ಪುತ್ತೂರ್ದ ಮುತ್ತು ಲಯನ್ಸ್ ಕ್ಲಬ್ ನಿಂದ ಚಾರ್ಟರ್ ನೈಟ್ ವಲಯ ಅಧ್ಯಕ್ಷರ ಅಧಿಕೃತ ಭೇಟಿ ವಲಯ ಸಮಾವೇಶ ಕಾರ್ಯಕ್ರಮ

0

ಪುತ್ತೂರು: ಪುತ್ತೂರ್ದ ಮುತ್ತು ಲಯನ್ಸ್ ಕ್ಲಬ್ಬಿನಿಂದ ಚಾರ್ಟರ್ ನೈಟ್ ವಲಯ ಅಧ್ಯಕ್ಷರ ಅಧಿಕೃತ ಭೇಟಿ ವಲಯ ಸಮಾವೇಶ ಕಾರ್ಯಕ್ರಮವು ಇತ್ತೀಚೆಗೆ ಜರಗಿತು. ಕಾರ್ಯದರ್ಶಿ ಲಯನ್ ಅನಸೂಯ ಬಾಯ್ ವರದಿ ವಾಚಿಸಿದರು. ಲಯನ್ ಸುದರ್ಶನ್ ಪಡಿಯಾರ್ mjf ಚಾರ್ಟರ್ ನೈಟ್ ಕಾರ್ಯಕ್ರಮವನ್ನು ದೀಪ ಬೆಳಗಿಸಿದರು.

ನೂತನ ಸದಸ್ಯರಾಗಿ ಗಿರೀಶ್ ರೈ, ವಾಣಿ ಶೆಟ್ಟಿ ರವರನ್ನು ಸೇರ್ಪಡೆಗೊಳಿಸಿ, ವತ್ಸಲ ಶೆಟ್ಟಿ ಅವರ ಪರಿಚಯವನ್ನು ಮಾಡಿದರು. ಸೇವಾ ಚಟುವಟಿಕೆಗಳಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಕೊಂಬೆಟ್ಟಿಗೆ ಒಂದು ಪೋಡಿಯಂ ಅನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಹತ್ತು ಜನ ಕೃಷಿಕರನ್ನು, ಮೂವರು ಎನ್. ಸಿ.ಸಿ. ಕ್ಯಾಡೇಟ್ಗಳಾದ ಕೊಂಬೆಟ್ಟು ಪ್ರೌಢಶಾಲೆಯ ಕೃಪಾಲಿ, ಪೂರ್ವಿ ಕೆ ಗೌಡ, ಶಿಲ್ಪಾ ರವರನ್ನು,ಯನ್. ಎಸ್. ಎಸ್. ವಾಲೆಂಟಿಯರ್ಸ್ ಗಳಾದ ಫಿಲೋಮಿನಾ ಪದವಿ ಕಾಲೇಜಿನ ವಿದ್ಯಾರ್ಥಿಗಳಾದ ಮನೀಶ್ ಬಿ. ಪಿ, ಭರತ್ ಬಿ.ಕೆ, ಆಕಾಶ್ ರೈ, ಎನ್. ಎಸ್. ಎಸ್. ಆಫೀಸರ್ ಚಂದ್ರಶೇಖರ್ ರವರನ್ನು,ಮೂವರು ಸ್ಕೌಟ್ ಮತ್ತು ಗೈಡ್ಸ್ ಗಳಾದ ಚಿಂತನ್ ಸಾಲಿಯಾನ್, ಅಮೃತ್, ಕಾವ್ಯರನ್ನು ಸನ್ಮಾನಿಸಲಾಯಿತು.

