





ಪುತ್ತೂರು: ಪುತ್ತೂರು ದರ್ಬೆಯಲ್ಲಿರುವ ಶಶಿಶಂಕರ ಸಭಾಂಗಣದಲ್ಲಿ ನಡೆಯುತ್ತಿರುವ ಸರಣಿ ನೃತ್ಯ ಕಾರ್ಯಕ್ರಮ ‘ನೃತ್ಯಾಂತರಂಗ’ ಇದರ 137ನೇ ಆವೃತ್ತಿಯಲ್ಲಿ ಕರಾವಳಿಯ ಯುವ ನೃತ್ಯ ಗುರುಗಳಿಂದ ಮೋಹಕ ನೃತ್ಯ ಪ್ರಸ್ತುತಿ ನಡೆಯಿತು.


ಕರಾವಳಿಯ ಕಲಾವಿದರಾದ ರಾಧಿಕಾ ಶೆಟ್ಟಿ ಮಂಗಳೂರು, ವಿದುಷಿ ಅನ್ನಪೂರ್ಣ ರಿತೇಶ್ ಮುಲ್ಕಿ, ಬಾ. ಮಂಜರಿಚಂದ್ರ ಉಡುಪಿ ಹಾಗೂ ಪುತ್ತೂರಿನ ನೃತ್ಯ ದಂಪತಿ ವಿದ್ವಾನ್ ದೀಪಕ್ ಕುಮಾರ್, ವಿದುಷಿ ಪ್ರೀತಿಕಲಾ ಇವರಿಂದ ಕೃಷ್ಣನ ಕುರಿತಾಗಿ ವಿವಿಧ ಆಯಾಮಗಳು ಭಕ್ತಿಯ ಪ್ರಸ್ತುತಿ “ಕೃಷ್ಣಾನಂದ ಲಹರಿ’ ಪ್ರಸ್ತುತಿ ನಡೆಯಿತು.





ಮಂಗಳೂರಿನ ಕಲೆ ಸಂಸ್ಕೃತಿಯ ಆನ್‌ಲೈನ್ ಪತ್ರಿಕೆ ರೂವಾರಿಯ ಪ್ರಧಾನ ಸಂಪಾದಕರಾದ ರತ್ನಾವತಿ ಜೆ. ಬೈಕಾಡಿ ಕಾರ್ಯಕ್ರಮ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.









