




ಉಪ್ಪಿನಂಗಡಿ: ಅನಾಥವಾಗಿ ಪತ್ತೆಯಾಗಿದ್ದ 3 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಹತ್ತು ಸಾವಿರ ರೂ. ನಗದಿದ್ದ ಹಣದ ಬ್ಯಾಗನ್ನು ಅದರ ವಾರೀಸುದಾರರಿಗೆ ಹಸ್ತಾಂತರಿಸುವ ಮೂಲಕ ಪ್ರಾಮಾಣಿಕತೆ ಮೆರೆದ ಘಟನೆಯೊಂದು ಉಪ್ಪಿನಂಗಡಿಯಲ್ಲಿ ನಡೆದಿದೆ.



ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಅಂಡಿಲ ನಿವಾಸಿ ರಕ್ಷಿತ್ ಅವರ ಪತ್ನಿ ದೀಕ್ಷಾ ಅವರು ಡಿ.10ರಂದು ಸಂಜೆ ಚಿನ್ನಾಭರಣ, ನಗದು ಇದ್ದ ಬ್ಯಾಗನ್ನು ಕಳೆದುಕೊಂಡಿದ್ದರು. ಹೊಟೇಲ್ ಆದಿತ್ಯದ ಬಳಿ ಅನಾಥವಾಗಿ ಬಿದ್ದಿದ್ದ ಈ ಬ್ಯಾಗ್ ಬಜತ್ತೂರು ಗ್ರಾಮದ ನಿವೇದಿತಾ ವಿನಯ್ ಅವರಿಗೆ ಸಿಕ್ಕಿತ್ತು. ಅದನ್ನು ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದು, ಪೊಲೀಸರು ವಿಚಾರಿಸಿ ಅದನ್ನು ಮೂಲ ವಾರೀಸದಾರರಿಗೆ ಒಪ್ಪಿಸಿದ್ದಾರೆ. ನಿವೇದಿತಾ ವಿನಯ್ ಬಜತ್ತೂರುರವರ ಪ್ರಾಮಾಣಿಕತೆಯ ಬಗ್ಗೆ ಸಾರ್ವಜನಿಕರು ಹಾಗೂ ಪೊಲೀಸರು ಪ್ರಶಂಸೆಯನ್ನು ವ್ಯಕ್ತ ಪಡಿಸಿರುತ್ತಾರಲ್ಲದೆ, ವಾರೀಸುದಾರರು ನಿವೇದಿತಾ ಅವರನ್ನು ಸನ್ಮಾನಿಸಿ, ಗೌರವಿಸಿದರು.














