





ಪುತ್ತೂರು: ಪಾಣಾಜೆ ಗ್ರಾ.ಪಂ.ನ 2025-26ನೇ ಸಾಲಿನ ಮಹಿಳಾ ಗ್ರಾಮ ಸಭೆ ನ.28ರಂದು ಗ್ರಾ.ಪಂ.ಸಭಾಭವನದಲ್ಲಿ ನಡೆಯಿತು.


ಪುತ್ತೂರು ಮಹಿಳಾ ಸಾಂತ್ವನಾ ಕೇಂದ್ರದ ಆಪ್ತ ಸಮಾಲೋಚಕಿ ನಿಶಾಪ್ರಿಯರವರು ಮಾತನಾಡಿ ಮಹಿಳೆಯರು ದೈಹಿಕವಾಗಿ, ಮಾನಸಿಕವಾಗಿ ತೊಂದರೆಗೊಳಗಾದಾಗ ಪುತ್ತೂರಿನ ಸಾಂತ್ವನ ಕೇಂದ್ರಕ್ಕೆ ಭೇಟಿ ನೀಡಬಹುದು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಸಾಂತ್ವನ ಕೇಂದ್ರ ಆರಂಭವಾಗಿದೆ. ಮಹಿಳೆಯರು ಕೌಟುಂಬಿಕ ಸಮಸ್ಯೆ, ದೌರ್ಜನ್ಯಗೊಳಗಾದ ಸಂದರ್ಭದಲ್ಲಿ ಸಾಂತ್ವನ ಕೇಂದ್ರದಲ್ಲಿ ಸಮಾಲೋಚನೆ ನಡೆಸಲಾಗುತ್ತದೆ. ಪಸ್ತುತ ಮದುವೆಯಾಗುವ ಮೊದಲು ಗರ್ಭ ಧರಿಸಿದ ಪ್ರಕರಣಗಳು ಹೆಚ್ಚಾಗಿರುತ್ತದೆ. ಇದಕ್ಕೆ ಮಕ್ಕಳ ಬಗ್ಗೆ ಪೋಷಕರು ಜಾಗ್ರತೆ ವಹಿಸಬೇಕು. ಸಾಮಾಜಿಕ ಜಾಲತಾಣದ ಉಪಯೋಗಿಸುವ ಮಕ್ಕಳನ್ನು ಪರಿಶೀಲನೆ ಮಾಡಬೇಕು ಎಂದು ಹೇಳಿದರು.





ಮಹಿಳೆಯರು ಕೂಡ ತಾಳ್ಮೆಯಿಂದ ಕುಟುಂಬವನ್ನು ನೋಡಿಕೊಳ್ಳಬೇಕು. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ಪ್ರತಿಯೊಬ್ಬರೂ ವರ್ತನೆ ಬದಲಾವಣೆಯಾದಾಗ ಮಾನಸಿಕ ತಜ್ಞರನ್ನು ಭೇಟಿಯಾಗಿ ಪರಿಹಾರ ಕಂಡುಕೊಳ್ಳಬೇಕು ಮಕ್ಕಳು ಬೇಡವಾದ ಸಂದರ್ಭದಲ್ಲಿ ಮಮತೆಯ ತೊಟ್ಟಿಲು ಅಥವಾ ಆಶ್ರಮಗಳು ಇದೆ ಅಲ್ಲಿಗೆ ಕೊಡಬಹುದು. ಅಲ್ಲದೆ ಮಹಿಳೆಯರ ಸಬಲೀಕರಣಗೊಳಿಸಲು 6 ತಿಂಗಳಿನಿಂದ 3 ವರ್ಷದವರೆಗಿನ ಮಕ್ಕಳನ್ನು ನೋಡಿಕೊಳ್ಳಲು ಗ್ರಾಮ ಪಂಚಯತ್ ಮಟ್ಟದಲ್ಲಿ ಕೂಸಿನ ಮನೆಯ ಯೋಜನೆ ಇದೆ. ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ವಿಮಲಾ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಯತ್ ಸದಸ್ಯೆ ಮಾತನಾಡಿ ಮಹಿಳೆಯರ ಅನುಕೂಲಕ್ಕಾಗಿ ಹಾಗೂ ಸರಕಾರದ ಸೌಲಭ್ಯಗಳನ್ನು ಮಹಿಳೆಯರು ಪಡೆದುಕೊಳ್ಳಬೇಕೆಂಬ ಉದ್ಧೇಶದಿಂದ ಮಹಿಳಾ ಗ್ರಾಮಸಭೆ ಆರಮಭಿಸಲಾಗಿದೆ. ಇದರಲ್ಲಿ ಹೆಚ್ಚಿನ ಮಹಿಳೆಯರು ಭಾಗವಹಿಸಿ ಸರಕಾರದ ಯೋಜನೆ ಪಡೆದುಕೊಳ್ಳಬೇಕು ಎಂದರು.
ಸದಸ್ಯರಾದ ನಾರಾಯಣ ನಾಯಕ್, ಸುಲೋಚನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಆಶಾ ಸ್ವಾಗತಿಸಿ ವಂದಿಸಿದರು. ಸಂಜೀವಿನಿ ಒಕ್ಕೂಟದ ಸದಸ್ಯರು, ಮಹಿಳಾ ಗ್ರಾಮಸ್ಥರು ಭಾಗವಹಿಸಿದ್ದರು.









