




ಪುತ್ತೂರು: ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಪಡುಮಲೆ ಇದರ ವಾರ್ಷಿಕೋತ್ಸವ, ಚಿಣ್ಣರ ಸಂಭ್ರಮ ಉದ್ಘಾಟನಾ ಕಾರ್ಯಕ್ರಮ ಡಿ.13ರಂದು ಪೂರ್ವಾಹ್ನ, 9ಕ್ಕೆ ಶಾಲಾ ವೖೆಶಾಲಿ ಸಭಾಂಗಣದಲ್ಲಿ ನಡೆಯಲಿದೆ.



ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷೆ ವೇದಾವತಿ ಧ್ವಜಾರೋಹಣ ನೆರವೇರಿಸಲಿದ್ದಾರೆ.





ಸಭಾ ಕಾರ್ಯಕ್ರಮ
ಪ್ರಾರಂಭದಲ್ಲಿ ಎಂ.ಆರ್.ಪಿ.ಎಲ್ ವತಿಯಿಂದ ನಿರ್ಮಾಣಗೊಂಡ ನೂತನ ಶೌಚಾಲಯ ಉದ್ಘಾಟನೆ ಮಾಡಲಿದ್ದಾರೆ. ಸಭಾ ಕಾರ್ಯಕ್ರಮವನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ದೀಪ ಪ್ರಜ್ವಲಿಸಿ, ನೂತನ ಶೌಚಾಲಯ ಕೊಠಡಿ ಉದ್ಘಾಟನೆ ಮಾಡಲಿದ್ದಾರೆ.
ಸಭಾ ಕಾರ್ಯಕ್ರಮವು ಬಡಗನ್ನೂರು ಗ್ರಾ.ಪಂ. ಅಧ್ಯಕ್ಷೆ ಪುಷ್ಪಲತಾ ದೇವಕಜೆ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಗೌರವ ಉಪಸ್ಥಿತರಾಗಿ ಮಂಗಳೂರು (HR) MRPLONGC ಗ್ರೂಪ್ ಜನರಲ್ ಮ್ಯಾನೇಜರ್ ಶ್ರೀಕೃಷ್ಣ ಹೆಗ್ಡೆ ಮೀಯಾರು ಭಾಗವಹಿಸಲಿದ್ದಾರೆ.
ಅತಿಥಿಗಳಾಗಿ ಬಡಗನ್ನೂರು ಗ್ರಾ.ಪಂ. ಸದಸ್ಯರಾದ ರವಿರಾಜ್ ರೈ ಸಜಂಕಾಡಿ, ಕಲಾವತಿ ಎಸ್. ಗೌಡ ಪಟ್ಲಡ್ಕ, ಕುಮಾರ್ ಅಂಬಟೆಮೂಲೆ, ಶ್ರೀಮತಿ ಕನ್ನಡ್ಕ, ಜ್ಯೋತಿ ಅಂಬಟೆಮೂಲೆ ಭಾಗವಹಿಸಲಿದ್ದಾರೆ.
ಬಹುಮಾನ ವಿತರಣೆ
ಬಹುಮಾನ ವಿತರಣಾ ಕಾರ್ಯಕ್ರಮವು ಬಡಗನ್ನೂರು ಗ್ರಾ.ಪಂ. ಉಪಾಧ್ಯಕ್ಷೆ ಸುಶೀಲ ಪಕ್ಯೊಡ್ ನಡೆಸಿ ಕೊಡಲಿದ್ದಾರೆ. ಅತಿಥಿಗಳಾಗಿ, ಪಡುಮಲೆ ಶಾಲಾ ನಿವೃತ್ತ ಮುಖ್ಯ ಗುರು ನಾರಾಯಣ ಪಾಟಾಳಿ ಪಟ್ಟೆ, ಮಣಿಪಾಲ ಮಾಧವ ಕೃಪಾ ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತ್ ಪಿ.ಎಸ್ ಸೋಣಂಗೇರಿ, ಪಡುಮಲೆ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶುಭಶಂಕರ, ಹಿರಿಯ ವಿದ್ಯಾರ್ಥಿ ರವಿರಾಜ ಗೌಡ ಸಾರಕೂಟೇಲು ಭಂಡಾರತ್ತಡ್ಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮಾಜಿ ಅಧ್ಯಕ್ಷ ಗಣೇಶ್ ಕುಮಾರ್ ಪಾದೆಕರ್ಯ, ಎಸ್. ಡಿ. ಎಂ. ಸಿ.ಉಪಾಧ್ಯಕ್ಷೆ ಸುಮಲತಾ ಪಿ.ಎ., ಪಡುಮಲೆ ಅಂಗನವಾಡಿ ಕಾರ್ಯಕರ್ತೆ ವೀಣಾ, ಭಂಡಾರತ್ತಡ್ಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಉಪಾಧ್ಯಕ್ಷ ವಿಜಯ ಸೋಣಂಗೇರಿ, ಹಿರಿಯ ವಿದ್ಯಾರ್ಥಿ ವಿನಯರಾಜ್ ಎಸ್. ಸಾರಕೂಟೇಲು, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಹೇಮಲತಾ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಎಂದು ಶಾಲಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.






