




ಬಡಗನ್ನೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಬಯಲಾಟ ಸಮಿತಿ ಪಟ್ಟೆ ಇದರ ಆಶ್ರಯದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ “ಶ್ರೀ ದೇವಿ ಮಹಾತ್ಮೆ “ಎಂಬ ಪುಣ್ಯಕಥಾಪ್ರಸಂಗದ ಯಕ್ಷಗಾನ ಬಯಲಾಟ ಡಿ. 6 ರಂದು ಪಟ್ಟೆ ಶ್ರೀಕೃಷ್ಣ ವಿದ್ಯಾ ಸಂಸ್ಥೆಯ ವಠಾರದಲ್ಲಿ ನಡೆಯಲಿದೆ.



ಕಾರ್ಯಕ್ರಮವು ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕರಾದ ವೇದಮೂರ್ತಿ ಶ್ರೀ ಹರಿನಾರಾಯಣದಾಸ ಆಸ್ರಣ್ಣರ ರವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದೆ. ಕಟೀಲು ಮೇಳಗಳ ಸಂಚಾಲಕ ದೇವೀಪ್ರಸಾದ್ ಶೆಟ್ಟಿ ಕಲ್ಲಾಡಿ ರವರು ದೀಪಪ್ರಜ್ವಲಿಸಿ ಉದ್ಘಾಟಿಸಲಿದ್ದಾರೆ.





ಆ ಕಾರ್ಯಕ್ರಮದಲ್ಲಿ ಕಲಾಭಿಮಾನಿಗಳಾದ ತಾವೆಲ್ಲರೂ ಬಂಧು-ಮಿತ್ರರೊಡಗೂಡಿ ಆಗಮಿಸಿ, ಶ್ರೀದೇವಿಯ ಪ್ರಸಾದ ಸ್ವೀಕರಿಸಿ, ತನು-ಮನ-ಧನಗಳಿಂದ ಸಹಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿಯ ಕೃಪೆಗೆ ಪಾತ್ರರಾಗುವಂತೆ ಗೌರವಾಧ್ಯಕ್ಷರುಗಳಾದ ಗೋಪಾಲಕೃಷ್ಣ ಭಟ್ ದ್ವಾರಕ, ನಾರಾಯಣ ಭಟ್ ಬಿರ್ನೋಡಿ, ಅಧ್ಯಕ್ಷ ಅಚ್ಚುತ ಭಟ್ ಪಾದೆಕರ್ಯ, ಕಾರ್ಯದರ್ಶಿ ಪದ್ಮನಾಭ ರೖೆ ಅರೆಪ್ಪಾಡಿ ಕೋಶಾಧಿಕಾರಿ ಸುಬ್ಬಪ್ಪ ಪಾಟಾಳಿ ಪಟ್ಟೆ, ಸಂಘಟನಾ ಕಾಲ್ಯದರ್ಶಿ ಲಿಂಗಪ್ಪ ಗೌಡ ಮೋಡಿಕೆ ಹಾಗೂ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕಾರ್ಯಕ್ರಮಗಳು :-
ಡಿ. 6ರಂದು ಸಂಜೆ ಗಂಟೆ 5-45ಕ್ಕೆ : ಚೌಕಿಪೂಜೆ, ಪ್ರಸಾದ ವಿತರಣೆ 6 ರಿಂದ : ಯಕ್ಷಗಾನ ಬಯಲಾಟ,ರಾತ್ರಿ ಗಂ 8 ರಿಂದ : ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.








