ಬೆಟ್ಟಂಪಾಡಿ ದೇವಾಲಯದಲ್ಲಿ ಆಡಳಿತ ಮಂಡಳಿ, ಅಭಿವೃದ್ಧಿ ಸಮಿತಿ ಸಭೆ

0

2027ರಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಸುವ ಬಗ್ಗೆ ಚಿಂತನೆ


ಬೆಟ್ಟಂಪಾಡಿ: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವವು 2027ನೇ ಫೆಬ್ರವರಿ ತಿಂಗಳ 19 ರಿಂದ 24 ರವರೆಗೆ ನಡೆಸಲು ಯೋಜಿಸಲಾಗಿದ್ದು, ಅದರ ಪೂರ್ವಭಾವಿಯಾಗಿ ಗ್ರಾಮಸ್ಥರ ಸಮಾಲೀಚನಾ ಸಭೆ ನಡೆಸುವ ಬಗ್ಗೆ ಆಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿಯ ಸಭೆಯು ಇತ್ತೀಚೆಗೆ ದೇವಸ್ಥಾನದಲ್ಲಿ ನಡೆಯಿತು. ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ಶಾಸಕ ಅಶೋಕ್‌ ಕುಮಾರ್‌ ರೈಯವರ ಸಮಯ ದಿನಾಂಕ ನೋಡಿಕೊಂಡು ದಶಂಬರ್‌ ತಿಂಗಳಲ್ಲಿ ಗ್ರಾಮಸ್ಥರ ಸಮಾಲೋಚನಾ ಸಭೆ ಕರೆಯುವುದಾಗಿ ತೀರ್ಮಾನಿಸಲಾಯಿತು.


ಇದೇ ವೇಳೆ ಇತ್ತೀಚೆಗೆ ನಡೆದ ಕ್ಷೇತ್ರದ ಜಾತ್ರೋತ್ಸವದ ಜಮಾ-ಖರ್ಚು ಹಾಗೂ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಲೆಕ್ಕಪತ್ರವನ್ನೂ ಮಂಡಿಸಲಾಯಿತು. ದಶಂಬರ್‌ ತಿಂಗಳಲ್ಲಿ ನಡೆಯಲಿರುವ ಧನುಪೂಜೆಯ ಸಿದ್ದತೆಗಳ ಕುರಿತು ಚರ್ಚಿಸಲಾಯಿತು.


ಸಭೆಯಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್‌ ಕುಮಾರ್‌ ಬಲ್ಲಾಳ್‌, ಮೊಕ್ತೇಸರ ವಿನೋದ್‌ ರೈ ಗುತ್ತು, ಅಭಿವೃದ್ಧಿ ಸಮಿತಿ ಅಧ್ಯಕ್ಷ ಮನಮೋಹನ ರೈ ಚೆಲ್ಯಡ್ಕ, ಪ್ರಧಾನ ಕಾರ್ಯದರ್ಶಿ ವಸಂತಕೃಷ್ಣ ಕೋನಡ್ಕ, ಸಂಚಾಲಕ ವೇ.ಮೂ. ದಿನೇಶ್‌ ಮರಡಿತ್ತಾಯ, ಆಡಳಿತ ಮಂಡಳಿ ಸದಸ್ಯರಾದ ಅರುಣ್‌ ಪ್ರಕಾಶ್‌ ರೈ ಮದಕ, ಸೀತಾರಾಮ ಗೌಡ ಮಿತ್ತಡ್ಕ, ಶಿವಕುಮಾರ್‌ ಬಲ್ಲಾಳ್‌, ಶೇಷಪ್ಪ ರೈ ಮೂರ್ಕಾಜೆ, ನಾರಾಯಣ ಮನೋಳಿತ್ತಾಯ ಕಾಜಿಮೂಲೆ, ಡಾ. ಸುಬ್ರಹ್ಮಣ್ಯ ವಾಗ್ಲೆ, ಶಂಕರ ಭಟ್‌ ಮಜಲುಗುಡ್ಡೆ, ಸತೀಶ್‌ ಗೌಡ ಪಾರ, ಜತ್ತಪ್ಪ ಗೌಡ ಬಳ್ಳಿತ್ತಡ್ಡ, ಗಣೇಶ್‌ ಸುಬ್ರಹ್ಮಣ್ಯ ಹೊಳ್ಳ, ಉಮೇಶ್‌ ಮಿತ್ತಡ್ಕ, ವಿನಯ ಪ್ರಸಾದ್‌ ಪಾಲ್ಗೊಂಡು ವಿವಿಧ ಸಲಹೆ ಸೂಚನೆ ನೀಡಿದರು.
ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ವಸಂತಕೃಷ್ಣ ಕೋನಡ್ಕ ಸ್ವಾಗತಿಸಿ, ಶಿವಪ್ರಸಾದ್‌ ತಲೆಪ್ಪಾಡಿ ವಂದಿಸಿದರು.

LEAVE A REPLY

Please enter your comment!
Please enter your name here