ಮುಂಬೈ ಹೈಕೋರ್ಟ್ ನ್ಯಾಯವಾದಿ ಬೈಲಾಡಿ ಪಲ್ಲತ್ತಡ್ಕ ಪಿ.ಟಿ ಗೌಡ ನಿಧನ

0

ಪುತ್ತೂರು: ಪ್ರತಿಷ್ಠಿತ ಬೈಲಾಡಿ ಮನೆತನದ ಕೆಯ್ಯರು ಗ್ರಾಮಾದ ಪಲ್ಲತ್ತಡ್ಕ ನಿವಾಸಿ ಮುಂಬೈ ಹೈಕೋರ್ಟ್ ನ್ಯಾಯವಾದಿ ಪಿ ತಿಮ್ಮಪ್ಪ ಗೌಡ (73ವರ್ಷ) ಅವರು ಡಿ.3 ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.


ಪಿ ತಿಮ್ಮಪ್ಪ ಗೌಡ ಅವರು ಎಳೆಯ ಪ್ರಾಯದಲ್ಲಿ ಕೆಲಸದ ನಿಮಿತ್ತ ಮುಂಬೈಗೆ ಹೋಗಿ, ಮುಂಬೈ ಬೋರಿಂಗ್ ವರ್ಕ್ಸ್ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾ ಇದ್ದು, ನಂತರ ಕಾನೂನು ಪದವಿಯನ್ನು ಅಲ್ಲಿಯೇ ಪಡೆದು, ತದ ನಂತರ ಮುಂಬೈ ಹೈಕೋರ್ಟ್ ನಲ್ಲಿ ವಕೀಲ ವೃತ್ತಿಯನ್ನು ಮಾಡುತ್ತಿದ್ದರು. ಮುಂಬೈಯ ಅವರ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡ ಅವರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಮೂವರು ಸಹೋದರರು, ಓರ್ವ ಸಹೋದರಿಯನ್ನು ಹಾಗೂ ಕುಟುಂಬಸ್ಥರನ್ನು ಆಗಲಿರುತ್ತಾರೆ. ಅವರ ಅಂತಿಮ ಕಾರ್ಯವು ಅವರ ಹುಟ್ಟೂರಾದ ಕೆಯ್ಯೂರು ಗ್ರಾಮ ಪಲ್ಲತ್ತಡ್ಕದಲ್ಲಿ ಡಿ.4ರಂದು ನಡೆಯಲಿದೆ.

LEAVE A REPLY

Please enter your comment!
Please enter your name here