




ಪುತ್ತೂರು: ಹೊಟೇಲ್ ಉದ್ಯಮದಲ್ಲೇ ಪುತ್ತೂರಿಗೆ ಹೊಸತನವನ್ನು ಪರಿಚಯಿಸಿದ ಪ್ರಾರ್ಥನಾ ಗಾರ್ಡನ್ ವೆಜ್ ರೆಸ್ಟೋರೆಂಟ್ ಡಿ.12ರಂದು ಬೊಳುವಾರು ಬೈಪಾಸ್ನಲ್ಲಿ ಶುಭಾರಂಭಗೊಂಡಿತು.




ನೂತನ ರೆಸ್ಟೋರೆಂಟ್ನ್ನು ಜಿ.ಎಲ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಬಲರಾಮ ಆಚಾರ್ಯ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ಬಹುಮುಖ ಪ್ರತಿಭೆ ಅದಿತಿ ಅಡುಗೆ ವಿಭಾಗವನ್ನು ಉದ್ಘಾಟಿಸಿದರು. ಮ್ಹಾಲಕ ದ್ರುವ ಪ್ರಭು ಅವರ ತಂದೆ ರಘುವೀರ ಪ್ರಭು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಜಿ.ಎಲ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಬಲರಾಮ ಆಚಾರ್ಯ ಮಾತನಾಡಿ, ಹೊಟೇಲ್ ಉದ್ಯಮವನ್ನು ವಿನೂತನ ರೀತಿಯಲ್ಲಿ ಪ್ರಾರಂಭಿಸಿ ಹೊಸ ಹೊಟೇಲ್ ಉದ್ಯಮದಲ್ಲಿ ಪರಿಕಲ್ಪಣೆಯನ್ನು ಪುತ್ತೂರಿಗೆ ನೀಡಿದ್ದಾರೆ. ವಾಹನ ಪಾರ್ಕಿಂಗ್ಗೆ ಸಾಕಷ್ಟು ಸ್ಥಳಾವಕಾಶವಿದ್ದು ಪಾರ್ಕಿಂಗ್ಗೆ ಸಮಸ್ಯೆ ಇಲ್ಲದಂತೆ ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ. ರಘುವೀರ್ ಪ್ರಭುಗಳ ಮ್ಹಾಲಕತ್ವದಲ್ಲಿ ನಿರ್ಮಾಣಗೊಂಡಿರುವ ಈ ಸಂಸ್ಥೆಯ ಯಶಸ್ಸಿನತ್ತ ಸಾಗಲಿ ಎಂದು ಹಾರೈಸಿದರು.






ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ ಆರ್ ಪೂಜಾರಿ ಮಾತನಾಡಿ, ಜಿಲ್ಲೆಯಲ್ಲಿಯೇ ಬಹಳ ಸುಂದರ ಹಾಗೂ ಸುಸಜ್ಜಿತ ಹೊಟೇಲ್ ರಘುವೀರ ಪ್ರಭು ಅವರ ಕುಟುಂಬದವರು ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ದ್ರುವ ಪ್ರಭು ಅವರು ಸಿವಿಲ್ ಇಂಜಿನಿಯರ್ ಅಗಿ ಪುತ್ತೂರಿನ ಬೆಳವಣಿಗೆಗೆ ಅವಶ್ಯಕತೆಯನ್ನು ಮನಗಂಡು ಹೊಸ ಪ್ರಯತ್ನಕ್ಕೆ ಇಳಿದ್ದು ಇದರಲ್ಲಿ ಯಶಸ್ಸು ಕಾಣಲಿದೆ. ಇವರ ಸಾಧನೆ ಯುವಕರಿಗೆ ಸ್ಪೂರ್ತಿಯಾಗಲಿ ಎಂದು ಹೇಳಿದರು.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ವೇಗವಾಗಿ ಬೆಳೆಯುತ್ತಿರುವ ಪುತ್ತೂರಿಗೆ ಇಂತಹ ಸಂಸ್ಥೆಯ ಅಗತ್ಯತೆಯನ್ನು ಮನಗಂಡು ಅದನ್ನು ಪೂರೈಸಿದ್ದಾರೆ. ಬೆಂಗಳೂರು ಮಾದರಿಯಲ್ಲಿ ಸರ್ವ ಸುಸಜ್ಜಿತವಾಗಿ ಪ್ರಾರಂಭಗೊಂಡಿರುವ ಪ್ರಾರ್ಥನಾ ಗಾರ್ಡನ್ ಪುತ್ತೂರಿನಲ್ಲಿ ಯಶಸ್ಸು ಕಾಣಬೇಕು ಎಂಬುದು ನಮ್ಮೆಲ್ಲರ ಪ್ರಾರ್ಥನೆಯಾಗಿದೆ ಎಂದರು.

ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ದ.ಕ ಜಿಲ್ಲೆಯು ಕಂಬಳ ಹಾಗೂ ಹೊಟೇಲ್ ಉದ್ಯಮಕ್ಕೆ ಜನಪ್ರೀಯತೆ ಗಳಿಸಿದೆ. ವಿನೂತನ ಮಾದರಿಯಲ್ಲಿ ಪ್ರಾರಂಭಗೊಂಡಿರುವ ಪ್ರಾರ್ಥನಾ ಗಾರ್ಡನ್ ರೆಸ್ಟೋರೆಂಟ್ ಪುತ್ತೂರಿನ ಹೊಟೇಲ್ ಉದ್ಯಮಕ್ಕೆ ಮತ್ತೊಂದು ಕಿರೀಟ ಲೋಕಾರ್ಪಣೆಯಾಗಿದೆ. ನೂತನ ಹೊಟೇಲ್ ಮುಖಾಂತರ ಪುತ್ತೂರಿ ಜನತೆಗೆ ಉತ್ತಮ ಸೇವೆ ದೊರೆಯಲಿ ಎಂದು ಹೇಳಿದರು.
ವಿಜಯ ಸಾಮ್ರಾಟ್ನ ಸಂಸ್ಥಾಪಕ ಸಹಜ್ ರೈ ಬಳೆಜ್ಜ ಮಾತನಾಡಿ, ಮಂಗಳೂರು ಹೊರತು ಪಡಿಸಿದರೆ ಅತೀ ಹೆಚ್ಚು ಜನಸಂಖ್ಯೆ ಇರುವ ಪುತ್ತೂರಿಗೆ ರಘುವೀರ ಪ್ರಭು ಕುಟುಂಬದವರು ದೊಡ್ಡ ಕೊಡುಗೆ ನೀಡಿದ್ದಾರೆ. ಇದು ಕರಾವಳಿ ಭಾಗದಲ್ಲಿಯೇ ಅತ್ಯುತ್ತಮ ಹೊಟೇಲ್ ಉದ್ಯಮವಾಗಿ ಬೆಳೆಯಲಿ ಎಂದು ಹಾರೈಸಿದರು.
ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ಪುತ್ತೂರು ನಗರದ ಹೆಬ್ಬಾಗಿಲಿನಲ್ಲಿ ಪ್ರಾರಂಭಗೊಂಡಿರು ಪ್ರಾರ್ಥನಾ ಗಾರ್ಡನ್ ರೆಸ್ಟೋರೆಂಟ್ ಪುತ್ತೂರಿಗೆ ಹೊಸತನ ಪರಿಚಯಿಸುವ ಜೊತೆಗೆ ಹಲವು ಮಂದಿಗೆ ಉದ್ಯೋಗ ನೀಡುವ ಮೂಲಕ ಕುಲಕ್ಕೆ ಪ್ರಯೋಜನಕಾರಿಯಾಗಿದೆ ಎಂದರು.
ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಜಯ ಕುಮಾರ್ ಸೊರಕೆ, ಅಕ್ಷಯ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಜಯಂತ ನಡುಬೈಲು, ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಪ್ರಮೋದ್ ಕುಮಾರ್ ಮಾತನಾಡಿ ಶುಭಹಾರೈಸಿದರು. ನರಿಮೊಗರು ಸುವರ್ಣ ಎಸ್ಟೇಟ್ನ ವೇದನಾಥ ಸುವರ್ಣ, ಉದ್ಯಮಿ ಪ್ರಸಾದ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ
ವಿನೂತನ ಪರಿಕಲ್ಪನೆಯೊಂದಿಗೆ ಸುಸಜ್ಜಿತವಾಗಿ ರೆಸ್ಟೋರೆಂಟ್ ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಂಸ್ಥೆಯ ವ್ಯವಸ್ಥಾಪಕ ರವಿರಾಜ ರೈ ಸಾಂತ್ಯಗುತ್ತು ಇವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಉದ್ಯಮಿ ಪ್ರಸನ್ನ ಕುಮಾರ್ ಶೆಟ್ಟಿ ಸಾಮೆತ್ತಡ್ಕ, ಉತ್ತಮ ಮೆಡಿಕಲ್ನ ಕೆ.ಎಂ ಶರ್ಮ, ಪೂಡಾ ಸದಸ್ಯರಾದ ಲ್ಯಾನ್ಸಿ ಮಸ್ಕರೇನಸ್, ಅನ್ವರ್ ಖಾಸಿಂ, ಶೇಖರ್ ನಾರಾವಿ, ರಾಯಲ್ ಫರ್ನಿಚರ್ ರಹೀಮ್ ಸೇರಿದಂತೆ ಹಲವು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮ್ಹಾಲಕ ಧ್ರುವ ಪ್ರಭು, ಶ್ರದ್ಧಾ ಪ್ರಭು ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಸೌಮ್ಯ ಕೋಟ್ಯಾನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶುಭಾರಂಭದ ಅಂಗವಾಗಿ ಬೆಳಿಗ್ಗೆ ಗಣಹೋಮ, ಸತ್ಯನಾರಾಯಣ ಪೂಜೆಗಳು ನೆರೆವೇರಿತು. ಸಭಾ ಕಾರ್ಯಕ್ರಮದ ಬಳಿಕ ಸಹ ಭೋಜನ ನೆರವೇರಿತು.
