





ಪುತ್ತೂರು:ವಾಟ್ಸಪ್ ಸ್ಟೇಟಸ್ ವಿಚಾರದಲ್ಲಿ ವ್ಯಕ್ತಿಯೊಬ್ಬರಿಗೆ ಮೂವರು ಹಲ್ಲೆ ನಡೆಸಿದ ಕುರಿತು ಪತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕೈಕಾರ ಕನ್ನಡ ನಿವಾಸಿ ನವೀನ್ ಕುಮಾರ್ ರೈ (47ವ)ರವರು ಹಲ್ಲೆಗೊಳಗಾದವರು. ‘ಒಳಮೊಗ್ರು ಗ್ರಾಮದ ಪರ್ಪುಂಜ ಚಾವಡಿ ರೆಸ್ಟೋರೆಂಟ್ನಲ್ಲಿ ಊಟ ಮಾಡಿಕೊಂಡಿದ್ದ ಸಂದರ್ಭ ಸುಜಿತ್ ಸೆಂಟ್ಯಾರ್ ಮತ್ತು ಭವಿತ್ ಕುಮಾರ್ ರೈ ಅವರು ವಾಟ್ಸಪ್ ಸ್ಟೇಟಸ್ ವಿಚಾರದಲ್ಲಿ ತಗಾದೆ ತೆಗೆದು ಗಲಾಟೆ ಮಾಡಿದ್ದರು.ಹೊಟೇಲ್ ನಿಂದ ಹೊರಗೆ ಬರುತ್ತಿದ್ದಂತೆ ಸುಜಿತ್, ಅಮರ್ ರೈ ಮತ್ತು ಭವಿತ್ ಅವರು ನನಗೆ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾರೆ” ಎಂದು ನವೀನ್ ಕುಮಾರ್ ರೈ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.












