ ಕ್ಷೇತ್ರದಲ್ಲಿ ನಡೆದ ಷಷ್ಠಿ ಮಹೋತ್ಸವ ಕಾರ್ಯಕ್ರಮ ಯಶಸ್ವಿಗೊಳ್ಳಲು ಗೌರವಾಧ್ಯಕ್ಷರಾದ ಶಾಸಕ ಅಶೋಕ್ ಕುಮಾರ್ ರೈರವರ ಮಾರ್ಗದರ್ಶನ, ವ್ಯವಸ್ಥಾಪನಾ ಸಮಿತಿ ಸದಸ್ಯರ, ಅರ್ಚಕರ, ಸಿಬ್ಬಂದಿಗಳ ಜೊತೆಗೆ ಊರ ಮಹನೀಯರ ಸಹಕಾರವನ್ನು ಮರೆಯಲು ಸಾಧ್ಯವಿಲ್ಲ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ನಮ್ಮ ಕೃತಜ್ಞತೆಗಳೊಂದಿಗೆ ಶ್ರೀ ದೇವರ ಅನುಗ್ರಹ ಸದಾ ಪ್ರಾಪ್ತವಾಗಲಿ.
-ಕೇಶವ ಪೂಜಾರಿ ಬೆದ್ರಾಳ,
ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ, ಶ್ರೀ ಕ್ಷೇತ್ರ ಕೆಮ್ಮಿಂಜೆ





