




ಆಲಂಕಾರು: ದುರ್ಗಾಂಬಾ ಪದವಿಪೂರ್ವ ಕಾಲೇಜ್ ಆಲಂಕಾರಿನ ವಾರ್ಷಿಕ ಕ್ರೀಡಾಕೂಟ ಮತ್ತು ಸನ್ಮಾನ ಕಾರ್ಯಕ್ರಮ ದುರ್ಗಾಂಬಾ ಪದವಿ ಪೂರ್ವ ಕಾಲೇಜ್ ನಲ್ಲಿ ನಡೆಯಿತು.



ಬಾಂಗ್ಲಾದೇಶದ ರಾಜಧಾನಿ ಢಾಕದಲ್ಲಿ ನಡೆದ ಅಂತರಾಷ್ಟ್ರೀಯ ಕಬಡ್ಡಿ ಪಂದ್ಯಾಟದಲ್ಲಿ ಚಿನ್ನದ ಪದಕ ಗೆದ್ದ ಕುಮಾರಿ ಧನಲಕ್ಷ್ಮಿಯವರನ್ನು ತೆರೆದ ಜೀಪ್ ಮೂಲಕ ಆಲಂಕಾರು ಪೇಟೆಯಿಂದ ಮೆರವಣಿಗೆಯಲ್ಲಿ ಕಾಲೇಜು ಆವರಣವರೆಗೆ ಕರೆ ತರಲಾಯಿತು. ನಂತರ ವಿದ್ಯಾರ್ಥಿಗಳ ಪಥ ಸಂಚಲನದಲ್ಲಿ ಕುಮಾರಿ ಧನಲಕ್ಷ್ಮಿಯವರು ಗೌರವ ವಂದನೆ ಸ್ವೀಕರಿಸಿದರು. ಕ್ರೀಡಾಕೂಟದ ಉದ್ಘಾಟನೆಯ ಸಭಾಧ್ಯಕ್ಷತೆಯನ್ನು ಆಡಳಿತ ಮಂಡಳಿ ಅಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು ವಹಿಸಿದ್ದರು.





ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಕ್ರೀಡೆ ಮನಸ್ಸಿಗೆ ಮತ್ತು ದೈಹಿಕವಾಗಿ ಆರೋಗ್ಯವನ್ನು ಕೊಡುತ್ತದೆ. ಗಂಡು ಮಕ್ಕಳು ಸಾಧನೆ ಮಾಡುವುದರ ಜೊತೆಗೆ ಹೆಣ್ಣು ಮಕ್ಕಳು ಕೂಡ ಸಾಧನೆ ಮಾಡುವುದರಲ್ಲಿ ಯಾರಿಗೂ ಕಡಿಮೆ ಇಲ್ಲ ಎನ್ನುವುದಕ್ಕೆ ಕುಮಾರಿ ಧನಲಕ್ಷ್ಮಿ ಯವರೇ ಸಾಕ್ಷಿ. ಅವರು ಮಾಡಿರುವ ಸಾಧನೆ ಇಡೀ ಊರಿಗೆ ಹೆಮ್ಮೆ ತಂದಿದೆ ಎಂದು ಹೇಳಿದ ಅವರು ಕ್ರೀಡಾಕೂಟಕ್ಕೆ ಶುಭಹಾರೈಸಿದರು.
ಅತಿಥಿಗಳಾಗಿ ಪ್ರಗತಿಪರ ಕೃಷಿಕರಾದ ಜನಾರ್ದನ ಗೌಡ ಕಯ್ಯಪೆ ಮತ್ತು ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ಪಂಜ ಇದರ ಸ್ಥಾಪಕ ಅಧ್ಯಕ್ಷ ಚಂದ್ರಶೇಖರ ಪಂಜ ಕಾರ್ಯಕ್ರಮದಲ್ಲಿ ಶುಭಹಾರೈಸಿದರು. ಕಾಲೇಜು ವತಿಯಿಂದ ಧನಲಕ್ಷ್ಮೀ ಯವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿದ ವಿಶ್ವಕಪ್ ಚಿನ್ನದ ಪದಕ ವಿಜೇತ ಅಂತರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಕುಮಾರಿ ಧನಲಕ್ಷ್ಮಿ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಿಕ್ಕಿರುವ ಪ್ರೇರಣೆ ಮತ್ತು ಸಹಕಾರಗಳನ್ನು ಸ್ಮರಿಸಿ, ವಿದ್ಯಾರ್ಥಿಗಳು ಸಾಧನೆ ಮಾಡುವಂತೆ ಸ್ಪೂರ್ತಿದಾಯಕ ಮಾತುಗಳಾಡಿದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಈಶ್ವರ ಗೌಡ ಪಜ್ಜಡ್ಕ, ಅಡಳಿತ ಮಂಡಳಿಯ ಸದಸ್ಯರಾದ ವಿಜಯಕುಮಾರ್ ರೈ ಮನವಳಿಕೆ, ಮುತ್ತಪ್ಪ ಪೂಜಾರಿ ನೈಯ್ಯಲ್ಗ, ತಾರನಾಥ ರೈ ನಗ್ರಿ, ಹೇಮಂತ್ ರೈ ಮನವಳಿಕೆ, ಇಂದುಶೇಖರ ಶೆಟ್ಟಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶ್ರೀನಾಥ್ ಗೌಡ ಪಿ, ಆಡಳಿತಾಧಿಕಾರಿಗಳಾದ ಶ್ರೀಪತಿ ರಾವ್ ಎಚ್, ಮುಖ್ಯ ಗುರುಗಳಾದ ನವೀನ್ ರೈ, ಉಪಸ್ಥಿತರಿದ್ದರು. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ನಿಶ್ಮಿತಾ, ಯಶಸ್ವಿನಿ ಬಿ, ಶ್ರದ್ದಾ ಕ್ರೀಡಾ ಜ್ಯೋತಿ ಬೆಳಗಿಸಿದರು.
ವಿದ್ಯಾರ್ಥಿನಿಯರಾದ ಅನ್ಸಿಕಾ, ನಿತ್ಯ, ವಿಜೇತ, ಕೃತಿಕಾ ಅವರ ಪ್ರಾರ್ಥಸಿ, ಇಂಗ್ಲಿಷ್ ಶಿಕ್ಷಕ ಜನಾರ್ದನ ರವರು ಕಾರ್ಯಕ್ರಮ ನಿರೂಪಿಸಿದರು. ಪ್ರಾಂಶುಪಾಲರಾದ ರೂಪ ಜೆ ರೈ ಸ್ವಾಗತಿಸಿ, ಉಪನ್ಯಾಸಕಿ ಆಶಾರವರು ಸನ್ಮಾನಿತರ ಪರಿಚಯ ಪತ್ರ ವಾಚಿಸಿದರು. ಬೋಧಕ ಮತ್ತು ಬೋಧಕೇತರ ವರ್ಗದವರು ಸಹಕರಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಶ್ರೇಯಸ್ಸು ರೈ ವಂದಿಸಿದರು.










