





ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು (ರಿ.), ವಿದ್ಯಾಭಾರತಿ ಉಚ್ಛ ಶಿಕ್ಷ ಸಂಸ್ಥಾನ, ಕರ್ನಾಟಕ (ರಿ.) ಹಾಗೂ ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್ ನ ಸಹಯೋಗದೊಂದಿಗೆ “ಶಿಕ್ಷಕರಿಗಾಗಿ ವೇದಗಣಿತ ಆನ್ಲೈನ್ ಸರ್ಟಿಫಿಕೇಟ್ ಕೋರ್ಸ್” ಆಯೋಜಿಸಲ್ಪಟ್ಟಿದ್ದು, ಇದರ ಸಮಾರೋಪ ಕಾರ್ಯಕ್ರಮ ನ.24ರಂದು ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ, ಪುತ್ತೂರಿನಲ್ಲಿ ನಡೆಯಿತು.



ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿದ ಸಂಪನ್ಮೂಲ ವ್ಯಕ್ತಿ ಉಷಾ ದೇವಿ ಕೆ ಪಿ, ಸಹ ಶಿಕ್ಷಕರು, ಸರಕಾರಿ ಪ್ರೌಢಶಾಲೆ, ದೋಲ್ಪಾಡಿ ಮಾತನಾಡಿ ನಮ್ಮ ಹಿರಿಯರು ಮೊದಲೇ ಗಣಿತದ ಸುಲಭ ಸೂತ್ರಗಳ ವಿಧಾನಗಳನ್ನು ನೀಡಿದ್ದಾರೆ ಅದನ್ನು ಉಪಯೋಗಿಸದೆ ಇಂದು ಮರೆಯಾಗುತ್ತಿದೆ ಇವುಗಳನ್ನು ನಾವು ಕಲಿತು ನಮ್ಮ ವಿದ್ಯಾರ್ಥಿಗಳಿಗೂ ಕಲಿಸಿ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳೋಣ. ಮುಂದಿನ ಪೀಳಿಗೆಗೆ ವೇದಗಣಿತವನ್ನು ತಿಳಿಸೋಣ ಎಂದರು.





ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶೋಭಿತ ಸತೀಶ್ ತರಬೇತಿ ಪಡೆದ ಎಲ್ಲಾ ಶಿಕ್ಷಕರು ತಮ್ಮ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಇದನ್ನು ಕಲಿಸಿಕೊಡಬೇಕೆಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿ ಸಂಚಾಲಕರಾದ ಗಂಗಮ್ಮ ಎಚ್ ಶಾಸ್ತ್ರಿ ಮಾತನಾಡಿ ಹೊಸ ಹೊಸ ವಿಚಾರಗಳಿಗೆ ಮನಸ್ಸಿನ ಕದ ತೆರೆಡಿಡಬೇಕು ಇದರಿಂದ ಮನಸ್ಸು ಅರಳುತ್ತದೆ ಜ್ಞಾನ ವೃದ್ಧಿಯಾಗುತ್ತದೆ ಎಂದರು.
ಸಂಯೋಜಕರಾದ ಮುರಳೀಕೃಷ್ಣ ಕೆ ಸ್ವಾಗತಿಸಿ, ಧನ್ಯವಾದ ಸಲ್ಲಿಸಿದರು. ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಾದ ಭಾಷಾ, ಶೋಭಿತ ಪ್ರಾರ್ಥಿಸಿ, ಸುಚಿತ್ರ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ತರಬೇತಿ ಪಡೆದ ಶಿಕ್ಷಕರು, ಕಾಲೇಜಿನ ಸಹಾಯಕ ಪ್ರಾಧ್ಯಾಪಕರು ಮತ್ತು ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.










