




ಪುತ್ತೂರು:69 ನೇ ನ್ಯಾಷನಲ್ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ಇದರ ವತಿಯಿಂದ ನ.30 ರಿಂದ ಡಿ.5 ರವರೆಗೆ ದೆಹಲಿಯಲ್ಲಿ ಜರಗಿದ 2025-26 ನೇ ಸಾಲಿನ ರಾಷ್ಟ್ರ ಮಟ್ಟದ ಈಜು ಸ್ಪರ್ಧೆಯಲ್ಲಿ ದಿಗಂತ್ ವಿ. ಎಸ್. 100 ಮೀ. ಬ್ಯಾಕ್ ಸ್ಟ್ರೋಕ್ ವಿಭಾಗದಲ್ಲಿ ಕಂಚಿನ ಪದಕ ಪಡೆದಿರುತ್ತಾರೆ.



ಇವರು ಪುತ್ತೂರಿನ ಬಾಲವನದ ಪುತ್ತೂರು ಅಕ್ವಟಿಕ್ ಕ್ಲಬ್ ಈಜುಕೊಳದಲ್ಲಿ ಅಂತರಾಷ್ಟ್ರೀಯ ತರಬೇತುದಾರರಾದ ಪಾರ್ಥ ವಾರಣಾಶಿ ಮತ್ತು ಮುಖ್ಯ ತರಬೇತುದಾರ ಕ್ರಾಂತಿತೇಜ ಇವರಿಂದ ತರಬೇತಿ ಪಡೆಯುತಿದ್ದಾರೆ. ದಿಗಂತ್ ಸೈಂಟ್ ಫಿಲೋಮಿನ ಪಿ ಯು ಕಾಲೇಜಿನ ಪಿಸಿಎಂಸಿ ವಿಭಾಗದಲ್ಲಿ ಕಲಿಯುತಿದ್ದು ಎಸ್‌ಸಿಡಿಸಿಸಿ ಬ್ಯಾಂಕ್ ಕುಂಬ್ರ ಶಾಖಾ ಪ್ಯವಸ್ಥಾಪಕರಾದ ವಿಶ್ವನಾಥ ಎಸ್ ಹಾಗೂ ಕ್ಯಾಂಪ್ಕೋ ಚಾಕಲೇಟು ಫ್ಯಾಕ್ಟರಿಯಲ್ಲಿ ಅಕೌಂಟ್ಸ್ ಮ್ಯಾನೇಜರ್ ಆಗಿರುವ ವೀಣಾ ಕುಮಾರಿ ದಂಪತಿಗಳ ಪುತ್ರ.













