





ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕರಿಗೆ ಸಿಗದ ಸ್ಪಂದನೆ – ಖಾಯಂ ವೈದ್ಯಾಧಿಕಾರಿಗೆ ಆಗ್ರಹ


ಬಡಗನ್ನೂರು: ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕರಿಗೆ ಸ್ಪಂಧನೆ ಇಲ್ಲವೆಂದು ಆರೋಪಿಸಿ ಖಾಯಂ ವೈದ್ಯಾಧಿಕಾರಿಗೆ ಆಗ್ರಹದ ಬಗ್ಗೆ ಬಡಗನ್ನೂರು ಸಾಮಾನ್ಯ ಸಬೆಯಲ್ಲಿ ನಿರ್ಣಯ ಕೖೆಗೊಳ್ಳಲು ತಿರ್ಮಾನಿಸಲಾಯಿತು.ಸಭೆಯು ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ಎಂ, ರವರ ಅಧ್ಯಕ್ಷತೆಯಲ್ಲಿ ನ 25 ರಂದು ಗ್ರಾ. ಪಂ ಸಭಾಂಗಣದಲ್ಲಿ ನಡೆಯಿತು.





ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದ ಸಾರ್ಜನಿಕರಿಗೆ ಸ್ಪಂದನೆ ಇಲ್ಲ 70 ವರ್ಷ ಹೆಂಗಸರೊಬ್ಬರಿಗೆ ವಿಪರೀತ ಜ್ವರದಲ್ಲಿ ಆಸ್ಪತ್ರೆ ಹೋದ ಸಂದರ್ಭದಲ್ಲಿ ರಕ್ತ ಪರೀಕ್ಷೆಗೆ ಮೊನಿಟರ್ ಆಫ್ ಮಾಡಲಾಗಿದೆ, ಗ್ಲೂಕೋಸ್ ನೀಡಲು ನಾಳೆ ಬನ್ನಿ ಎಂದು ಹೇಳಿ ವಾಪಾಸ್ ಕಳಿಸಿದ ಬಗ್ಗೆ ಸದಸ್ಯ ಧರ್ಮೆಂದ್ರ ಕುಲಾಲ್ ವಿಷಯ ಪ್ರಸ್ತಾಪಿಸಿ ಮಾತನಾಡಿ, ಜನರು ಯಾವುದೇ ಆರೋಗ್ಯದ ಸಮಸ್ಯೆ ಎದುರಾದಾಗ ಸರಕಾರಿ ಆಸ್ಪತ್ರೆ ಹೋದ ಸಂದರ್ಭದಲ್ಲಿ ತಕ್ಷಣ ಪ್ರಥಮ ಚಿಕಿತ್ಸೆ ನೀಡಿ ಉಪಚರಿಸುವುದು ಅವರ ಕರ್ತವ್ಯ ಅದು ಬಿಟ್ಟು ನಾಳೆ ಬನ್ನಿ ಎನ್ನುವುದು ಅವರ ಉದ್ದಟತನದ ಮಾತು. ಈಗಿರುವಾಗ ಅವರನ್ನು ಕೇಳುವವರು ಯಾರು ಇಲ್ಲಾ ಎಂದು ಪ್ರಶ್ನಿಸಿದರು, ಇವರೊಂದಿಗೆ ಸದಸ್ಯ ಕುಮಾರ ಅಂಬಟೆಮೂಲೆ ಧ್ವನಿ ಗೂಡಿಸಿ ನನಗೂ ಅನುಭವ ಆಗಿದೆ ಒಂದು ಸಾರಿ ನಾಯಿ ಕಚ್ಚಿ ಇಂಜೆಕ್ಷನ್ ಹಾಕಿಸಿಕೊಳ್ಳಲು ಹೋದ ಸಂದರ್ಭದಲ್ಲಿ ನಾಳೆ ಬನ್ನಿ ಎಂದು ಹೇಳಿದ್ದು ಉಂಟು ಎಂದು ಹೇಳಿದರು.
ಈ ಬಗ್ಗೆ ಸದಸ್ಯ ರವಿರಾಜ ರೖೆ ಧ್ವನಿ ಗೂಡಿಸಿ, ಈಶ್ವರಮಂಗಲ ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಸುಮಾರು ಒಂದುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಿ ಆಸ್ಪತ್ರೆ ಬೇಕಾದ ಎಲ್ಲಾ ಮೂಲಭೂತ ಸೌಲಭ್ಯಗನ್ನು ಒದಗಿಸಲಾಗಿದೆ ಪ್ರಸ್ತುತ ಪ್ರತಿ ದಿನ 100 ರಿಂದ 150 ರೋಗಿಗಳು ಬರುತ್ತಾರೆ. ಈಗಿರುವಾಗ ಅಂತಹ ಆಸ್ಪತ್ರೆಯಲ್ಲಿ ಒಬ್ಬ ಖಾಯಂ ವೖೆದ್ಯಾಧಿಕಾರಿ ಇಲ್ಲ, ರಕ್ತ ಪರೀಕ್ಷೆ ಮಾಡುವವರು ಇಲ್ಲ, ನರ್ಸ್ ಗಳಿಲ್ಲ ಅಂದರೆ ನಾಚಿಕೆ ವಿಚಾರ, ಖಾಯಂ ವೖೆದ್ಯಾಧಿಕಾರಿ ನೇಮಕಾತಿ ಮಾಡುವಂತೆ ಜಿಲ್ಲಾ ಅರೋಗ್ಯಾಧಿಕಾರಿಗಳಿಗೆ ಬರೆದುಕೋಳ್ಳುವಂತೆ ನಿರ್ಣಯಿಸಲು ಆಗ್ರಹಿಸಿದರು. ಈ ಬಗ್ಗೆ ಸಭೆಯಲ್ಲಿ ಚರ್ಚಿಸಿ ಸರ್ವಸದಸ್ಯರ ಒಮ್ಮತದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಬರೆದುಕೋಳ್ಳುವಂತೆ ನಿರ್ಣಯ ಕೈಗೊಳ್ಳಲಾಯಿತು.
ಬೀದಿ ನಾಯಿಗಳ ಹಾವಳಿ
ಬೀದಿ ನಾಯಿಗಳ ಹಾವಳಿಯಿಂದ ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಈ ಬಗ್ಗೆ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡುವಂತೆ ಸದಸ್ಯ ಸಂತೋಷ ಆಳ್ವ ಗಿರಿಮನೆ ಒತ್ತಾಯಿಸಿದರು. ಈ ಬಗ್ಗೆ ಚರ್ಚಿಸಿ ತಾ. ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರವರಿಗೆ ಬರೆದುಕೊಳ್ಳಲು ನಿರ್ಣಯಿಸಲಾಯಿತು.
ಡಿ. 11 ಮಕ್ಕಳ ಗ್ರಾಮ ಸಭೆ, ಡಿ. 24 ಗ್ರಾಮ ಸಭೆ,ಡಿ 22, 23 ವಾರ್ಡ್ ಸಭೆ ನಡೆಸಲು ದಿನಾಂಕ ನಿಗದಿ ಮಾಡಲಾಯಿತು. ಗ್ರಾ. ಪಂ ಅಭಿವೃದ್ಧಿ ಅಧಿಕಾರಿ ಬಿ. ಕೆ ಸುಬ್ಬಯ್ಯ ಸಾರ್ವಜನಿಕ ಅರ್ಜಿ ಮತ್ತು ಸರಕಾರಿ ಸುತ್ತೋಲೆಗಳನ್ನು ನಭೆಯ ಗಮನಕ್ಕೆ ತಂದರು.
ಸಭೆಯಲ್ಲಿ ಸದಸ್ಯರಾದ ರವಿರಾಜ ರೖೆ ಸಜಂಕಾಡಿ, ದರ್ಮೇಂದ್ರ ಕುಲಾಲ್ ಪದಡ್ಕ, ರವಿಚಂದ್ರ ಸಾರೆಪ್ಪಾಡಿ, ಲಿಂಗಪ್ಪ ಗೌಡ ಮೋಡಿಕೆ, ವೆಂಕಟೇಶ್ ಕನ್ನಡ್ಕ, ಕುಮಾರ ಅಂಬಟೆಮೂಲೆ, ಸಂತೋಷ ಆಳ್ವ ಗಿರಿಮನೆ, ಶ್ರೀಮತಿ ಕನ್ನಡ್ಕ, ಜ್ಯೋತಿ ಅಂಬಟೆಮೂಲೆ, ಸುಜಾತ ಮೖೆಂದನಡ್ಕ, ಸವಿತಾ ನೆರೋಳ್ತಡ್ಕ ಹೇಮಾವತಿ ಮೋಡಿಕೆ ಉಪಸ್ಥಿತರಿದ್ದರು. ಕಾರ್ಯದರ್ಶಿ ಕೊರಗಪ್ಪ ನಾಯ್ಕ ಸ್ವಾಗತಿಸಿ, ವಂದಿಸಿದರು. ಫಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.










