ಪುತ್ತೂರು ತಾಲೂಕು ಗಾಣಿಗ ಯಾನೆ ಸಫಲಿಗರ ಸಂಘ ಪುತ್ತೂರು ಇದರ ವಲಯ ಮಟ್ಟದ ಸಭೆ, ಮಾತೃ ಸಮಿತಿ ರಚನೆ

0

ಪುತ್ತೂರು: ಪುತ್ತೂರು ತಾಲೂಕು ಗಾಣಿಗ ಯಾನೆ ಸಫಲಿಗರ ಸಂಘ ಪುತ್ತೂರು ಇದರ ತಾಲೂಕು ಮಟ್ಟದ ವಲಯ ಸಮಿತಿ ಸಭೆಯು ಡಿ.11ರಂದು ರಾತ್ರಿ ಕಲ್ಲೇಗ ಭಾರತ್ ಮಾತಾ ಸಮುದಾಯ ಭವನದ ಆವರಣದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಲಕ್ಷ್ಮೀ ಪ್ರಸಾದ್ ಬೆಟ್ಟರವರ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ಬಾರಿ ಪುತ್ತೂರಿನಲ್ಲಿ ಪ್ರಪ್ರಥಮ ಬಾರಿಗೆ ಗಾಣಿಗ ಸಮಾವೇಶ ಮಾಡುವ ಕುರಿತು ತೀರ್ಮಾನಿಸಲಾಗಿದ್ದು, ಅದಕ್ಕೆ ಪೂರಕವಾಗಿ ಪುತ್ತೂರಿನ ಪ್ರತಿ ವಲಯದಲ್ಲಿ ಗಾಣಿಗ ಸಮಾಜವರನ್ನು ಒಟ್ಟುಗೂಡಿಸಿ ಸಮಾವೇಶವನ್ನು ಶಿಸ್ತುಬದ್ಧವಾಗಿ ನಡೆಸಬೇಕೆಂದು ಸಭೆಯಲ್ಲಿ ಅಭಿಪ್ರಾಯ ಕೇಳಿದರು.

ಬಳಿಕ ಪುತ್ತೂರು ವಲಯ, ಮಹಿಳಾ ಮಾತೃ ಮಂಡಳಿ ಸಮಿತಿ ರಚನೆ ಮಾಡಲಾಯಿತು. ಮಾತೃ ಸಮಿತಿಯ ಅಧ್ಯಕ್ಷೆಯಾಗಿ ರಮಣಿ ಗಾಣಿಗ ಕುಂಜಾರು, ಉಪಾಧ್ಯಕ್ಷೆ ವನಿತಾ ಕೆ.ಟಿ ಉರ್ಲಾಂಡಿ, ರೂಪ ಶ್ರೀನಿವಾಸ್, ಕಾರ್ಯದರ್ಶಿ ಸುನಿತಾ ನಗರ, ವಿಜಯಲಕ್ಷ್ಮಿ ನೆಲ್ಲಿಕಟ್ಟೆ, ಜತೆ ಕಾರ್ಯದರ್ಶಿ ಗುಲಾಬಿ ಯೋಗೀಶ್ ಕಂಬಳಕೋಡಿ, ಶ್ವೇತಾ ನಾಗೇಶ್, ಕೋಶಾಧಿಕಾರಿ ಮಮತಾ ಸಂದೇಶ್, ಜಯಶ್ರೀರವರನ್ನು ಆಯ್ಕೆ ಮಾಡಲಾಯಿತು.

ಪುತ್ತೂರು ಸಮಿತಿಗೆ ಒಳಪಟ್ಟಂತೆ ಮೂರು ವಲಯ ಸಮಿತಿ ರಚನೆ ಮಾಡಲಾಗಿದ್ದು ಅದರಲ್ಲಿ ಕೆದಿಲ, ವಾಲ್ತಾಜೆ, ಪಡ್ನೂರು, ಕುಂಜಾರು ಸಮಿತಿ ಒಟ್ಟು ಸೇರಿಸಿ ಒಂದು ವಲಯ ಮಾಡಿ ಅದರಲ್ಲಿ ಅಧ್ಯಕ್ಷರಾಗಿ ಉಮೇಶ್ ಕುಂಜಾರು, ಪ್ರ.ಕಾರ್ಯದರ್ಶಿ ಹರೀಶ್ ವಾಲ್ತಾಜೆ, ಉಪಾಧ್ಯಕ್ಷ ಅಶೋಕ್ ಪಡ್ನೂರುರವರನ್ನು ಆಯ್ಕೆ ಮಾಡಿ ಪದೆಂಜಾರು, ಕಬಕ, ಕೋಲ್ಪೆ, ಮಿತ್ತೂರು, ಕೊಡಿಪಾಡಿ ಸಮಿತಿ ಒಟ್ಟು ಸೇರಿಸಿ ಒಂದು ವಲಯ ಮಾಡಿ ಅದರಲ್ಲಿ ಅಧ್ಯಕ್ಷರಾಗಿ ರಮೇಶ್ ಪದೆಂಜಾರು, ಕಾರ್ಯದರ್ಶಿ ಮಮತಾ ಆನಂದ್ ವಿದ್ಯಾಪುರ, ಉಪಾಧ್ಯಕ್ಷ ಶಿವರಾಜ್ ನೆಕ್ಕರೆ, ಗಿರೀಶ್ ಕೋಲ್ಪೆರವರನ್ನು ಆಯ್ಕೆ ಮಾಡಿ ಕಲ್ಲೇಗ, ಶೆವಿರೇ, ಕಾರೆಕಾಡು, ಕರ್ಮಲ ಭಾಗದಿಂದ ಒಂದು ವಲಯ ಮಾಡಿ ಅದರಲ್ಲಿ ಅಧ್ಯಕ್ಷ ಪ್ರವೀಣ್ ಕಲ್ಲೇಗ, ಕಾರ್ಯದರ್ಶಿ ತಿರುಮಲೇಶ, ಉಪಾಧ್ಯಕ್ಷ ವಸಂತ ಕಲ್ಲೇಗರವರನ್ನು ನೇಮಕ ಮಾಡಲಾಯಿತು. ಕಳೆದ ಬಾರಿ ರಚನೆಯಾದ ಪುತ್ತೂರು ಸಂಘಕ್ಕೆ ಉಪಾಧ್ಯಕ್ಷರಾಗಿ ಹೇಮಚಂದ್ರ ಬೊಳುವಾರು, ಸಂಚಾಲಕರಾಗಿ ಪ್ರಶಾಂತ್ ಮುರ, ವಿಜಯ್‌ಕುಮಾರ್ ಕೊಪ್ಪಳರವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here