ಸೋಮವಾರದಿಂದ ಪೂರ್ಣಪ್ರಮಾಣದ ಸೇವೆಯಲ್ಲಿ
ನೂತನ ವೆಜ್ ರೆಸ್ಟೋರೆಂಟ್ ಶುಭಾರಂಭಗೊಂಡಿದೆ. ಸಕಲ ಸಿದ್ದತೆಗಳೊಂದಿಗೆ ಡಿ.15ರಿಂದ ರೆಸ್ಟೋರೆಂಟ್ ಪೂರ್ಣ ಪ್ರಮಾಣದಲ್ಲಿ ಗ್ರಾಹಕರಿಗೆ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಪ್ರಾರ್ಥನದ ವೈಶಿಷ್ಠ್ಯತೆಗಳು…!
ಸುಮಾರು ಒಂದೂವರೆ ಎಕರೆ ವಿಶಾಲಾ ಪ್ರದೇಶದಲ್ಲಿರುವ ರೆಸ್ಟೋರೆಂಟ್ನಲ್ಲಿ ಸುಮಾರು ೫೦೦೦ ಚದರ ಅಡಿ ವಿಸ್ತೀರ್ಣದಲ್ಲಿ ನೆಲಅಂತಸ್ಥಿನ ಕಟ್ಟಡವಿದೆ. ಆಕರ್ಷಕ ಗಾರ್ಡನ್, ಸುತ್ತ ಇಂಟರ್ಲಾಕ್ ಅಳವಡಿಸಿದ ವಿಶಾಲವಾದ ವಾಹನ್ ಪಾರ್ಕಿಂಗ್ ಸೌಲಭ್ಯ, ವಿಶಾಲವಾದ ಎಸಿ, ನಾನ್ ಎಸಿ ಪ್ರತ್ಯೇಕ ಕೊಠಡಿಗಳು, ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ವಿಶಾಲವಾದ ಅಡುಗೆ ಕೊಠಡಿ, ಸ್ಟಾರ್ ಹೊಟೇಲ್ಗಳಲ್ಲಿ ಅಡುಗೆ ಮಾಡಿದ ಅನುಭವ ಹೊಂದಿರುವ ನುರಿತ ಪಾಕ ತಜ್ಞರು, ಪ್ರವಾಸಿಗರಿಗೆ ಅನುಕೂಲವಾಗುವಂತೆ ವಾಹನದಲ್ಲಿ ಕುಳಿತಲ್ಲಿಗೆ ಉಪಾಹಾರಗಳ ಸೇವೆ, ವಿಶಾಲವಾದ ಗಾರ್ಡನ್ನಲ್ಲಿ ಸಂಜೆ ವೇಳೆಗೆ ಕುಟುಂಬಸ್ಥರೊಂದಿಗೆ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಾ ಉಪಾಹಾರ ಸವಿಯಬಹುದು. ಆಕರ್ಷಕ ಜಲಪಾತವಿದ್ದು ಗಾರ್ಡನ್ನಲ್ಲಿ ಖಾದ್ಯಗಳನ್ನು ಸವಿಯುತ್ತಾ ಸೆಲ್ಫೀ ಫೋಟೋಗೆ ತೆಗೆದುಕೊಳ್ಳಬಹುದು. ಗಾರ್ಡನ್ ಸುತ್ತ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಕಂಗೋಳಿಸುತ್ತಾ ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತಿದೆ. ಹೋಟೆಲ್ನ ಜೊತೆಗೆ ಶುಭ, ಸಭೆ ಸಮಾರಂಭಗಳಿಗೆ ಅನುಕೂಲವಾಗುವಂತೆ ಆಕರ್ಷಣೀಯವಾದ ಗಾರ್ಡನ್ನಲ್ಲಿ ಓಪನ್ ಏರ್ ಥಿಯೇಟರ್ ಹಾಗೂ ಶುಭ ಸಮಾರಂಭಗಳಿಗೆ ಕ್ಯಾಟರಿಂಗ್ ಸೌಲಭ್ಯವನ್ನು ಹೊಂದಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.