ವಲಯ ಅಧ್ಯಕ್ಷರಾದ ಜೆಸಿಂತ ಮಸ್ಕರೇನಸ್ mjf ಕ್ಲಬ್ ನ ಕಾರ್ಯ ಚಟುವಟಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಾಂತೀಯ ಅಧ್ಯಕ್ಷ ಆನಂದ ರೈ ಯವರು ಉತ್ತಮ ಸೇವಾ ಚಟುವಟಿಕೆಗಳ ಬಗ್ಗೆ ಪ್ರಶಂಸನೀಯ ಮಾತುಗಳನ್ನಾಡಿದರು. ಜಿಲ್ಲಾ ರಾಯಭಾರಿ ಲಯನ್ ಹೇಮನಾಥ ಶೆಟ್ಟಿ Mjf ಕ್ಲಬ್ ನ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ PRO ಸುದರ್ಶನ್ ಪಡಿಯಾರ್ mjf, ವಲಯ ಅಧ್ಯಕ್ಷರಾದ ಲಯನ್ ಆನಂದ ರೈ, ವಲಯ ಅಧ್ಯಕ್ಷರಾದ ಜೆಸಿಂತಾ ಮಾಸ್ಕರೇನಸ್ mjf ಜಿಲ್ಲಾ ರಾಯಭಾರಿ ಲಯನ್ ಹೇಮನಾಥ ಶೆಟ್ಟಿ ಕಾವು mjf , ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಲಯನ್ ಅಬೂಬಕರ್ ಮುಲಾರ್ , ಉತ್ತಮ ಸಂಘ ಸಂಸ್ಥೆ ಪ್ರಶಸ್ತಿ ಪಡೆದ ಜೆಸಿಐ ಅಧ್ಯಕ್ಷ ಭಾಗ್ಯೇಶ್ ರೈ ಅವರನ್ನು ಸನ್ಮಾನಿಸಲಾಯಿತು.

ಲಯನ್ ವೇದಾವತಿ ರಾಜೇಶ್ ಅಧ್ಯಕ್ಷತೆ ವಹಿಸಿ ತನ್ನ ಅವಧಿಯಲ್ಲಿ ಸದಸ್ಯರ ಸಂಖ್ಯೆಯನ್ನು 30 ಮಾಡುವುದಾಗಿ ತಿಳಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಕ್ಲಬ್ ನ ಎಲ್ಲಾ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ಅದೇ ದಿನ ಸಂಜೆ 6:30ಕ್ಕೆ ಝೋನ್ ಎಡ್ವೈಸರಿ ಮೀಟಿಂಗನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಜಿಎಂಟಿ ಕೋ-ಓರ್ಡಿನೇಟರ್ ಜೂಲಿಯೆಟ್ ಮಸ್ಕರೇನಸ್ ಪಿರೇರ ಉಪಸ್ಥಿತರಿದ್ದು ಹಲವು ಮಾಹಿತಿ, ಸಲಹೆ, ಸೂಚನೆಗಳನ್ನು ನೀಡಿದರು.

ವೇದಿಕೆಯಲ್ಲಿ ರಿಜನ್ ಅಂಬಾಜಿಟರ್ ಸದಾನಂದ ಶೆಟ್ಟಿ mjf, ಐಪಿಪಿ ರವೀಂದ್ರ ಪೈ ಲಿಯೋ ಕ್ಲಬ್ ಪುತ್ತೂರ್ದ ಮುತ್ತು ಅಧ್ಯಕ್ಷರಾದ ಚಿಂತನ್ ಸಾಲಿಯಾನ್ ಉಪಸ್ಥಿತರಿದ್ದರು. ಝೋನ್ 2ರ ಅಧ್ಯಕ್ಷ ಜಗನ್ನಾಥ ರೈ ಯವರನ್ನು ಹೂ ನೀಡಿ ಗೌರವಿಸಲಾಯಿತು. ಲಯನ್ ಯಶುಭ ರೈ ಪ್ರಾರ್ಥಿಸಿ, ನೀತಿ ಸಂಹಿತೆ ವಾಚಿಸಿದರು. ಲಯನ್ ಭಾಗ್ಯೇಶ್ ರೈ ಧ್ವಜ ವಂದನೆ ವಾಚಿಸಿದರು. ರವಿಪ್ರಕಾಶ್ ಶೆಟ್ಟಿ, ಲಯನ್ ಪ್ರತಿಮಾರೈ, ಲಯನ್ ದಯಾನಂದ ರೈ, ಲಯನ್ ವತ್ಸಲ ಶೆಟ್ಟಿ ಪರಿಚಯ ವಾಚಿಸಿದರು. ಈ ಸಂದರ್ಭದಲ್ಲಿ ವಲಯ 7ರ ವಿವಿಧ ಕ್ಲಬ್ ಗಳ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಸದಸ್ಯರು ಪುತ್ತೂರ್ದ ಮುತ್ತು ಲಯನ್ಸ್ ಕ್ಲಬ್ ನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಲಯನ್ ಸುಪ್ರೀತ್ ಬಿ ಬಿ ವಂದನಾರ್ಪಣೆಗೈದರು.

LEAVE A REPLY

Please enter your comment!
Please enter your name here