





ಬೆಟ್ಟಂಪಾಡಿ: ಇಲ್ಲಿನ ಶ್ರೀರಾಮನಗರ ರೆಂಜ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಶ್ರೀ ಮಣಿಕಂಠ ಸಿಂಗಾರಿ ಮೇಳವು 7ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿದ್ದು, ಇದರ ಅಂಗವಾಗಿ ʼಚೆಂಡೆ ಸಂಭ್ರಮ, ಮಕರ ಸಂಕ್ರಮಣ ಉತ್ಸವ ಹಾಗೂ ಅಭಿನಂದನಾ ಸಮಾರಂಭವು 2026ನೇ ಜ.14ರಂದು ನಡೆಯಲಿದ್ದು, ಅದರ ಆಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಲಾಯಿತು.


ಭಜನಾ ಮಂದಿರದ ಸಂಚಾಲಕ, ಗುರುಸ್ವಾಮಿ ಕೃಷ್ಣಪ್ಪ ಗೌಡ ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಆಶಿರ್ವದಿಸಿದರು.





ಈ ಸಂದರ್ಭದಲ್ಲಿ ಅಯ್ಯಪ್ಪ ಸೇವಾ ಟ್ರಸ್ಟ್ ಅಧ್ಯಕ್ಷ ಕರುಣಾಕರ ಶೆಟ್ಟಿ ಕೊಮ್ಮಂಡ, ಮಂದಿರದ ಅಧ್ಯಕ್ಷ ಸತೀಶ್ ಗೌಡ ಪಾರ, ಪ್ರಧಾನ ಕಾರ್ಯದರ್ಶಿ ಅಂಕಿತ್ ಕೋನಡ್ಕ, ಕೋಶಾದಿಕಾರಿ ರವಿನಾಥ ಕೋನಡ್ಕ, ಮಣಿಕಂಠ ಸಿಂಗಾರಿ ಮೇಳದ ಮುಖ್ಯಸ್ಥ ಚೇತನ್, ಸಿಂಗಾರಿ ಮೇಳದ ಸದಸ್ಯರು, ಸೇವಾ ಸಮಿತಿ ಸದಸ್ಯರುಗಳು, ಅಯ್ಯಪ್ಪ ಮಾಲಾಧಾರಿಗಳು, ಭಕ್ತವೃಂದ ಉಪಸ್ಥಿತರಿದ್ದರು.










