




ಡಿ.14: ಮುರ ಸಮೀಪ ಅದ್ವಿತ್ ಲೇಔಟ್ ಲೋಕಾರ್ಪಣೆ
ಪುತ್ತೂರು: ಬೆದ್ರಾಳ-ಮುಕ್ವೆಯಲ್ಲಿ ಅನಘ ವಸತಿ ಸಮುಚ್ಚಯ ನಿರ್ಮಾಣದ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ಎಸ್‌ಆರ್ ಬಿಲ್ಡರ್ಸ್ ಆಂಡ್ ಡೆವಲಪರ್ಸ್ ಸಂಸ್ಥೆಯು ಮುರ ಸಮೀಪ ಏಳು ಎಕರೆ ವಿಸ್ತೀಣದಲ್ಲಿ ಅದ್ವಿತ್ ಲೇಔಟ್ ನಿರ್ಮಿಸುವ ಮೂಲಕ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ.



ಮುರ ಮುಖ್ಯ ರಸ್ತೆಯಿಂದ 1 ಕಿ.ಮೀ. ದೂರದಲ್ಲಿ, ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ 5 ಕಿ.ಮೀ., ಪುತ್ತೂರು ಮಹಾಲಿಂಗೇಶ್ವರ ದೇವಾಲಯದಿಂದ 4.7 ಕಿ.ಮೀ. ಹಾಗೂ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಿಂದ ಕೇವಲ 1 ಕಿ.ಮೀ. ದೂರದಲ್ಲಿ (ಮುರದ ಕೆದಿಲ ರಸ್ತೆಯಲ್ಲಿ) 7 ಎಕರೆ ಜಾಗದಲ್ಲಿ ನಿರ್ಮಿಸಲಾದ ಅದ್ವಿತ್ ಲೇಔಟ್ ಡಿ.14 ರಂದು ಉದ್ಘಾಟನೆಗೊಳ್ಳಲಿದೆ.






ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಠದ ವಿದ್ಯಾ ಪ್ರಸನ್ನತೀರ್ಥ ಸ್ವಾಮೀಜಿಯವರ ದಿವ್ಯಹಸ್ತದಿಂದ ಲೇಔಟ್ ಉದ್ಘಾಟನೆಗೊಳ್ಳಲಿದೆ. ಸಂಸದ ಕ್ಯಾ.ಬ್ರಿಜೇಶ್ ಚೌಟ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಎಂಎಲ್‌ಸಿ ಕಿಶೋರ್ ಕುಮಾರ್ ಬೊಟ್ಯಾಡಿ, ಜಿಎಲ್ ಆಚಾರ್ಯ ಜುವೆಲರ್ಸ್ ಮುಖ್ಯಸ್ಥ ಬಲರಾಮ ಆಚಾರ್ಯ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಪುತ್ತಿಲ ಪರಿವಾರ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ, ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಘಟಕದ ಅಧ್ಯಕ್ಷ ಉಮೇಶ ನಾಯಕ್, ಪುತ್ತೂರಿನ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ನಿಯಮಿತದ ಅಧ್ಯಕ್ಷ ಭಾಸ್ಕರ ಎಂ ಪೆರುವಾಯಿ, ಮಂಗಳೂರು ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಸಹಾಯಕ ನಿರ್ದೇಶಕಿ ಸ್ವಾತಿ ಎನ್ ಸ್ವಾಮಿ, ಮಂಗಳೂರು ಸಿಟಿ ಕಾರ್ಪೊರೇಷನ್ ಟೌನ್ ಪ್ಲಾನಿಂಗ್ ಆಫೀಸರ್ ಗುರುಪ್ರಸಾದ್, ಉದ್ಯಮಿ ರಾಘವೇಂದ್ರ ಮಯ್ಯ ಅವರು ಅತಿಥಿಗಳಾಗಿ ಆಗಮಿಸಲಿದ್ದಾರೆ.
ಸನ್ಮಾನ :
ರಾಮಕುಂಜ ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆಯ ಶಿಕ್ಷಕ ರಾಜ್ಯ ಪ್ರಶಸ್ತಿ ಪುರಸ್ಕೃತ ಸತೀಶ್ ಭಟ್ ಬಿಳಿನೆಲೆಯವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಗುತ್ತಿದೆ.
ಪ್ರತೀ ಸೈಟ್‌ಗೆ ಕಾಂಕ್ರೀಟ್ ರಸ್ತೆ ಹಾಗೂ ವಿದ್ಯುತ್ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಲೇಔಟ್‌ನಲ್ಲಿ ಎರಡು ಬೋರ್‌ವೆಲ್‌ಗಳನ್ನು ಕೊರೆಸಲಾಗಿದ್ದು, ದಿನದ 24 ಗಂಟೆಯೂ ನೀರಿನ ಸೌಲಭ್ಯ ಇರಲಿದೆ. ಡ್ರೈನೇಜ್ ವ್ಯವಸ್ಥೆ, ಮಕ್ಕಳಿಗೆ ಪ್ಲೇ ಗ್ರೌಂಡ್, ವಾಕಿಂಗ್ ಪಾಥ್ ಅಥವಾ ಸೈಕಲ್ ಪಾಥ್ ಮುಂತಾದ ಸೌಲಭ್ಯಗಳಿರುವ ಸುಸಜ್ಜಿತ ಲೇಔಟ್ ಇದಾಗಿದೆ. ಏಳು ಎಕರೆ ಜಾಗದಲ್ಲಿ ಒಟ್ಟು 79 ಸೈಟ್‌ಗಳು ಲಭ್ಯವಿದೆ.

ಎಸ್‌ಆರ್ ಬಿಲ್ಡರ್ಸ್ ಆಂಡ್ ಡೆವಲಪರ್ಸ್ ನ ಅನಘ ವಸತಿ ಸಮುಚ್ಚಯ ಬೆದ್ರಾಳ-ಮುಕ್ವೆಯಲ್ಲಿದ್ದು, ‘ಎ’ ‘ಬಿ’ ಮತ್ತು ‘ಸಿ’ ಬ್ಲಾಕ್ ಹೊಂದಿದೆ. ಇಲ್ಲಿ ಒಟ್ಟು 150 ಸೈಟ್‌ಗಳಿದ್ದು, ಅದರಲ್ಲಿ 30 ಸೈಟ್‌ಗಳಲ್ಲಿ ಗ್ರಾಹಕರನ್ನು ಅಭಿರುಚಿಗೆ ತಕ್ಕಂತೆ ಮನೆಗಳನ್ನು ನಿರ್ಮಿಸಿಕೊಡುವ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಮಾಲಕ ಶಿವಪ್ರಸಾದ್ ಇಜ್ಜಾವು ತಿಳಿಸಿದ್ದಾರೆ.
ಭಕ್ತಿ ಸಂಗೀತ
ಸಂಜೆ 7 ರಿಂದ ಬೆಂಗಳೂರಿನ ವಿದುಷಿ ಮೇಧಾ ವಿದ್ಯಾಭೂಷಣ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ.









